ಜೊಮ್ಯಾಟೊ ನಂತರ 'ಉಬರ್ ಈಟ್ಸ್ ಆ್ಯಪ್'ನಿರ್ಬಂಧಿಸಿದ ಗ್ರಾಹಕರು

ಹಿಂದುಯೇತರ ಡೆಲಿವರಿ ಬಾಯ್ ಯಿಂದ ಗ್ರಾಹಕರೊಬ್ಬರು ಆಹಾರ ನಿರಾಕರಿಸಿದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ ಇದೀಗ ಗ್ರಾಹಕರು ಉಬರ್ ಈಟ್ಸ್ ಆ್ಯಪ್ ಆನ್ ಇನ್ ಸ್ಟಾಲ್ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ.
ಉಬರ್ ಈಟ್ಸ್ ಆ್ಯಪ್
ಉಬರ್ ಈಟ್ಸ್ ಆ್ಯಪ್
ಬೆಂಗಳೂರು: ಹಿಂದುಯೇತರ ಡೆಲಿವರಿ ಬಾಯ್ ಯಿಂದ ಗ್ರಾಹಕರೊಬ್ಬರು ಆಹಾರ ನಿರಾಕರಿಸಿದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ ಇದೀಗ ಗ್ರಾಹಕರು ಉಬರ್ ಈಟ್ಸ್ ಆ್ಯಪ್ ಆನ್ ಇನ್ ಸ್ಟಾಲ್ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ.
ಜೊಮ್ಯಾಟೊಗೆ ಬೆಂಬಲ ಸೂಚಿಸಿ ಉಬರ್ ಈಟ್ಸ್ ಮಾಡಿದ ಟ್ವೀಟ್ ಇದಕ್ಕೆ ಕಾರಣವಾಗಿದೆ. ಹಿಂದುಯೇತರ ಡೆಲಿವರಿ ಬಾಯ್ ಯಿಂದ ಆಹಾರ ನಿರಾಕರಿಸಿದ ಗ್ರಾಹಕನಿಗೆ  ಜೊಮ್ಯಾಟೊ ಖಡಕ್ ಉತ್ತರ ನೀಡಿತ್ತು. 
ಈ ಪ್ರತಿಕ್ರಿಯೆಯನ್ನು ಬೆಂಬಲಿಸಿ '' ಜೊಮ್ಯಾಟೊ ನಾವು ನಿಮ್ಮೊಂದಿಗೆ ನಿಲುತ್ತೇವೆ''  ಹಿಂದಿನವರ ಆಹಾರಕ್ಕೆ ಧರ್ಮವಿಲ್ಲ, ಆಹಾರ ಧರ್ಮ ಎಂದು ಉಬರ್ ಈಟ್ಸ್ ಟ್ವೀಟ್ ಮಾಡಿತ್ತು. ಇದಕ್ಕೆ  ಅಪ್ಪುಗೆಯ ಎಮೊಜಿಯೊಂದಿಗೆ ಜೊಮ್ಯಾಟೊ ಪ್ರತಿಕ್ರಿಯೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com