2000 ರೂಪಾಯಿ ನೋಟಿನ ಚಲಾವಣೆ ಬಗ್ಗೆ ಹೊಸ ಸುದ್ದಿ ಗೊತ್ತೇನು?

2019 ನೇ ಆರ್ಥಿಕ ವರ್ಷದಲ್ಲಿ ಒಟ್ಟಾರೆ ಚಲಾವಣೆಯಲ್ಲಿರುವ ನೋಟುಗಳ ಪೈಕಿ 2000 ರೂಪಾಯಿ ನೋಟುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. 
2000 ರೂಪಾಯಿ ನೋಟಿನ ಚಲಾವಣೆ ಬಗ್ಗೆ ಹೊಸ ಸುದ್ದಿ ಗೊತ್ತೇನು?
2000 ರೂಪಾಯಿ ನೋಟಿನ ಚಲಾವಣೆ ಬಗ್ಗೆ ಹೊಸ ಸುದ್ದಿ ಗೊತ್ತೇನು?

ಮುಂಬೈ: 2000 ರೂಪಾಯಿ ನೋಟಿನ ಕುರಿತಾದ ಹೊಸ ಸುದ್ದಿಯೊಂದು ಬಂದಿದೆ. 

2019 ನೇ ಆರ್ಥಿಕ ವರ್ಷದಲ್ಲಿ ಒಟ್ಟಾರೆ ಚಲಾವಣೆಯಲ್ಲಿರುವ ನೋಟುಗಳ ಪೈಕಿ 2000 ರೂಪಾಯಿ ನೋಟುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. 

ನೋಟು ನಿಷೇಧವಾದಾಗ ಪರಿಚಯಿಸಲಾಗಿದ್ದ 2,000 ರೂ ಮುಖಬೆಲೆಯ ನೋಟುಗಳ ಸಂಖ್ಯೆ ಒಟ್ಟಾರೆ ಚಲಾವಣೆಯಲ್ಲಿದ್ದ ಕರೆನ್ಸಿಯ ಅರ್ಧದಷ್ಟಿದ್ದವು. ಒಂದು ವರ್ಷದ ನಂತರ 2000 ರೂ ಮುಖಬೆಲೆಯ ನೋಟುಗಳ ಸಂಖ್ಯೆ ಶೇ.37 ಕ್ಕೆ ಕುಸಿದಿತ್ತು. ಈಗ ಶೇ.31 ಕ್ಕೆ ಕುಸಿದಿದ್ದು, 7.2 ಕೋಟಿ ರೂಪಾಯಿ ಮೌಲ್ಯದಷ್ಟಾಗುವ ನೋಟುಗಳ ಸಂಖ್ಯೆ ಕುಗ್ಗಿದೆ. 

ಇತ್ತೀಚಿನ ದಿನಗಳಲ್ಲಿ ಆರ್ ಬಿಐ 2,000 ರೂ ನೋಟುಗಳ ಮುದ್ರಣವನ್ನು ಕಡಿಮೆ ಮಾಡುತ್ತಿದ್ದು, 500 ರೂಪಾಯಿ ನೋಟುಗಳ ಮುದ್ರಣ ಹೆಚ್ಚಿನ ಸಂಖ್ಯೆಯಲ್ಲಿ ಮಾಡುತ್ತಿದೆ. ಪರಿಣಾಮ ಈಗ ಒಟ್ಟಾರೆ ಚಲಾವಣೆಯಲ್ಲಿರುವ  ಬ್ಯಾಂಕ್ ನೋಟುಗಳ ಪೈಕಿ ಶೇ.51 ರಷ್ಟು ಸಂಖ್ಯೆಯ ನೋಟುಗಳು 500 ರೂಪಾಯಿ ಮುಖಬೆಲೆಯದ್ದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com