ವಿಶ್ವದ ಅತಿ ದೊಡ್ಡ ಆರ್ಥಿಕತೆ: 6 ರಿಂದ 7 ನೇ ಸ್ಥಾನಕ್ಕೆ ಕುಸಿದ ಭಾರತ!

2018 ನೇ ಸಾಲಿನಲ್ಲಿ ಭಾರತ ವಿಶ್ವದ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 7 ನೇ ಸ್ಥಾನಕ್ಕೆ ಕುಸಿದಿದೆ.
ವಿಶ್ವದ ಅತಿ ದೊಡ್ಡ ಆರ್ಥಿಕತೆ:  6 ರಿಂದ 7 ನೇ ಸ್ಥಾನಕ್ಕೆ ಕುಸಿದ ಭಾರತ!
ವಿಶ್ವದ ಅತಿ ದೊಡ್ಡ ಆರ್ಥಿಕತೆ: 6 ರಿಂದ 7 ನೇ ಸ್ಥಾನಕ್ಕೆ ಕುಸಿದ ಭಾರತ!
ನವದೆಹಲಿ: 2018 ನೇ ಸಾಲಿನಲ್ಲಿ ಭಾರತ ವಿಶ್ವದ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 7 ನೇ ಸ್ಥಾನಕ್ಕೆ ಕುಸಿದಿದೆ. 
2017 ರಲ್ಲಿ ಭಾರತ 6 ನೇ ಸ್ಥಾನ ಗಳಿಸಿ ಫ್ರಾನ್ಸ್ ನ್ನು ಹಿಂದಿಕ್ಕಿತ್ತು. ಈಗ ಬ್ರಿಟನ್ ಮತ್ತು ಫ್ರಾನ್ಸ್ ಬಹುತೇಕ ಒಂದೇ ಸಮನಾದ ಆರ್ಥಿಕ ಬೆಳವಣಿಗೆ ಹೊಂದಿದ್ದು, ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿವೆ. 
ವಿಶ್ವಬ್ಯಾಂಕ್ ನ ವರದಿಯ ಪ್ರಕಾರ ಜಿಡಿಪಿ ಶ್ರೇಣಿಯಲ್ಲಿ ಭಾರತ ಈ ವರ್ಷ ಕುಸಿತ ಕಂಡಿದ್ದು, 2017 ರಲ್ಲಿ ಭಾರತದ ಜಿಡಿಪಿ 2.65 ಟ್ರಿಲಿಯನ್ ಡಾಲರ್ ನಿಂದ 2018 ರಲ್ಲಿ 2.7 ಟ್ರಿಲಿಯನ್ ಡಾಲರ್ ಗೆ ಕುಸಿದಿದೆ.
2018 ರಲ್ಲಿ ಅಮೆರಿಕ ಜಿಡಿಪಿ 20.5 ಟ್ರಿಲಿಯನ್ ಡಾಲರ್ ನಷ್ಟಿದ್ದರೆ, 13.6 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ಚೀನಾ ಎರಡನೇ ಸ್ಥಾನದಲ್ಲಿದೆ. ಭಾರತದ ಸಾರ್ವಕಾಲಿಕ ಮಿತ್ರ ರಾಷ್ಟ್ರ ಎಂದೇ ಗುರುತಿಸಿಕೊಳ್ಳುವ ಜಪಾನ್ 5 ಟ್ರಿಲಿಯನ್ ಡಾಲರ್ ನೊಂದಿಗೆ 3 ನೇ ಸ್ಥಾನದಲ್ಲಿದೆ. ಬ್ರಿಟನ್ ಮತ್ತೆ ಫ್ರಾನ್ಸ್ 2.8 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿವೆ. 
2018 ರಲ್ಲಿ ಭಾರತ ಜಿಡಿಪಿ ಕುಸಿದಿರುವುದಕ್ಕೆ ಕರೆನ್ಸಿ ಏರಿಳಿತ ಹಾಗೂ ಬೆಳವಣಿಗೆ ನಿಧಾನಗತಿಯಾಗಿರುವುದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಆದಾಗ್ಯೂ ಭಾರತ ವಿಶ್ವದಲ್ಲಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ಆರ್ಥಿಕತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com