ತ್ವರಿತ ಹಣಕಾಸು ಅಗತ್ಯಕ್ಕೆ ಪರ್ಸನಲ್ ಲೋನ್ ತಕ್ಷಣದ ಪರಿಹಾರ ಹೇಗೆ?

ನಿಮ್ಮ ಗುರಿಗಳನ್ನು ಸಾಧಿಸಲು ಹಣಕಾಸು ನೆರವು ಪಡೆಯುವಾಗ, ವೈಯಕ್ತಿಕ ಸಾಲವು (ಪರ್ಸನಲ್ ಲೋನ್) ನೀವು ಯಾವಾಗಲೂ ನಂಬಬಹುದಾದ ಸಂಪನ್ಮೂಲವಾಗಿದೆ.

Published: 27th August 2019 04:36 PM  |   Last Updated: 29th August 2019 12:07 PM   |  A+A-


Bajaj Finserve

ಬಜಾಜ್ ಫಿನ್‌ಸರ್ವ್

Posted By : Prasad SN
Source : Online MI

ನಿಮ್ಮ ಸಂಗಾತಿಯನ್ನು ಒಂದು ವಾರ ಥೈಲ್ಯಾಂಡ್‌ ಪ್ರವಾಸಕ್ಕೆ ಕರೆದುಕೊಂಡು ಹೋಗಲು ನೀವು ಬಯಸುತ್ತೀರಾ ಅಥವಾ ನಿಮ್ಮ ಕಾರಿಗೆ ಡೌನ್ ಪೇಮೆಂಟ್ ಮಾಡಲು ಬಯಸುತ್ತೀರಾ? ನಿಮ್ಮ ಗುರಿಗಳನ್ನು ಸಾಧಿಸಲು ಹಣಕಾಸು ನೆರವು ಪಡೆಯುವಾಗ, ವೈಯಕ್ತಿಕ ಸಾಲವು (ಪರ್ಸನಲ್ ಲೋನ್) ನೀವು ಯಾವಾಗಲೂ ನಂಬಬಹುದಾದ ಸಂಪನ್ಮೂಲವಾಗಿದೆ. ಏಕೆಂದರೆ ಸಾಲದಾತರು ಅರ್ಹತಾ ನಿಯಮಗಳನ್ನು ಸರಳೀಕರಿಸಿದ್ದಾರೆ, ಇದರಿಂದ ವಾಸ್ತವವಾಗಿ, ನೀವು ಆನ್‌ಲೈನ್‌ನಲ್ಲಿ ವೈಯಕ್ತಿಕ ಸಾಲವನ್ನು ಪಡೆಯಬಹುದು.

ಅದರ ವ್ಯಾಪಕ-ಬಳಕೆಗೆ ಒಂದು ಮುಖ್ಯ ಕಾರಣವೆಂದರೆ ಸಾಲದ ಅನುಮೋದನೆಯೊಂದಿಗೆ ನಿಮಗೆ ಅದನ್ನು ಬಳಸುವ ಸಿಗುವ ಸ್ವಾತಂತ್ರ್ಯ. ನೀವು ಪರ್ಸನಲ್ ಲೋನ್ ಅನ್ನು ಮದುವೆ ಸಾಲ, ಪ್ರಯಾಣ ಸಾಲ, ಶಿಕ್ಷಣ ಸಾಲ ಮತ್ತು ನಿಮ್ಮ ಸಾಲವನ್ನು ಕ್ರೋಢೀಕರಿಸಲು ಬಳಸಬಹುದು. ಮಂಜೂರಾತಿಯ ಅಂತಿಮ ಬಳಕೆಯು ಸಂಪೂರ್ಣವಾಗಿ ನಿಮ್ಮದಾಗಿದೆ, ನಿಮ್ಮ ಉಳಿತಾಯವು ಸಾಕಷ್ಟಿಲ್ಲದಿದ್ದಾಗ ವೈಯಕ್ತಿಕ ಸಾಲವು ಸೂಕ್ತವಾದ ಪರಿಹಾರವಾಗಿದೆ.
 
ನಿಮ್ಮ ಅವಶ್ಯಕತೆಗಳನ್ನು ನಿರ್ವಹಿಸಲು ಈ ಸಾಲ ಏಕೆ ಸೂಕ್ತ ಸಾಧನವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಮುಂದೆ ಓದಿ.

1. ಗಣನೀಯ ಅನುಮೋದನೆಯೊಂದಿಗೆ ಯಾವುದೇ ಗುರಿಯನ್ನು ಸಾಧಿಸಿ
ಇದರ ಜನಪ್ರಿಯತೆಗೆ ಒಂದು ಪ್ರಮುಖ ಕಾರಣವೆಂದರೆ, ಯಾವುದೇ ಗುರಿಯನ್ನು ಪೂರೈಸಲು ನೀವು ಬಳಸಬಹುದಾದ ಗಣನೀಯ ಪ್ರಮಾಣದ ಹಣವನ್ನು ಪಡೆಯಲು ಇದು ಅವಕಾಶ ನೀಡುತ್ತದೆ. ಉದಾಹರಣೆಗೆ, ಬಜಾಜ್ ಫಿನ್‌ಸರ್ವ್ ನಿಮಗೆ 25 ಲಕ್ಷ ರೂ. ವರಗೆ ವೈಯಕ್ತಿಕ ಸಾಲವನ್ನು ಕೊಡುತ್ತದೆ. ನೀವು ಈ ದೊಡ್ಡ ಮಂಜೂರಾತಿಯನ್ನು ವಿವಾಹ ಸಾಲವಾಗಿ ಬಳಸಬಹುದು ಮತ್ತು ಸ್ಥಳ, ಅಡುಗೆ, ಪ್ರಯಾಣ, ಆಭರಣಗಳು ಮತ್ತು ಇತರ ವಿವಾಹ ವೆಚ್ಚಗಳನ್ನು ಸುಲಭವಾಗಿ ನೋಡಿಕೊಳ್ಳಬಹುದು. ಪರ್ಯಾಯವಾಗಿ, ನಿಮ್ಮ ಮನೆಯನ್ನು ಪುನರ್ನಿರ್ಮಾಣ ಮಾಡುವ ವೆಚ್ಚವನ್ನು ನಿರ್ವಹಿಸಲು ನೀವು ಅದನ್ನು ಮನೆ ನವೀಕರಣ ಸಾಲವಾಗಿ ಬಳಸಬಹುದು.

2. ಮೇಲಾಧಾರದ ಬಗ್ಗೆ ಚಿಂತಿಸದೆ ಅಪ್ಲೈ ಮಾಡಿ
ನೀವು ಮಹತ್ವದ ಆಸ್ತಿಯನ್ನು ಹೊಂದಿಲ್ಲದಿದ್ದರೆ ಅಥವಾ ಒಂದನ್ನು ಅಪಾಯಕ್ಕೆ ಸಿಲುಕಿಸಲು ನೀವು ಬಯಸದಿದ್ದರೆ ಮೇಲಾಧಾರವನ್ನು ಅಡಮಾನ ಮಾಡುವುದು ಒಂದು ರೀತಿಯ ತೊಡಕು. ಅದೃಷ್ಟವಶಾತ್, ವೈಯಕ್ತಿಕ ಸಾಲವನ್ನು ಪಡೆಯಲು ಮೇಲಾಧಾರದ ಅಗತ್ಯವಿಲ್ಲ. 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಮತ್ತು ಸ್ಥಿರವಾದ ಮಾಸಿಕ ಆದಾಯದೊಂದಿಗೆ, ನೀವು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ತ್ವರಿತ ಅನುಮೋದನೆಯನ್ನು ನಿರೀಕ್ಷಿಸಬಹುದು. ವಿಶೇಷವಾಗಿ ನಿಮಗೆ ತುರ್ತಾಗಿ ಹಣಕಾಸು ಅಗತ್ಯವಿದ್ದಾಗ, ನೀವು ನಿರೀಕ್ಷಿಸಬಹುದಾದ ಯಾವುದೇ ಒತ್ತಡವನ್ನು ಇದು ಬಹಳವಾಗಿ ಕಡಿಮೆ ಮಾಡುತ್ತದೆ.

3. ಸುಲಭ ಅರ್ಹತೆ ಮತ್ತು ದಾಖಲಾತಿಗಳೊಂದಿಗೆ ತ್ವರಿತವಾಗಿ ಸಾಲ ಪಡೆಯಿರಿ
ಯಾವುದೇ ಸಾಲ ಪಡೆಯಲು ಪ್ರಮುಖ ಅಂಶವೆಂದರೆ ಅರ್ಹತಾ ಮಾನದಂಡಗಳು, ಏಕೆಂದರೆ ನೀವು ಸಾಲಕ್ಕೆ ಅರ್ಹತೆ ಹೊಂದಿದ್ದೀರಾ ಎಂಬುದನ್ನು ಅದು ತೋರಿಸುತ್ತದೆ. ನೀವು ಸಾಲಗಾರನ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ನಿಮಗೆ ಅಗತ್ಯವಿರುವ ಹಣವನ್ನು ಎರವಲು ಪಡೆಯಲು ನಿಮ್ಮ ದಾರಿ ಸುಗಮವಾಗುವ ಸಾಧ್ಯತೆಗಳಿವೆ.

ಉದಾಹರಣೆಗೆ, ಬಜಾಜ್ ಫಿನ್‌ಸರ್ವ್ ವೈಯಕ್ತಿಕ ಸಾಲಕ್ಕೆ ಅರ್ಹತೆ ಪಡೆಯಲು ಅರ್ಹತಾ ನಿಯಮಗಳು ಈ ಕೆಳಗಿನಂತಿವೆ:

  • ನೀವು 23 ರಿಂದ 55 ವರ್ಷ ವಯಸ್ಸಿನವರಾಗಿರಬೇಕು
  • ನೀವು ಸಂಬಳ ಪಡೆಯುವ ವ್ಯಕ್ತಿಯಾಗಿರಬೇಕು, ಖಾಸಗಿ ಅಥವಾ ಸಾರ್ವಜನಿಕ ವಲಯದ ಕಂಪನಿಯಲ್ಲಿ ಕೆಲಸ ಮಾಡಬೇಕು
  • ನೀವು ಭಾರತದ ನಿವಾಸಿ ಪ್ರಜೆಯಾಗಿರಬೇಕು

ಇದಲ್ಲದೆ, ನಿಮ್ಮ ಅರ್ಹತೆಯನ್ನು ಸಾಬೀತುಪಡಿಸಲು ನೀವು ಕೆವೈಸಿ ದಾಖಲೆಗಳು, ಸಂಬಳದ ಚೀಟಿಗಳು, ಬ್ಯಾಂಕ್ ಖಾತೆ ಸ್ಟೇಟ್ಮೆಂಟ್ ಗಳು ಮತ್ತು ನಿಮ್ಮ ಉದ್ಯೋಗಿ ಗುರುತಿನ ಚೀಟಿಯಂತಹ ಮೂಲ ದಾಖಲೆಗಳನ್ನು ಮಾತ್ರ ಸಲ್ಲಿಸಬೇಕಾಗುತ್ತದೆ.

4. ಹೊಂದಿಕೊಳ್ಳಬಹುದಾದ ಅವಧಿಯ ಮೇಲೆ ಸಾಲವನ್ನು ಸುಲಭವಾಗಿ ಮರುಪಾವತಿ ಮಾಡಿ
ವಿಶಿಷ್ಟವಾಗಿ, ವೈಯಕ್ತಿಕ ಸಾಲಗಳು 5 ವರ್ಷಗಳ ಮರುಪಾವತಿಯ ಅವಧಿಯೊಂದಿಗೆ ಬರುತ್ತವೆ ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಅವಧಿಯನ್ನು ಆಯ್ಕೆ ಮಾಡಬಹುದು. ಕೈಗೆಟುಕುವ ಇಎಂಐಗಳು ಮತ್ತು ಕಡಿಮೆ ಒಟ್ಟು ಬಡ್ಡಿಯ ವ್ಯಯದ ನಡುವೆ ಸಮತೋಲನ ಕಾಪಾಡಿಕೊಳ್ಳಲು ಮರೆಯದಿರಿ. ಕಡೆಮೆ ಅವಧಿಯು ನಿಮ್ಮ ಬಡ್ಡಿಯನ್ನು ಕಡಿಮೆಗೊಳಿಸಿದರೆ, ಹೆಚ್ಚಿನ ಅವಧಿಯು ನಿಮ್ಮ ಇಎಂಐಗಳು ಪಾಕೆಟ್ ಸ್ನೇಹಿಯಾಗಿರುವುದನ್ನು ಖಚಿತಪಡಿಸುತ್ತದೆ.

5. ತ್ವರಿತ ಅನುಮೋದನೆ ಮತ್ತು ವಿತರಣೆಯೊಂದಿಗೆ ತಕ್ಷಣ ಹಣಕಾಸು ಪಡೆಯಿರಿ
ತಂತ್ರಜ್ಞಾನವು ಸಾಲದಾತರಿಗೆ ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್ ಗಳನ್ನು ನೀಡಲು ಮತ್ತು ಕಡಿಮೆ ಸಮಯದಲ್ಲಿ ಸಾಲವನ್ನು ವಿತರಿಸಲು ಅನುವು ಮಾಡಿಕೊಟ್ಟಿದೆ. ನೀವು ನಿಮ್ಮ ಮನೆಯ ಸೌಕರ್ಯದಿಂದಲೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್, ಅಲ್ಲಿ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು, ಕೇವಲ ನಿಮಿಷಗಳಲ್ಲಿ ಅನುಮೋದನೆ ಪಡೆಯಬಹುದು ಮತ್ತು ಮಂಜೂರಾಗಿರುವ ಸಾಲದ ಹಣವನ್ನು 24 ಗಂಟೆಗಳ ಒಳಗೆ ನಿಮ್ಮ ಖಾತೆಯಲ್ಲಿ ಸಂಪೂರ್ಣವಾಗಿ ಪಡೆಯಬಹುದು.

ನೀವು ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ, ಮೇಲಿನ ಎಲ್ಲಾ ಅಂಶಗಳ ಸೌಲಭ್ಯವನ್ನು ನೀಡುವ ಸಾಲದಾತನನ್ನು ಆಯ್ಕೆ ಮಾಡಿಕೊಳ್ಳಿ. ದೇಶದ ಅತ್ಯಂತ ವೈವಿಧ್ಯಮಯ ಬ್ಯಾಂಕೇತರ ಬ್ಯಾಂಕ್‌ಗಳಲ್ಲಿ ಒಂದಾದ ಬಜಾಜ್ ಫಿನ್‌ಸರ್ವ್ ಆಕರ್ಷಕ ಬಡ್ಡಿದರಗಳಲ್ಲಿ ಸುಲಭವಾದ ವೈಯಕ್ತಿಕ ಸಾಲಗಳನ್ನು ನೀಡುತ್ತದೆ.

ಇದಲ್ಲದೆ, ಬಜಾಜ್ ಫಿನ್‌ಸರ್ವ್ ವೈಯಕ್ತಿಕ ಸಾಲದೊಂದಿಗೆ ನೀವು ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಸಹ ಪಡೆಯಬಹುದು, ಅದು ಬಹು ಭಾಗ ಪಾವತಿ ಮತ್ತು ವಿತ್ ಡ್ರಾಯಲ್ ಗಳು, ನಿಮ್ಮ ಸಾಲದ ಆರಂಭಿಕ ಅವಧಿಯಲ್ಲಿ ಕಡಿಮೆ ಇಎಂಐಗಳು ಮತ್ತು ಇನ್ನೂ ಹೆಚ್ಚಿನದನ್ನು ನೀಡುತ್ತದೆ.

ನಿಮ್ಮ ಪೂರ್ವ-ಅನುಮೋದಿತ ಪ್ರಸ್ತಾಪವನ್ನು ಪರಿಶೀಲಿಸುವ ಮೂಲಕ ಆನ್‌ಲೈನ್‌ನಲ್ಲಿ ಬಜಾಜ್ ಫಿನ್‌ಸರ್ವ್ ಅವರ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಿ. 25 ಲಕ್ಷ ರೂ.ವರೆಗಿನ ಮೊತ್ತದ ಸಾಲಕ್ಕೆ ತೊಂದರೆ-ರಹಿತ ಪ್ರಕ್ರಿಯೆ ಮೂಲಕ 24 ಗಂಟೆಗಳ ಒಳಗೆ ತ್ವರಿತ ವಿತರಣೆ ಪಡೆಯಿರಿ.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp