ಭ್ರಷ್ಟಾಚಾರದ ಆರೋಪ: ಕೇಂದ್ರದಿಂದ ಮತ್ತೆ 22 ಆದಾಯ ತೆರಿಗೆ ಅಧಿಕಾರಿಗಳ ವಜಾ 

ಭ್ರಷ್ಟಾಚಾರದ ಹಾಗೂ ಕಾನೂನುಬಾಹಿರ ಕೃತ್ಯಗಳ  ಆರೋಪದಡಿ ಸರ್ಕಾರ ಸೋಮವಾರ ನಿಯಮ 56 (ಜೆ) ಅಡಿಯಲ್ಲಿ ಮತ್ತೆ 22 ಹಿರಿಯ ತೆರಿಗೆ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿ ಮಾಡಿದೆ.  
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭ್ರಷ್ಟಾಚಾರದ ಹಾಗೂ ಕಾನೂನುಬಾಹಿರ ಕೃತ್ಯಗಳ  ಆರೋಪದಡಿ ಸರ್ಕಾರ ಸೋಮವಾರ ನಿಯಮ 56 (ಜೆ) ಅಡಿಯಲ್ಲಿ ಮತ್ತೆ 22 ಹಿರಿಯ ತೆರಿಗೆ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿ ಮಾಡಿದೆ.  ಕಿರುಕುಳ, ಲಂಚ, ಸುಲಿಗೆ ಮತ್ತು ಭ್ರಷ್ಟಾಚಾರದಂತಹ ಆರೋಪಗಳ ಮೇಲೆ 27 ಉನ್ನತ ಹುದ್ದೆಯ ಕಂದಾಯ ಅಧಿಕಾರಿಗಳನ್ನು ಕಿತ್ತೊಗೆದ ಸರ್ಕಾರ ಈಗ ಮತ್ತೆ 22 ಅಧಿಕಾರಿಗಳನ್ನು ತೆಗೆದು ಹಾಕಿದೆ.

ಸಿಬಿಐಸಿ ವಜಾ ಮಾಡಿದ ಅಧಿಕಾರಿಗಳಲ್ಲಿ ಕೆ.ಕೆ. ಯುಕಿ, ಎಸ್.ಆರ್. ಪರೇಟ್, ಕೈಲಾಶ್ ವರ್ಮಾ, ಕೆ.ಸಿ. ಮಂಡಲ್, ಎಂ.ಎಸ್. ದಾಮೋರ್, ಆರ್.ಎಸ್. ಗೊಗಿಯಾ, ವಿವಿಧ ಕೇಂದ್ರ ಜಿಎಸ್‌ಟಿ ವಲಯಗಳಿಂದ ಕಿಶೋರ್ ಪಟೇಲ್. ವರುಗಳಿದ್ದಾರೆ. ಇವರೆಲ್ಲರೂ ಅಧೀಕ್ಷಕರ ಮಟ್ಟದಲ್ಲಿದ್ದರು.

ಭ್ರಷ್ಟ ತೆರಿಗೆ ಅಧಿಕಾರಿಗಳನ್ನು ವಜಾಗೊಳಿಸುವ ನಿರ್ಧಾರವು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಕಿರುಕುಳ ನೀಡದಂತೆ ತೆರಿಗೆ ಆಡಳಿತವನ್ನು ಸ್ವಚ್ಚಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಭರವಸೆಗೆ ಅನುಗುಣವಾಗಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ದೇಶದ ವಿವಿಧ ವಲಯಗಳ ಕಸ್ಟಮ್ಸ್ ವ್ಯವಹಾರವನ್ನು ಒಳಗೊಂಡವರು ಇತ್ತೀಚಿನ ಬ್ಯಾಚ್ ಅಧಿಕಾರಿಗಳನ್ನು ತೋರಿಸಿದ್ದಾರೆ.ಕಳಂಕಿತ ಅಧಿಕಾರಿಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಸೇವೆಯಿಂದ ಹೊರಹಾಕಲಾಗಿದೆ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಸಮರ್ಥನೆ ನೀಡಿದೆ.

ಕೇಂದ್ರೀಯ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) 12 ಅಧಿಕಾರಿಗಳು ಸೇರಿದಂತೆ 27 ಉನ್ನತ ಶ್ರೇಣಿಯ ಐಆರ್ಎಸ್ ಅಧಿಕಾರಿಗಳನ್ನು ಜೂನ್‌ನಲ್ಲಿ ಮೂಲಭೂತ ನಿಯಮ 56 (ಜೆ) ಅಡಿಯಲ್ಲಿ ಕಡ್ಡಾಯವಾಗಿ ನಿವೃತ್ತಿ ಮಾಡಿರುವುದನ್ನು ಇಲ್ಲಿ ನೆನೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com