ಸೆನ್ಸೆಕ್ಸ್ 189.43 ಅಂಕ ಇಳಿಕೆ, ದಿನದಂತ್ಯಕ್ಕೆ 37,451.84ರಲ್ಲಿ

ಮುಂಬೈ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ತೀವ್ರ ಏರಿಳಿತದ ವಹಿವಾಟಿನಲ್ಲಿ 189.43 ಅಂಕಗಳ ಕುಸಿತದೊಂದಿಗೆ 37,451.84 ರಲ್ಲಿ ದಿನದ ವಹಿವಾಟು ನಕಾರಾತ್ಮಕವಾಗಿ ಕೊನೆಗೊಂಡಿದೆ.
ಸೆನ್ಸೆಕ್ಸ್ 189.43 ಅಂಕ ಇಳಿಕೆ, ದಿನದಂತ್ಯಕ್ಕೆ 37,451.84ರಲ್ಲಿ
ಸೆನ್ಸೆಕ್ಸ್ 189.43 ಅಂಕ ಇಳಿಕೆ, ದಿನದಂತ್ಯಕ್ಕೆ 37,451.84ರಲ್ಲಿ

ಮುಂಬೈ: ಆಗಸ್ಟ್ ತಿಂಗಳ ಫ್ಯೂಚರ್ಸ್; ಮತ್ತು ಆಪ್ಷನ್;ಗಳ ಅವಧಿ ಮುಕ್ತಾಯದ ಮುನ್ನಾ ದಿನದಂದು ಹೂಡಿಕೆದಾರರು ಜಾಗ್ರತೆ ವಹಿಸಿರುವುದು, ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳು ಪುನರಾರಂಭವಾಗುವುದರ ಬಗ್ಗೆ ಅನಿಶ್ಚಿತತೆ ಎದುರಾಗಿರುವುದು ಹಾಗೂ ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟುಗಳ ನಡುವೆ ಮುಂಬೈ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ತೀವ್ರ ಏರಿಳಿತದ ವಹಿವಾಟಿನಲ್ಲಿ 189.43 ಅಂಕಗಳ ಕುಸಿತದೊಂದಿಗೆ 37,451.84 ರಲ್ಲಿ ದಿನದ ವಹಿವಾಟು ನಕಾರಾತ್ಮಕವಾಗಿ ಕೊನೆಗೊಳಿಸಿದೆ. 

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್;ಎಸ್ಇ) ಸೂಚ್ಯಂಕ ನಿಫ್ಟಿ ಸಹ 59.25 ಅಂಕ ಇಳಿಕೆ ಕಂಡು 11,046.10 ಕ್ಕೆ ತಲುಪಿದೆ. ಬೆಳಿಗ್ಗೆ ಸೆನ್ಸೆಕ್ಸ್ 37,655.77 ರಲ್ಲಿ ಸೆನ್ಸೆಕ್ಸ್ ವಹಿವಾಟು ಆರಂಭಿಸಿತು. ನಂತರ 37,4588 ಮತ್ತು  37,249.19 ರಲ್ಲಿ ಏರಿಳಿತ ಕಂಡಿತು. ಕೊನೆಗೆ 189.43 ಅಂಕ ಕುಸಿತ ಕಂಡು 37,451.84 ರಲ್ಲಿ ದಿನದಂತ್ಯ ಕಂಡಿತು. ನಿಫ್ಟಿ,  ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 11,129.65 ಮತ್ತು 10,987.65 ಮಟ್ಟದಲ್ಲಿತ್ತು. ವಿದ್ಯುತ್, ತೈಲ ಮತ್ತು ಅನಿಲ, ಬ್ಯಾಂಕಿಂಗ್, ಆರೋಗ್ಯ ರಕ್ಷಣೆ  ಮತ್ತು ಗ್ರಾಹಕ ವಸ್ತುಗಳಂತಹ  ವಲಯ ಸೂಚ್ಯಂಕಗಳ ಕುಸಿತವು ಇಂದು ಮಾರುಕಟ್ಟೆಯನ್ನು ನಷ್ಟದತ್ತ ಕೊಂಡೊಯ್ದಿದೆ. ಹಾಗೆಯೇ ಬ್ಯಾಂಕಿಂಗ್‍ ಷೇರುಗಳು ಸೇರಿ ಟಾಟಾ ಮೋಟಾರ್ಸ್ ಡಿವಿಆರ್, ವಿಇಡಿಎಲ್ ಮತ್ತು ಟಾಟಾ ಸ್ಟೀಲ್ ಷೇರುಗಳು ತೀವ್ರ ಕುಸಿತ ಕಂಡಿವೆ. ಐರೋಪ್ಯ ಮಾರುಕಟ್ಟೆಗಳು ದುರ್ಬಲ ವಹಿವಾಟು ನಡೆಸುತ್ತಿದ್ದರೆ, ಏಷ್ಯಾದ  ಷೇರು ಮಾರುಕಟ್ಟೆಗಳು ಬುಧವಾರ ಮಿಶ್ರ ವಹಿವಾಟು ನಡೆಸಿವೆ. ಜಾಗತಿಕ ಆರ್ಥಿಕತೆಯ ಬಗ್ಗೆ ತೀವ್ರ ಆತಂಕಗಳು ಹೂಡಿಕೆದಾರರ ಮೇಲೆ ಪರಿಣಾಮ ಬೀರಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com