ಮತ್ತೊಂದು ವಿವಾದದಲ್ಲಿ ಜೊಮ್ಯಾಟೋ: ಈ ಬಾರಿ ಸಂಸ್ಥೆಯ ಡೆಲಿ’ವರಿ’ ಬಾಯ್ ಗಳಿಂದಲೇ ಪ್ರತಿಭಟನೆ!

ಆಹಾರ ವಿತರಣ ಸಂಸ್ಥೆ ಜೊಮ್ಯಾಟೋ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ಪಶ್ಚಿಮ ಬಂಗಾಳದ ಹೌರಾದಲ್ಲಿ ಡೆಲಿವರಿ ಬಾಯ್ ಗಳೇ ಬೀದಿಗಿಳಿದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. 
ಮತ್ತೊಂದು ವಿವಾದದಲ್ಲಿ ಜೊಮ್ಯಾಟೋ: ಈ ಬಾರಿ ಸಂಸ್ಥೆಯ ಡೆಲಿ’ವರಿ’ ಬಾಯ್ ಗಳಿಂದಲೇ ಪ್ರತಿಭಟನೆ!

ಹೌರಾ: ಆಹಾರ ವಿತರಣ ಸಂಸ್ಥೆ ಜೊಮ್ಯಾಟೋ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ಪಶ್ಚಿಮ ಬಂಗಾಳದ ಹೌರಾದಲ್ಲಿ ಡೆಲಿವರಿ ಬಾಯ್ ಗಳೇ ಬೀದಿಗಿಳಿದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. 

ತಮ್ಮ ಬೇಡಿಕೆಗಳನ್ನು ಸಂಸ್ಥೆ ಪರಿಗಣಿಸುತ್ತಿಲ್ಲ ಹಾಗೂ ಬೀಫ್, ಪೋರ್ಕ್ ಗಳನ್ನು ಡೆಲಿವರಿ ನೀಡುವಂತೆ ಒತ್ತಾಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾ ನಿರತ ಡೆಲಿವರಿ ಎಕ್ಸಿಕ್ಯುಟೀವ್ ಗಳು ಆರೋಪಿಸಿದ್ದಾರೆ.  ಕಳೆದ 7 ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದು, ಎಲ್ಲಾ ಬೇಡಿಕೆಗಳು ಈಡೇರಿವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಹೇಳಿದ್ದಾರೆ. ಸರ್ಕಾರ ಜೊಮ್ಯಾಟೋ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಂಸ್ಥೆಯ ಯಾವುದೇ ನೌಕರನಿಗೆ ಆತನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಡೆಲಿವರಿ ನೀಡುವುದಕ್ಕೆ ಒತ್ತಾಯ ಮಾಡಬಾರದು, ಜೊಮ್ಯಾಟೋ ಬಗ್ಗೆ ದೂರು ಬಂದಿದ್ದು ಈ ಬಗ್ಗೆ  ಗಮನಿಸಲಾಗುವುದು ಎಂದು ಹೇಳಿದ್ದಾರೆ.

ಪೋರ್ಕ್, ಬೀಫ್ ಡೆಲಿವರಿ ನೀಡುವುದನ್ನು ನಿರಾಕರಿಸುವಂತಿಲ್ಲ, ಯಾವುದೇ ಪರಿಸ್ಥಿತಿಯಲ್ಲಿಯೂ ಆರ್ಡರ್ ನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಸಂಸ್ಥೆ ಎಚ್ಚರಿಸಿದೆ.  ಬೀಫ್ ತೆಗೆದುಕೊಂಡು ಹೋಗಿ ಡೆಲಿವರಿ ನೀಡುವ ಬ್ಯಾಗ್ ನ್ನು ಮನೆಗೂ ತೆಗೆದುಕೊಂಡುಹೋಗಬೇಕಾಗುತ್ತದೆ ಇದು ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಬಜರಂಗ್ ನಾಥ್ ವರ್ಮಾ ಹೇಳಿದ್ದಾರೆ.
 
ಇದೇ ವೇಳೆ ಮೊಹ್ಸಿನ್ ಅಖ್ತರ್ ಎಂಬ ಮತ್ತೋರ್ವ ನೌಕರ ಸಹ ಸಂಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪೋರ್ಕ್ ನ್ನು ಡೆಲಿವರಿ ನೀಡುವಂತೆ ಒತ್ತಡ ಹೇರುತ್ತಾರೆ. ಹಿಂದೂ ಗಳಿಗೂ ಬೀಫ್ ನ್ನು ಡೆಲಿವರಿ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಇದು ನಮ್ಮ ನಡುವೆ ಸಾಮರಸ್ಯ ಹಾಳುಮಾಡುತ್ತಿದೆ. ಸಂಸ್ಥೆಗೆ ಎಲ್ಲವೂ ತಿಳಿದಿದೆ ಆದರೆ ನಮಗೆ ಸಹಕಾರ ನೀಡುವ ಬದಲು ನಮ್ಮ ಮೇಲೆಯೇ ಸುಳ್ಳು ಆರೋಪ ಹೊರಿಸಲಾಗುತ್ತಿದ್ದು, ಇತ್ತೀಚೆಗೆ ಓರ್ವ ಡೆಲಿವರಿ ಬಾಯ್ ವಿರುದ್ಧ ದೂರನ್ನೂ ದಾಖಲಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com