ಏರ್ ಇಂಡಿಯಾದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ-ಅ. 2ರಿಂದ ಜಾರಿ

ಪ್ರಮುಖ ಬೆಳವಣಿಗೆಯೊಂದರಲ್ಲಿ ಭಾರತದ ವೈಮಾನಿಕ ಯಾನ ಸಂಸ್ಥೆ ಏರ್ ಇಂಡಿಯಾ ತನ್ನ ಎಲ್ಲಾ ವಿಮಾನಗಳಲ್ಲಿ ಬ್ಯಾಗ್, ಕಪ್ ಮತ್ತು ಸ್ಟ್ರಾಗಳಂತಹ ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ನಿಷೇಧ ಹೇರಲು ಸಜ್ಜಾಗಿದೆ

Published: 29th August 2019 03:53 PM  |   Last Updated: 29th August 2019 03:53 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : ANI

ಪ್ರಮುಖ ಬೆಳವಣಿಗೆಯೊಂದರಲ್ಲಿ ಭಾರತದ ವೈಮಾನಿಕ ಯಾನ ಸಂಸ್ಥೆ ಏರ್ ಇಂಡಿಯಾ ತನ್ನ ಎಲ್ಲಾ ವಿಮಾನಗಳಲ್ಲಿ ಬ್ಯಾಗ್, ಕಪ್ ಮತ್ತು ಸ್ಟ್ರಾಗಳಂತಹ ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ನಿಷೇಧ ಹೇರಲು ಸಜ್ಜಾಗಿದೆ.

"ಅಕ್ಟೋಬರ್ 2 ರಿಂದ ನಾವು ಏರ್ ಇಂಡಿಯಾ ಮತ್ತು ಕಡಿಮೆ ವೆಚ್ಚದ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಿದ್ದೇವೆ" ಎಂದು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶ್ವನಿ ಲೋಹಾನಿ ಗುರುವಾರ ಹೇಳಿದ್ದಾರೆ.

ವಿಶೇಷ ಊಟಕ್ಕಾಗಿ ಪ್ಲಾಸ್ಟಿಕ್ ಕಟ್ಲರಿಗಳ ಬದಲಿಗೆ ಪರಿಸರ ಸ್ನೇಹಿ ಬ್ರಿಚ್ ಮರದ  ಕಟ್ಲರಿಯನ್ನು ಬಳಸುತ್ತದೆ.ಸಿಬ್ಬಂದಿ ಊಟದ ಕಟ್ಲರಿಯನ್ನು ಹಗುರವಾದ ತೂಕದ ಉಕ್ಕಿನ ಕಟ್ಲರಿಯೊಂದಿಗೆ ಬದಲಾಯಿಸಲಾಗುತ್ತದೆ. ಪ್ಲಾಸ್ಟಿಕ್ ಟಂಬ್ಲರ್‌ಗಳು ಮತ್ತು ಟೀಕಾಪ್‌ಗಳನ್ನು ಕಾಗದದ ಆವೃತ್ತಿಗೆ ಬದಲಾಯಿಸುತ್ತೇವೆ ಎಂದು ಸಂಸ್ಥೆ ಹೇಳಿದೆ.

ಆಗಸ್ಟ್ 15 ರಂದು ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಪ್ಲಾಸ್ಟಿಕ್‌ನಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಮೊದಲ ದೊಡ್ಡ ಹೆಜ್ಜೆ ಇಡಬೇಕೆಂದು ಜನರು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಕರೆ ನೀಡಿದ್ದರು.

ಸರ್ಕಾರದ ನೀತಿಗೆ ಅನುಗುಣವಾಗಿ ಪ್ಲಾಸ್ಟಿಕ್ ಚೀಲಗಳು, ಕಪ್ ಗಳು ಪ್ಲೇಟ್ ಗಳು ಬಾಟಲಿಗಳು, ಸ್ಟ್ರಾಗಳು ಮತ್ತು ಕೆಲವು ರೀತಿಯ ಸ್ಯಾಚೆಟ್‌ಗಳ ಮೇಲೆ ರಾಷ್ಟ್ರವ್ಯಾಪಿ ನಿಷೇಧ ಹೇರಬೇಕೆಂದು ವರದಿಗಳು ತಿಳಿಸಿವೆ.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp