ಮಾರುತಿ ಸುಝುಕಿಯಿಂದ 5 ವರ್ಷ, 1 ಲಕ್ಷ ಕಿಮೀ ವಾರಂಟಿಯ ಕೊಡುಗೆ

ದೇಶಾದ್ಯಂತ 2.9 ದಶಲಕ್ಷ ಗ್ರಾಹಕರನ್ನು ಹೊಂದಿರುವ ಮಾರುತಿ ಸುಝುಕಿ ಕಂಪನಿ,  ಡಿಸೈರ್, ಎಸ್-ಕ್ರಾಸ್, ಸ್ವಿಫ್ಟ್ ಹಾಗೂ ವಿಟಾರಾ ಬ್ರೀಝಾದ ಡೀಸೆಲ್ ಕಾರುಗಳಿಗೆ 5 ವರ್ಷ ಹಾಗೂ 1 ಲಕ್ಷ ಕಿಮೀವರೆಗಿನ ವಾರಂಟಿ ಘೋಷಿಸಿದೆ. 

Published: 20th August 2019 10:45 PM  |   Last Updated: 30th August 2019 03:14 PM   |  A+A-


Maruti Suzuki

ಮಾರುತಿ ಸುಝುಕಿ

Posted By : Srinivas Rao BV
Source : UNI

ನವದೆಹಲಿ: ದೇಶಾದ್ಯಂತ 2.9 ದಶಲಕ್ಷ ಗ್ರಾಹಕರನ್ನು ಹೊಂದಿರುವ ಮಾರುತಿ ಸುಝುಕಿ ಕಂಪನಿ,  ಡಿಸೈರ್, ಎಸ್-ಕ್ರಾಸ್, ಸ್ವಿಫ್ಟ್ ಹಾಗೂ ವಿಟಾರಾ ಬ್ರೀಝಾದ ಡೀಸೆಲ್ ಕಾರುಗಳಿಗೆ 5 ವರ್ಷ ಹಾಗೂ 1 ಲಕ್ಷ ಕಿಮೀವರೆಗಿನ ವಾರಂಟಿ ಘೋಷಿಸಿದೆ. 

ದೇಶಾದ್ಯಂತ 1,893 ಪಟ್ಟಣ ಹಾಗೂ ನಗರಗಳಲ್ಲಿ ಡೀಲರ್ ಗಳನ್ನು ಹೊಂದಿರುವ ಕಂಪನಿ, ಹೊಸ ಖರೀದಿದಾರರಿಗೆ ಯಾವುದೇ ಹೆಚ್ಚುವರಿ  ವೆಚ್ಚವಿಲ್ಲದೆ ಈ ಯೋಜನೆಯನ್ನು ಒದಗಿಸುತ್ತಿದೆ. ಈ ಕುರಿತು ಹೇಳಿಕೆ ನೀಡಿರುವ ಮಾರುತಿ ಸುಝುಕಿ ಇಂಡಿಯಾ ಲಿ. ನ (ಮಾರುಕಟ್ಟೆ ಮತ್ತು ಮಾರಾಟ) ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವತ್ಸ, 'ಕೇವಲ ಒಂದು ಕಂಪನಿಯಾಗಿದ್ದ ಮಾರುತಿ ಝುಕಿಯನ್ನು  ಭಾರತದ ಆಟೊಮೊಬೈಲ್ ಉದ್ಯಮವನ್ನಾಗಿ ಬದಲಾಯಿಸುವಲ್ಲಿ ಡಿಸೈರ್, ಎಸ್-ಕ್ರಾಸ್, ಸ್ವಿಫ್ಟ್ ಹಾಗೂ ವಿಟಾರಾ ಬ್ರೀಝಾ ವಾಹನಗಳ ಪಾತ್ರ ಮಹತ್ವದ್ದು. ಈ ಬ್ರಾಂಡ್ ಗಳನ್ನು ಲಕ್ಷಾಂತರ ಗ್ರಾಹಕರು ಮೆಚ್ಚಿದ್ದಾರೆ. ಇವುಗಳು ಭವಿಷ್ಯದಲ್ಲಿಯೂ ಕಂಪನಿಯ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ ' ಎಂದಿದ್ದಾರೆ.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp