ಐಆರ್ ಸಿಟಿಸಿ ಇ-ಏಟಿಕೆಟ್ ಗೆ ಮತ್ತೆ ಬರಲಿದೆ ಸೇವಾ ಶುಲ್ಕ: ಇಲ್ಲಿದೆ ವಿವರ

ಐಆರ್ ಸಿಟಿಸಿಯಿಂದ ತೆಗೆದುಕೊಳ್ಳುವ ಇ-ಟಿಕೆಟ್ ಗಳ ದರ ಏರಿಕೆಯಾಗಲಿದೆ.
ಐಆರ್ ಸಿಟಿಸಿ ಇ-ಏಟಿಕೆಟ್ ಗೆ ಮತ್ತೆ ಬರಲಿದೆ ಸೇವಾ ಶುಲ್ಕ: ಇಲ್ಲಿದೆ ವಿವರ
ಐಆರ್ ಸಿಟಿಸಿ ಇ-ಏಟಿಕೆಟ್ ಗೆ ಮತ್ತೆ ಬರಲಿದೆ ಸೇವಾ ಶುಲ್ಕ: ಇಲ್ಲಿದೆ ವಿವರ
ನವದೆಹಲಿ: ಐಆರ್ ಸಿಟಿಸಿಯಿಂದ ತೆಗೆದುಕೊಳ್ಳುವ ಇ-ಟಿಕೆಟ್ ಗಳ ದರ ಏರಿಕೆಯಾಗಲಿದೆ. 
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಡಿಜಿಟಲ್ ಪೇಮೆಂಟ್ ಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ 
3 ವರ್ಷಗಳ ಹಿಂದೆ ಐಆರ್ ಸಿಟಿಸಿ ಇ-ಟಿಕೆಟ್ ಗಳಿಗೆ ಸೇವಾ ಶುಲ್ಕಾ ಸಂಪೂರ್ಣ ತೆಗೆದುಹಾಕಲಾಗಿತ್ತು. ಆದರೆ ಈಗ ರೈಲ್ವೆ ಮಂಡಳಿ ಈ ಶುಲ್ಕವನ್ನು ಮತ್ತೆ ವಿಧಿಸಲು ತೀರ್ಮಾನಿಸಿದೆ. 
ಸುದೀರ್ಘ ಚರ್ಚೆ ಹಾಗೂ ಅಧ್ಯಯನದ ಬಳಿಕ ರೈಲ್ವೆ ಮಂಡಳಿ ಈ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕ್ರಮದಿಂದಾಗಿ ಮುಂದಿನ ದಿನಗಳಲ್ಲಿ ಯಾರು ಆನ್ ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುತ್ತಾರೋ ಅವರ ಟಿಕೆಟ್ ಗಳಿಗೆ ಸೇವಾ ಶುಲ್ಕ ವಿಧಿಸಲಾಗುತ್ತದೆ. 
ಈ ಹಿಂದೆ ಸೇವಾ ಶುಲ್ಕ ತೆಗೆದುಹಾಕುವ ಯೋಜನೆ ತಾತ್ಕಾಲಿಕವಷ್ಟೇ, ಸೇವಾ ಶುಲ್ಕಾ ಮತ್ತೆ ವಿಧಿಸುವ ಸಾಧ್ಯತೆ ಇದೆ ಎಂದು ಹಣಕಾಸು ಸಚಿವಾಲಯ ಹೇಳಿತ್ತು. 
ಸೇವಾ ಶುಲ್ಕ ತೆಗೆದುಹಾಕಿದ ನಂತರ 2016-17  ನೇ ಸಾಲಿನಲ್ಲಿ ಐಆರ್ ಸಿಟಿಸಿಗೆ ಇಂಟರ್ ನೆಟ್ ಟಿಕೆಟ್ ಬುಕಿಂಗ್ ನಲ್ಲಿ ಬರುವ ಲಾಭ ಶೇ. 26 ರಷ್ಟು ಕುಸಿದಿತ್ತು. 
ಈ ಹಿಂದಿನ ಸೇವಾ ಶುಲ್ಕವನ್ನೇ ವಿಧಿಸುವುದೋ ಅಥವಾ ಏರಿಕೆ ಮಾಡುವುದೋ ಎಂಬುದು ಇಲಾಖೆ ಇನ್ನಷ್ಟೇ ನಿರ್ಧರಿಸಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com