ವಿಜಿ ಸಿದ್ದಾರ್ಥ ಸಾವು: ಕೆಫೆ ಕಾಫಿ ಡೇ ಷೇರು ಭಾರೀ ಕುಸಿತ; ಬರೋಬ್ಬರಿ 1.724 ಕೋಟಿ ನಷ್ಟ!

ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ ಅವರ ನಿಧನ ಹಿನ್ನೆಲೆಯಲ್ಲಿ ಕೆಫೆ ಕಾಫಿ ಡೇ ಷೇರು ಪ್ರಪಾತಕ್ಕೆ ಕುಸಿದಿದ್ದು ಬರೋಬ್ಬರಿ 1.724 ಕೋಟಿ ರುಪಾಯಿ ನಷ್ಟವಾಗಿದೆ.
ವಿಜಿ ಸಿದ್ಧಾರ್ಥ-ಷೇರು
ವಿಜಿ ಸಿದ್ಧಾರ್ಥ-ಷೇರು
ಮುಂಬೈ: ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ ಅವರ ನಿಧನ ಹಿನ್ನೆಲೆಯಲ್ಲಿ ಕೆಫೆ ಕಾಫಿ ಡೇ ಷೇರು ಪ್ರಪಾತಕ್ಕೆ ಕುಸಿದಿದ್ದು ಬರೋಬ್ಬರಿ 1.724 ಕೋಟಿ ರುಪಾಯಿ ನಷ್ಟವಾಗಿದೆ.
ವಿಜಿ ಸಿದ್ದಾರ್ಥ ಕಾಣಿಯಾಗಿದ್ದಾರೆ ಎಂಬ ವಿಚಾರ ಮಂಗಳವಾರದಿಂದ ದೇಶಾದ್ಯಂತ ಸುದ್ದಿ ಮಾಡಿತ್ತು. ಅಂದಿನಿಂದಲೇ ಕೆಫೆ ಕಾಫಿ ಡೇ ಷೇರು ಕುಸಿಯುತ್ತಾ ಬಂದಿದ್ದು ಮೂರೇ ದಿನದಲ್ಲಿ ಶೇಕಡ 42ರಷ್ಟು ಷೇರು ಕುಸಿದಿದ್ದು ಹೂಡಿಕೆದಾರರಿಗೆ ಬರೋಬ್ಬರಿ 1.724 ಕೋಟಿ ರುಪಾಯಿ ನಷ್ಟವಾಗಿದೆ.
ಜುಲೈ 29ರಂದು 4,067 ಕೋಟಿ ರುಪಾಯಿ ಮೌಲ್ಯ ಹೊಂದಿದ್ದ ಕೆಫೆ ಕಾಫಿ ಡೇ ಇಂದು 2,343 ಕೋಟಿ ರುಪಾಯಿಗೆ ಬಂದು ನಿಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com