ಆರ್ಥಿಕ ಕುಸಿತ ಆತಂಕಕಾರಿ, ಹೊಸ ಸುಧಾರಣೆಗಳು ಅಗತ್ಯ: ರಘುರಾಮ್ ರಾಜನ್ 

ಆರ್ಥಿಕ ಕುಸಿತ ಅಥವಾ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿರುವುದು ಆತಂಕಕಾರಿ, ಇಂಧನ ಹಾಗೂ ಬ್ಯಾಂಕ್ ಯೇತರ ಆರ್ಥಿಕ... 
ರಘುರಾಮ್ ರಾಜನ್
ರಘುರಾಮ್ ರಾಜನ್

ಆರ್ಥಿಕ ಕುಸಿತ ಅಥವಾ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿರುವುದು ಆತಂಕಕಾರಿ, ಇಂಧನ ಹಾಗೂ ಬ್ಯಾಂಕ್ ಯೇತರ ಆರ್ಥಿಕ ಕ್ಷೇತ್ರಗಳ ತಕ್ಷಣದ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಸರಿಪಡಿಸಬೇಕೆಂದು ಆರ್ ಬಿಐ ನ ಮಾಜಿ ಗೌರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. 

ಸಿಎನ್ ಬಿಸಿ 18 ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಘುರಾಮ್ ರಾಜನ್, ಖಾಸಗಿ ಕ್ಷೇತ್ರದಲ್ಲಿನ ಹೂಡಿಕೆಗೆ ಸರ್ಕಾರ ಹೊಸ ಸುಧಾರಣೆಗಳಿಗೆ ಮುಂದಾಗಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಅರವಿಂದ್ ಸುಬ್ರಹ್ಮಣಿಯನ್ ಅವರನ್ನೂ ಉಲ್ಲೇಖಿಸಿರುವ ರಘುರಾಮ್ ರಾಜನ್, ಜಿಡಿಪಿ ಲೆಕ್ಕಾಚಾರದ ವಿಧಾನದಲ್ಲೂ ಭಾರತ ಬದಲಾಗಬೇಕಿದೆ ಖಾಸಗಿ ವಿಶ್ಲೇಷಕರು ಹಲವು ರೀತಿಗಳಲ್ಲಿ ಬೆಳವಣಿಗೆ ಅಂದಾಜನ್ನು ವಿಶ್ಲೇಷಿಸುತ್ತಾರೆ. ಈ ಪೈಕಿ ಹಲವು ಸರ್ಕಾರದ ಅಂದಾಜಿಗಿಂತಲೂ ಕಡಿಮೆ ಇರುತ್ತದೆ ಎಂದು ಹೇಳಿದ್ದಾರೆ. 

2018-19  ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.6.8 ಕ್ಕೆ ಕುಸಿದಿತ್ತು. ಈ ಸಾಲಿನಲ್ಲಿ ಸರ್ಕಾರದ ಅಂದಾಜಿನ ಪ್ರಕಾರ ಇರುವ ಶೇ.7 ಕ್ಕಿಂತಲೂ ಆರ್ಥಿಕ ಬೆಳವಣಿಗೆ ಕಡಿಮೆ ಇರಲಿದೆ ಎಂದು ಹಲವು ಖಾಸಗಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com