ರಿಲಯನ್ಸ್‌ ತೈಲ ಉದ್ಯಮದಲ್ಲಿ ಶೇ.20ರಷ್ಟು ಹೂಡಿಕೆ ಮಾಡಲಿದೆ ಸೌದಿಯ ಅರಮ್ಕೊ ಕಂಪೆನಿ!

ತಮ್ಮ ರಿಲಯನ್ಸ್ ಇಂಡಸ್ಟ್ರೀಸ್ ತೈಲ ಸಂಸ್ಕರಣಾಗಾರ ಮತ್ತು ರಾಸಾಯನಿಕ ವ್ಯವಹಾರಗಳಲ್ಲಿ ಶೇಕಡಾ 20ರಷ್ಟು ಪಾಲನ್ನು ತೆಗೆದುಕೊಳ್ಳಲು ಸೌದಿಯ ತೈಲ ಕಂಪೆನಿಯಾದ ಅರಮ್ಕೊ ಮುಂದೆ ಬಂದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಉದ್ಯಮಿ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
 

Published: 12th August 2019 02:13 PM  |   Last Updated: 12th August 2019 09:25 PM   |  A+A-


Posted By : Sumana Upadhyaya
Source : PTI

ಮುಂಬೈ; ಉದ್ಯಮ ಮೌಲ್ಯ 75 ಶತಕೋಟಿ ಡಾಲರ್ ಮೊತ್ತದಲ್ಲಿ(ಸುಮಾರು 5,32,466 ಕೋಟಿ ರೂ.) ತಮ್ಮ ರಿಲಯನ್ಸ್ ಇಂಡಸ್ಟ್ರೀಸ್ ತೈಲ ಸಂಸ್ಕರಣಾಗಾರ ಮತ್ತು ರಾಸಾಯನಿಕ ವ್ಯವಹಾರಗಳಲ್ಲಿ ಶೇಕಡಾ 20ರಷ್ಟು ಪಾಲನ್ನು ತೆಗೆದುಕೊಳ್ಳಲು ಸೌದಿಯ ತೈಲ ಕಂಪೆನಿಯಾದ ಅರಮ್ಕೊ ಮುಂದೆ ಬಂದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಉದ್ಯಮಿ ಮುಕೇಶ್ ಅಂಬಾನಿ ತಿಳಿಸಿದ್ದಾರೆ.


ರಿಲಯನ್ಸ್ ಇಂಡಸ್ಟ್ರೀಸ್ ನ 42ನೇ ವಾರ್ಷಿಕ ಸಾಮಾನ್ಯ ಸಭೆ ಮುಂಬೈಯಲ್ಲಿ ಇಂದು ನಡೆಯಿತು. ಅದರಲ್ಲಿ ಈ ವಿಷಯ ತಿಳಿಸಿದ ಅವರು ಕಂಪೆನಿಯ ಇತಿಹಾಸದಲ್ಲಿ ವಿದೇಶಿ ಕಂಪೆನಿಯೊಂದು ಹೂಡಿಕೆ ಮಾಡುತ್ತಿರುವ ಅತ್ಯಂತ ದೊಡ್ಡ ಮೊತ್ತ ಇದೇ ಮೊದಲಾಗಿದೆ ಎಂದರು.


ಒಪ್ಪಂದದ ಭಾಗವಾಗಿ ಸೌದಿ ಕಂಪೆನಿ ಅರಮ್ಕೊ 5 ಲಕ್ಷ ಬ್ಯಾರಲ್ ತೈಲವನ್ನು ಪ್ರತಿದಿನ ಅಥವಾ ವರ್ಷಕ್ಕೆ 25 ದಶಲಕ್ಷ ಟನ್ ಕಚ್ಚಾ ತೈಲವನ್ನು ರಿಲಯನ್ಸ್ ನ ಅವಳಿ ತೈಲ ಸಂಸ್ಕರಣಾಗಾರವಿರುವ ಗುಜರಾತ್ ನ ಜಮ್ ನಗರಕ್ಕೆ ಪೂರೈಸಲಿದೆ ಎಂದರು.
ಉದ್ದೇಶಿತ ವಿಶೇಷ ಉದ್ದೇಶ ವಾಹನ(ಎಸ್ ಪಿವಿ) ಹೌಸಿಂಗ್ ಮತ್ತು ಘಟಕದ ಪೆಟ್ರೊಕೆಮಿಕಲ್ ಕಾಂಪ್ಲೆಕ್ಸ್ ನ ಉದ್ಯಮದಡಿಯಲ್ಲಿ ಅರಮ್ಕೊ ಕಂಪೆನಿ ಶೇಕಡಾ 20ರಷ್ಟು ಹೂಡಿಕೆ ಮಾಡಲಿದೆ.


ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುಧಾಬಿ ರಾಷ್ಟ್ರೀಯ ತೈಲ ಕಂಪೆನಿ(ಅಡ್ನೊಕ್) ಜೊತೆ ಸೇರಿ ಅರಮ್ಕೊ ಕಂಪೆನಿಯು, ಮಹಾರಾಷ್ಟ್ರ ರಾಜ್ಯ ಒಡೆತನದ ತೈಲ ಕಂಪೆನಿಗಳ ಜೊತೆ ಸೇರಿ ಶೇಕಡಾ 50ರಷ್ಟು ಹೂಡಿಕೆ ಮಾಡಿವೆ. ಇದರಿಂದ ಭಾರತದ ಇಂಧನ ಬೇಡಿಕೆಗೆ ಅನುಕೂಲವಾಗಲಿದೆ.


ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿ ಗುಜರಾತ್ ನ ಜಮ್ನ್ ಗರದಲ್ಲಿ ಎರಡು ತೈಲ ಸಂಸ್ಕರಣಾಗಾರಗಳನ್ನು ಹೊಂದಿದ್ದು ವರ್ಷಕ್ಕೆ 68.2 ದಶಲಕ್ಷ ಟನ್ ತೈಲ ಉತ್ಪತ್ತಿ ಮಾಡುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ ಸದ್ಯ ಪೆಟ್ರೊಕೆಮಿಕಲ್ ಮತ್ತು ದೂರಸಂಪರ್ಕ ಉದ್ಯಮಗಳನ್ನು ವಿಸ್ತರಿಸುವತ್ತ ಗಮನ ಹರಿಸಿದೆ.

Stay up to date on all the latest ವಾಣಿಜ್ಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp