ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ಎಟಿಎಂ ವಹಿವಾಟಿನಲ್ಲಿ ಮಹತ್ವದ ಬದಲಾವಣೆ, ಬ್ಯಾಂಕ್ ಗಳಿಗೆ ಆರ್‌ಬಿಐ ಸೂಚನೆ

ಬ್ಯಾಂಕ್ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಒಳ್ಳೆ ಸುದ್ದಿ ನೀಡಿದ್ದು, ಎಟಿಎಂ ಹಣ ವಹಿವಾಟಿನಲ್ಲಿ ಕೆಲ ಮಹತ್ವದ ಬದಲಾವಣೆ ತಂದಿದೆ. ಅಲ್ಲದೆ ಈ ಕುರಿತಂತೆ ಬ್ಯಾಂಕ್ ಗಳಿಗೂ ಸೂಚನೆ ನೀಡಿದೆ.

Published: 16th August 2019 12:38 AM  |   Last Updated: 16th August 2019 12:38 AM   |  A+A-


ATM Transactions

ಸಂಗ್ರಹ ಚಿತ್ರ

Posted By : Srinivasamurthy VN
Source : PTI

ನವದೆಹಲಿ:  ಬ್ಯಾಂಕ್ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಒಳ್ಳೆ ಸುದ್ದಿ ನೀಡಿದ್ದು, ಎಟಿಎಂ ಹಣ ವಹಿವಾಟಿನಲ್ಲಿ ಕೆಲ ಮಹತ್ವದ ಬದಲಾವಣೆ ತಂದಿದೆ. ಅಲ್ಲದೆ ಈ ಕುರಿತಂತೆ ಬ್ಯಾಂಕ್ ಗಳಿಗೂ ಸೂಚನೆ ನೀಡಿದೆ.

ಮೂಲಗಳ ಪ್ರಕಾರ, ಎಟಿಎಂ ವಹಿವಾಟಿನ ಕೆಲವು ನಿಯಮಗಳನ್ನು ಬದಲಾವಣೆ ಮಾಡುವಂತೆ ಬ್ಯಾಂಕುಗಳಿಗೆ ಆರ್‌ಬಿಐ ನಿರ್ದೇಶನ ನೀಡಿದೆ. ಆರ್ ಬಿಐ ಮೂಲಗಳ  ಪ್ರಕಾರ ತಾಂತ್ರಿಕ ಮತ್ತು ಇತರೆ ನಿರ್ದಿಷ್ಟ ಕಾರಣಗಳಿಂದಾಗಿ ವಿಫಲವಾದ ಸ್ವಯಂಚಾಲಿತ ಟೆಲ್ಲರ್ ಯಂತ್ರ (ಎಟಿಎಂ) ವಹಿವಾಟುಗಳನ್ನು 'ಐದು ಉಚಿತ ಮಾಸಿಕ ಎಟಿಎಂ ವಹಿವಾಟು'ಗಳಲ್ಲಿ ಸೇರಿಸದಂತೆ ಬ್ಯಾಂಕ್ ಗಳಿಗೆ ಸೂಚಿಸಿದೆ ಎನ್ನಲಾಗಿದೆ.

ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಆರ್ ಬಿಐ, 'ತಾಂತ್ರಿಕ ಕಾರಣಗಳಿಂದಾಗಿ ವಿಫಲವಾದ ವಹಿವಾಟುಗಳು, ಎಟಿಎಂಗಳಲ್ಲಿ ಕರೆನ್ಸಿ(ಹಣ) ಲಭ್ಯವಿಲ್ಲದಿರುವುದು ಇತ್ಯಾದಿಗಳನ್ನು ಉಚಿತ ಎಟಿಎಂ ವಹಿವಾಟಿನ ಸಂಖ್ಯೆಯಲ್ಲಿ ಸೇರಿಸಲಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಹಾರ್ಡ್‌ವೇರ್, ಸಾಫ್ಟ್‌ವೇರ್, ಸಂವಹನ ಸಮಸ್ಯೆಗಳು, ಎಟಿಎಂನಲ್ಲಿ ಹಣ ಲಭ್ಯವಿಲ್ಲದಿರುವುದು ಮತ್ತು ಬ್ಯಾಂಕ್ ಅಥವಾ ಸೇವಾ ಪೂರೈಕೆದಾರರಿಗೆ ನೇರವಾಗಿ ಅಥವಾ ಸಂಪೂರ್ಣವಾಗಿ ಸೂಚಿಸಬಹುದಾದ ಇತರ ಸಮಸ್ಯೆಗಳು ಮತ್ತು ಅಮಾನ್ಯ ಪಿನ್ ಅಥವಾ ಅನುಮೋದನೆ ಗೊಳಿಸುವಿಕೆಯಂತಹ ತಾಂತ್ರಿಕ ಕಾರಣಗಳನ್ನು ವಿಫಲವಾದ ವಹಿವಾಟುಗಳು ಈ ಉಚಿತ ವಹಿವಾಟು ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂದು ಹೇಳಿದೆ.

ಅಂತೆಯೇ ಇಂತಹ ವಹಿವಾಟುಗಳನ್ನು ಗ್ರಾಹಕರಿಗೆ ಮಾನ್ಯ ಮಾಡಿದ ಎಟಿಎಂ ವಹಿವಾಟು ಎಂದು ಪರಿಗಣಿಸಲಾಗುವುದಿಲ್ಲ. ಈ ವಿಫಲ ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ನಗದು ರಹಿತ ವಹಿವಾಟುಗಳು (ಬ್ಯಾಲೆನ್ಸ್ ವಿಚಾರಣೆ, ಚೆಕ್ ಬುಕ್ ವಿನಂತಿ, ತೆರಿಗೆಗಳ ಪಾವತಿ, ಹಣ ವರ್ಗಾವಣೆ), ಇದು ಉಚಿತ ಎಟಿಎಂ ವಹಿವಾಟಿನ ಭಾಗವಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಆರ್ ಬಿಐ ಉಲ್ಲೇಖಿಸಿದೆ.

ಇನ್ನು ನೂತನ ಬದಲಾವಣೆಗಳ ಕುರಿತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ನಗರ ಸಹಕಾರಿ ಬ್ಯಾಂಕುಗಳು, ರಾಜ್ಯ ಸಹಕಾರಿ ಬ್ಯಾಂಕುಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಪಾವತಿ ಬ್ಯಾಂಕುಗಳು, ವೈಟ್-ಲೇಬಲ್ ಎಟಿಎಂ ಆಪರೇಟರ್‌ ಗಳು ಸೇರಿದಂತೆ ಎಲ್ಲಾ ನಿಗದಿತ ವಾಣಿಜ್ಯ ಬ್ಯಾಂಕುಗಳಿಗೆ ಈ ಆದೇಶಗಳನ್ನು ನೀಡಲಾಗಿದೆ.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp