2019ರಲ್ಲಿ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 72 ಅಂಕ ಕುಸಿತ

ವಿದೇಶಿ ನಿಧಿ ಹರಿವು ಹೆಚ್ಚಾಗಿರುವುದರಿಂದ ಮತ್ತು ಷೇರು ಮಾರುಕಟ್ಟೆಯಲ್ಲಿನ ನಷ್ಟದಿಂದ ಶುಕ್ರವಾರ ಬೆಳಗಿನ ವಹಿವಾಟು ಆರಂಭಕ್ಕೆ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 72 ಅಂಕಗಳಷ್ಟು ಇಳಿಕೆ ಕಂಡುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ವಿದೇಶಿ ನಿಧಿ ಹರಿವು ಹೆಚ್ಚಾಗಿರುವುದರಿಂದ ಮತ್ತು ಷೇರು ಮಾರುಕಟ್ಟೆಯಲ್ಲಿನ ನಷ್ಟದಿಂದ ಶುಕ್ರವಾರ ಬೆಳಗಿನ ವಹಿವಾಟು ಆರಂಭಕ್ಕೆ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 72 ಅಂಕಗಳಷ್ಟು ಇಳಿಕೆ ಕಂಡುಬಂದಿದೆ. 


ಈ ವರ್ಷದಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಇಷ್ಟೊಂದು ಇಳಿಕೆಯಾಗಿದ್ದು, ರೂಪಾಯಿ ಬೆಲೆ 22 ಪೈಸೆ ಇಂದು ಇಳಿಕೆಯಾಗಿ ಬೆಳಗಿನ ವಹಿವಾಟಿನಲ್ಲಿ ಪ್ರತಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 71.93 ರೂಪಾಯಿಗಳಿಂದ 72 ರೂಪಾಯಿ 5 ಪೈಸೆಯಷ್ಟಾಗಿತ್ತು. 


ಸಾಗರೋತ್ತರ ಮಾರುಕಟ್ಟೆಯಲ್ಲಿ ಡಾಲರ್ ಬೆಲೆ ಹೆಚ್ಚಾಗಿದ್ದು ಮತ್ತು ಸತತ ವಿದೇಶಿ ಹಣ ಹರಿವಿನಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ ಎಂದು ವಿದೇಶ ವ್ಯಾಪಾರ ತಜ್ಞರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com