ಗಗನಕ್ಕೇರಿದ ಚಿನ್ನದ ಬೆಲೆ: 10 ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ? 

ಚಿನ್ನದ ಬೆಲೆ ಗಗನಕ್ಕೇರಿದೆ. ಸತತ ನಾಲ್ಕನೇ ದಿನವೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ರೂಪಾಯಿ ಮೌಲ್ಯ ಕುಸಿತದ ನಡುವೆಯೂ 10 ಗ್ರಾಮ್ ಚಿನ್ನದ ಬೆಲೆ 38 ಸಾವಿರದ 995 ರೂ. ಆಗಿದೆ

Published: 23rd August 2019 08:06 PM  |   Last Updated: 23rd August 2019 08:15 PM   |  A+A-


ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ನವದೆಹಲಿ: ಚಿನ್ನದ ಬೆಲೆ ಗಗನಕ್ಕೇರಿದೆ. ಸತತ ನಾಲ್ಕನೇ ದಿನವೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ರೂಪಾಯಿ ಮೌಲ್ಯ ಕುಸಿತದ ನಡುವೆಯೂ 10 ಗ್ರಾಮ್ ಚಿನ್ನದ ಬೆಲೆ 38 ಸಾವಿರದ 995 ರೂ. ಆಗಿದೆ ಎಂದು ಅಖಿಲ ಭಾರತ ಚಿನ್ನಾಭರಣ ಮಾರಾಟಗಾರರ ಸಂಘ ತಿಳಿಸಿದೆ. 

ಕಳೆದ ಮಂಗಳವಾರದಿಂದಲೂ ಪ್ರತಿದಿನವೂ ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಲೇ ಇದೆ. ಈ ಮಧ್ಯೆ ಬೆಳ್ಳಿ ಕೆಜಿಗೆ 45. 100 ರೂ. ಆಗಿದೆ. ವಿದೇಶಗಳಲ್ಲಿ ಚಿನ್ನದ ಬೆಲೆ  ಕಡಿಮೆಯಾಗಿದ್ದರೂ ಜ್ಯುವೆಲ್ಲರ್ಸ್  ನಿರಂತರವಾಗಿ ಕೊಳ್ಳುತ್ತಿರುವುದರಿಂದ ಚಿನ್ನದ ಬೆಲೆ ಏರಿಕೆಯಾಗಲು  ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ರೂಪಾಯಿ ಮೌಲ್ಯ ಕುಸಿತವೂ ಕೂಡಾ ಅಮೂಲ್ಯ ಲೋಹದ ಬೆಲೆ ಏರಿಕೆಗೆ ಕಾರಣವಾಗಿದೆ. ಅಮೆರಿಕಾದ ಡಾಲರ್ ಎದುರು ರೂಪಾಯಿ ಮೌಲ್ಯ 72 ಅಂಕಗಳಷ್ಟು ಇಂದು ಕುಸಿತ ಕಂಡಿದೆ. ನ್ಯೂಯಾರ್ಕ್ ನಲ್ಲಿ  ಒಂದು ಔನ್ಸ್ ಚಿನ್ನದ ಬೆಲೆ 1, 496 .30 ಡಾಲರ್ ಆಗಿದ್ದರೆ,  ಒಂದು ಔನ್ಸ್  ಬೆಳ್ಳಿಯ ಬೆಲೆ 17. 11 ಡಾಲರ್ ನಷ್ಟಿದೆ.
 
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಿಲೋ ಚಿನ್ನದ ಬೆಲೆಯಲ್ಲಿ 1500 ಡಾಲರ್ ಗಿಂತ ಕಡಿಮೆಯಾಗಿದ್ದು,ಜಾಗತಿಕವಾಗಿ ಚಿನ್ನದ ಮಾರಾಟದಲ್ಲಿ ಕುಸಿತ ಕಂಡಿದ್ದು, ಅಮೆರಿಕಾ ಇಕ್ವಿಟಿ ಹಾಗೂ ಡಾಲರ್ ಇಂಡೆಕ್ಸ್ ನಲ್ಲಿ  ಇಂದು ಸಕಾರಾತ್ಮಕ  ಅಂಶ ಕಂಡುಬಂದಿದೆ ಎಂದು ಹೆಚ್ ಡಿಎಫ್ ಸಿ ಸೆಕ್ಯೂರಿಟಿಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ  10 ಗ್ರಾಮ್ ಶುದ್ಧ  ಚಿನ್ನದ ಬೆಲೆ 38 ಸಾವಿರದ 995 ರೂ ಆದರೆ,  10 ಗ್ರಾಮ್ ಸಾಧಾರಣ ಚಿನ್ನದ ಬೆಲೆ 38 ಸಾವಿರದ 825 ರೂಪಾಯಿ ಆಗಿದೆ. ಕೆಜಿ ಬೆಳ್ಳಿ 45 ಸಾವಿರದ 100 ರೂಪಾಯಿ ಆಗಿದೆ. 

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಏಷ್ಟಿದೆ :  1 ಗ್ರಾಂ ಚಿನ್ನದ ಬೆಲೆ 3 ಸಾವಿರದ 540,  8 ಗ್ರಾಂ ಚಿನ್ನದ ಬೆಲೆ 28 ಸಾವಿರದ 320 ಹಾಗೂ 10 ಗ್ರಾಂ ಚಿನ್ನದ ಬೆಲೆ 35, 400 ಹಾಗೂ 100 ಗ್ರಾಂ ಚಿನ್ನದ ಬೆಲೆ 3, 54,000 ರೂಪಾಯಿ ಆಗಿದೆ. 

24 ಕ್ಯಾರೆಟ್ ಚಿನ್ನದ ಬೆಲೆ ವಿವರ: 1 ಗ್ರಾಂಗೆ 3860 ,  8 ಗ್ರಾಂಗೆ 30 ಸಾವಿರದ 880,    10 ಗ್ರಾಂಗೆ 38, 600 ಹಾಗೂ 100 ಗ್ರಾಂ ಚಿನ್ನದ ಬೆಲೆ 3 ಲಕ್ಷದ 86 ಸಾವಿರ ರೂಪಾಯಿ ಆಗಿದೆ.

Stay up to date on all the latest ವಾಣಿಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp