ಬೆಳಗಾವಿಗೆ ವಿಮಾನ ಸೇವೆ ಆರಂಭಿಸಲಿರುವ ಇಂಡಿಗೋ 

ದಕ್ಷಿಣ ಭಾರತದಲ್ಲಿ ಸಂಪರ್ಕವನ್ನು ಸದೃಢಗೊಳಿಸುವ ಉದ್ದೇಶದಿಂದ ಇಂಡಿಗೋ ವಿಮಾನಯಾನ ಸಂಸ್ಥೆ ಬುಧವಾರ ಬೆಳಗಾವಿಯನ್ನು ತನ್ನ ಸಂಪರ್ಕ ಜಾಲಕ್ಕೆ ಸೇರಿಸಿದೆ. 
ಬೆಳಗಾವಿಗೆ ವಿಮಾನ ಸೇವೆ ಆರಂಭಿಸಲಿರುವ ಇಂಡಿಗೋ 
ಬೆಳಗಾವಿಗೆ ವಿಮಾನ ಸೇವೆ ಆರಂಭಿಸಲಿರುವ ಇಂಡಿಗೋ 

ಕೋಲ್ಕತಾ: ದಕ್ಷಿಣ ಭಾರತದಲ್ಲಿ ಸಂಪರ್ಕವನ್ನು ಸದೃಢಗೊಳಿಸುವ ಉದ್ದೇಶದಿಂದ ಇಂಡಿಗೋ ವಿಮಾನಯಾನ ಸಂಸ್ಥೆ ಬುಧವಾರ ಬೆಳಗಾವಿಯನ್ನು ತನ್ನ ಸಂಪರ್ಕ ಜಾಲಕ್ಕೆ ಸೇರಿಸಿದೆ. 

ಇಂಡಿಗೋ ಸೆ. 8ರಿಂದ ಬೆಳಗಾವಿಯಿಂದ ಕಾರ್ಯಾಚರಣೆ ಆರಂಭಿಸಲಿದೆ. ಇದರಿಂದ ಬೆಳಗಾವಿ ಇಂಡಿಗೋ ಸಂಸ್ಥೆಯ 77 ನೇ ಹಾಗೂ 58 ನೇ ದೇಶೀಯ ನಿಲ್ದಾಣವಾಗಲಿದೆ. ಈ ಸಂಸ್ಥೆ ಈಗಾಗಲೇ ಬೆಂಗಳೂರು-ಬೆಳಗಾವಿ ಹಾಗೂ ಬೆಂಗಳೂರು-ಮಧುರೈಗೆ  ಸಂಪರ್ಕ ಕಲ್ಪಿಸುವ ವಿಮಾನ ಸೇವೆಯನ್ನು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಸಂಪರ್ಕವನ್ನು ಹೆಚ್ಚಿಸುವ ದೃಷ್ಟಿಯಿಂದ ಎಟಿಆರ್ -18 ವಿಮಾನ ಸಂಚಾರವನ್ನು ಆರಂಭಿಸಲಾಗುವುದು ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ. 

ಇಂಡಿಗೋದ ಮುಖ್ಯ ವಾಣಿಜ್ಯ ಅಧಿಕಾರಿ ವಿಲಿಯಮ್ ಬೌಲ್ಟರ್, ಬೆಂಗಳೂರು ಹಾಗೂ ಮಧುರೈ ನಡುವೆ ಹೆಚ್ಚುವರಿ ವಿಮಾನಗಳ ಜೊತೆಗೆ, ಬೆಳಗಾವಿಗೆ ಹೊಸ ವಿಮಾನ ಸಂಪರ್ಕ ಘೋಷಿಸಲು ಸಂತಸವಾಗುತ್ತಿದೆ. ಬೆಳಗಾವಿ ಜಿಲ್ಲೆಗೆ ಐತಿಹಾಸಿಕ ಹಿನ್ನೆಲೆಯಿದ್ದು,  ವಿಮಾನ ಸಂಪರ್ಕ ಅದರ ಅಭಿವೃದ್ಧಿಗೆ ಕಾರಣವಾಗುತ್ತದೆ. ಈ ವಿಮಾನಗಳು ಬೆಂಗಳೂರಿನ ಹೊರಗಿನ ಹಾಗೂ ದಕ್ಷಿಣ ಭಾರತದ ನಡುವಿನ ಸಂಚಾರಕ್ಕೆ ಅನುವು ಮಾಡಿಕೊಡಲಿವೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com