ಪ್ರವಾಹ: ವಿಮೆ ಪರಿಹಾರ ಬೇಡಿಕೆಗಳ ಶೀಘ್ರ ಇತ್ಯರ್ಥಕ್ಕೆ ವಿತ್ತ ಸಚಿವಾಲಯ ಸೂಚನೆ

ಕರ್ನಾಟಕ, ಮಹಾರಾಷ್ಟ್ರ, ಕೇರಳ ಸೇರಿದಂತೆ ಪ್ರವಾಹ ಪೀಡಿತ ವಿವಿಧ ರಾಜ್ಯಗಳ ಪಾಲಿಸಿದಾರರಿಗೆ ವಿಮೆ ಪರಿಹಾರ ಬೇಡಿಕೆಗಳ ಶೀಘ್ರ ಇತ್ಯರ್ಥಕ್ಕೆ  ಕೇಂದ್ರ ಹಣಕಾಸು ಸಚಿವಾಲಯ ಎಲ್ಲಾ ವಿಮಾ ಕಂಪನಿಗಳಿಗೆ ಸೂಚಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ, ಕೇರಳ ಸೇರಿದಂತೆ ಪ್ರವಾಹ ಪೀಡಿತ ವಿವಿಧ ರಾಜ್ಯಗಳ ಪಾಲಿಸಿದಾರರಿಗೆ ವಿಮೆ ಪರಿಹಾರ ಬೇಡಿಕೆಗಳ ಶೀಘ್ರ ಇತ್ಯರ್ಥಕ್ಕೆ  ಕೇಂದ್ರ ಹಣಕಾಸು ಸಚಿವಾಲಯ ಎಲ್ಲಾ ವಿಮಾ ಕಂಪನಿಗಳಿಗೆ ಸೂಚಿಸಿದೆ.

ನೋಂದಣಿಯಾದ ಹಾಗೂ ಅರ್ಹ ಪಾಲಿಸಿದಾರರಿಗೆ  ತ್ವರಿತವಾಗಿ ವಿಮೆ ಪಾವತಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮತ್ತಿತರ ಯೋಜನೆಗಳ ಪಾಲಿಸಿದಾರರಿಗೆ ತ್ವರಿತವಾಗಿ ವಿಮೆ ಪಾವತಿಸುವಂತೆ  ಸಚಿವಾಲಯ ತಿಳಿಸಿದೆ. 

ದೇಶದ ವಿವಿಧೆಡೆಯಲ್ಲಿನ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಜೀವ- ಆಸ್ತಿ ಪಾಸ್ತಿ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದ್ದು, ವಿಮೆ ಇತ್ಯರ್ಥಕ್ಕೆ ಸಂಬಂಧಿಸಿದಂತೆ ರಾಜ್ಯವಾರು ಪ್ರಗತಿ ವರದಿಯನ್ನು ವಾರಕ್ಕೊಮ್ಮೆ ಕಡ್ಡಾಯವಾಗಿ ಆಪ್ ಡೇಟ್ ಮಾಡುವಂತೆಯೂ ಸೂಚಿಸಲಾಗಿದೆ. 

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ಅನೇಕ ಮಂದಿ ಮೃತಪಟ್ಟಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com