ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು: 37 ಸಾವಿರಕ್ಕಿಂತ ಕೆಳಗಿಳಿದ ಸೆನ್ಸೆಕ್ಸ್

ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ವಹಿವಾಟಿನ ಅಂತ್ಯಕ್ಕೆ 418 ಅಂಕ ಕುಸಿದು 37 ಸಾವಿರಕ್ಕಿಂತ ಕಡಿಮೆ ಮಟ್ಟ ತಲುಪಿದೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು: 37 ಸಾವಿರಕ್ಕಿಂತ ಕೆಳಗಿಳಿದ ಸೆನ್ಸೆಕ್ಸ್
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು: 37 ಸಾವಿರಕ್ಕಿಂತ ಕೆಳಗಿಳಿದ ಸೆನ್ಸೆಕ್ಸ್
ಮುಂಬೈ: ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ವಹಿವಾಟಿನ ಅಂತ್ಯಕ್ಕೆ 418 ಅಂಕ ಕುಸಿದು 37 ಸಾವಿರಕ್ಕಿಂತ ಕಡಿಮೆ ಮಟ್ಟ ತಲುಪಿದೆ.
ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಅಸ್ಥಿರತೆ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 418.38 ಅಂಕ ಇಳಿಕೆ ಕಂಡು 36,699.84 ರಲ್ಲಿ ವಹಿವಾಟು ಅಂತ್ಯಗೊಳಿಸಿತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 134.75 ಅಂಕ ಇಳಿಕೆ ಕಂಡು 10,862.90 ಯಲ್ಲಿತ್ತು.
ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಕೋಲಾಹಲದ ನಡುವೆಯೂ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಅನ್ನು ರದ್ದುಪಡಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ವಿಧೇಯಕವನ್ನು ಅಂಗೀಕರಿಸಿತು. ಈ ರಾಜಕೀಯ ಅಸ್ಥಿರತೆಯ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ನಕಾರಾತ್ಮಕತೆ ಕಂಡು ಬಂದಿದೆ.
ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 10,895.80 ಮತ್ತು 10,782.60.
ಬಿಎಸ್‌ಇ ಅಡಿ 736 ಕಂಪೆನಿ ಷೇರುಗಳ ಮೌಲ್ಯ ಏರಿಕೆ ಕಂಡರೆ 1,685 ಷೇರುಗಳ ಮೌಲ್ಯ ಇಳಿಕೆ ಕಂಡಿತು. 142 ಕಂಪೆನಿ ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು.
ಯುರೋಪಿಯನ್ ಷೇರುಗಳು ಕಡಿಮೆ ವಹಿವಾಟು ಕಂಡರೆ, ಅಮೆರಿಕ – ಚೀನಾ ನಡುವಿನ ವ್ಯಾಪಾರ ಸಂಘರ್ಷದ ಪರಿಣಾಮ ಅಮೆರಿಕದ ಷೇರುಗಳೂ ಕಡಿಮೆ ವಹಿವಾಟು ಕಂಡಿವೆ. ಉಭಯ ದೇಶಗಳ ನಡುವಿನ ವ್ಯಾಪಾರ ಸಮರ ಹೂಡಿಕೆದಾರರಲ್ಲಿ ಆತಂಕ ತರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com