ಬ್ಯಾಂಕ್ ನಿಂದ 1 ಕೋಟಿ ರೂ. ಗೂ ಅಧಿಕ ನಗದು ವಿತ್ ಡ್ರಾ ಮಾಡಿದರೆ ಶೇ.2 ಟಿಡಿಎಸ್, ಸೆ.1ರಿಂದ ಜಾರಿ 

ಒಂದು ಕೋಟಿ ರೂಪಾಯಿಗೂ ಅಧಿಕ ನಗದು ವಿತ್ ಡ್ರಾ ಮೇಲೆ ಶೇಕಡಾ 2ರಷ್ಟು ಟಿಡಿಎಸ್ ಕಡಿತ ಮಾಡಲಾಗುವುದು ಎಂದು ಆದಾಯ ಇಲಾಖೆ ತಿಳಿಸಿದ್ದು ನಾಳೆಯಿಂದಲೇ ಜಾರಿಗೆ ಬರಲಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಒಂದು ಕೋಟಿ ರೂಪಾಯಿಗೂ ಅಧಿಕ ನಗದು ವಿತ್ ಡ್ರಾ ಮೇಲೆ ಶೇಕಡಾ 2ರಷ್ಟು ಟಿಡಿಎಸ್ ಕಡಿತ ಮಾಡಲಾಗುವುದು ಎಂದು ಆದಾಯ ಇಲಾಖೆ ತಿಳಿಸಿದ್ದು ನಾಳೆಯಿಂದಲೇ ಜಾರಿಗೆ ಬರಲಿದೆ.


ಆಗಸ್ಟ್ 31 ಅಂದರೆ ಇಂದಿನವರೆಗೆ 1 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಈಗಾಗಲೇ ಗ್ರಾಹಕರು ವಿತ್ ಡ್ರಾ ಮಾಡಿದ್ದರೆ ಅವರಿಗೆ ಸಹ ಶೇಕಡಾ 2ರಷ್ಟು ಟಿಡಿಎಸ್ ಕಡಿತ ಅನ್ವಯವಾಗುತ್ತದೆ. 


ಕಳೆದ ಕೇಂದ್ರ ಬಜೆಟ್ ನಲ್ಲಿ 1 ಕೋಟಿ ರೂಪಾಯಿಗೆ ಅಧಿಕ ಹಣವನ್ನು ವಿತ್ ಡ್ರಾ ಮಾಡಿದ ಗ್ರಾಹಕರ ಮೇಲೆ ಶೇಕಡಾ 2ರಷ್ಟು ಟಿಡಿಎಸ್ ಹಾಕುವುದಾಗಿ ಪ್ರಕಟಿಸಿತ್ತು. ಬ್ಯಾಂಕುಗಳಲ್ಲಿ ನಗದು ವಹಿವಾಟುಗಳಿಗೆ ಕಡಿವಾಣ ಹಾಕಿ ಡಿಜಿಟಲ್ ಮೂಲಕ ವ್ಯವಹಾರ ಉತ್ತೇಜಿಸಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. 


ಸೆಪ್ಟೆಂಬರ್ 1ರಿಂದ ಮೊದಲು 1 ಕೋಟಿಗಿಂತ ಕಡಿಮೆ ನಗದು ಮೊತ್ತ ವಿತ್ ಡ್ರಾ ಮಾಡಿದ್ದರೆ ಟಿಡಿಎಸ್ ಅನ್ವಯವಾಗುವುದಿಲ್ಲ, ಆದರೆ ಹಣಕಾಸು ಕಾಯ್ದೆ 194 ಎನ್ ನಡಿಯಲ್ಲಿ ಏಪ್ರಿಲ್ 1ರಿಂದ ಇಲ್ಲಿಯವರೆಗೆ ನಗದು ವಿತ್ ಡ್ರಾ ಮಾಡಿ ಅದರ ಮೊತ್ತ 1 ಕೋಟಿ ರೂಪಾಯಿ ದಾಟಿದ್ದರೆ ಶೇಕಡಾ 2ರಷ್ಟು ಟಿಡಿಎಸ್ ಕಡಿತವಾಗುತ್ತದೆ. 


ಅಲ್ಲದೆ ಆಗಸ್ಟ್ 31ರವರೆಗೆ ವ್ಯಕ್ತಿ ಬ್ಯಾಂಕ್, ಸಹಕಾರಿ ಬ್ಯಾಂಕುಗಳು ಅಥವಾ ಪೋಸ್ಟ್ ಆಫೀಸ್ ಗಳಿಂದ ವಿತ್ ಡ್ರಾ ಮಾಡಿದ ಹಣದ ಮೊತ್ತ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಾದರೆ ಇನ್ನು ಮುಂದಿನ ವಿತ್ ಡ್ರಾಗಳಿಗೆಲ್ಲ ಶೇಕಡಾ 2ರಷ್ಟು ಟಿಡಿಎಸ್ ಕಡಿತ ಅನ್ವಯವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com