ಚಿನ್ನದ ಮೇಲಿನ ಆಮದು ಸುಂಕ ಇಳಿಕೆ ಅಸಾಧ್ಯ: ನಿರ್ಮಲಾ ಸೀತಾರಾಮನ್

ಚಿನ್ನದ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿರುವ ಸಮಯದಲ್ಲಿ, ಆಮದು ಸುಂಕವನ್ನು ಕಡಿಮೆ ಮಾಡುವ ಎಲ್ಲ ಸಾಧ್ಯತೆಯನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಳ್ಳಿಹಾಕಿದ್ದಾರೆ.
 

Published: 17th August 2019 11:25 AM  |   Last Updated: 17th August 2019 11:27 AM   |  A+A-


ನಿರ್ಮಲಾ ಸೀತಾರಾಮನ್

Posted By : Raghavendra Adiga
Source : UNI

ಅಹಮದಾಬಾದ್: ಚಿನ್ನದ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿರುವ ಸಮಯದಲ್ಲಿ, ಆಮದು ಸುಂಕವನ್ನು ಕಡಿಮೆ ಮಾಡುವ ಎಲ್ಲ ಸಾಧ್ಯತೆಯನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಳ್ಳಿಹಾಕಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೀತಾರಾಮನ್, ಮೌಲ್ಯವರ್ಧನೆಗಾಗಿ ಚಿನ್ನ ಆಮದು ಮಾಡಿಕೊಳ್ಳಲಾಗುತ್ತಿದೆ. ರಫ್ತು ಆಭರಣ ತಯಾರಿಕೆಗೆ ಸೀಮಾ ಸುಂಕವಿಲ್ಲ. ಚಿನ್ನವು ಕಚ್ಚಾ ತೈಲ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳಂತಹ ಉತ್ಪನ್ನವಲ್ಲ ಎಂದರು.

ನಾವು ಖರೀದಿಸುವ ಪ್ರತಿಯೊಂದು ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಏಕೆಂದರೆ ಅದು ಈ ದೇಶದಲ್ಲಿ ಲಭ್ಯವಿಲ್ಲ. ಅದಕ್ಕಾಗಿ ಖರ್ಚು ಮಾಡಿದ ವಿದೇಶಿ ವಿನಿಮಯದ ಪ್ರಮಾಣವನ್ನು ನೋಡಿ. ನಾವು ಅದಕ್ಕೆ ಸಹಾಯಧನ ನೀಡುವುದಲ್ಲ ಎಂದು ಅವರು ಹೇಳಿದರು.

Stay up to date on all the latest ವಾಣಿಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp