ಎಂಐ ಕ್ರೆಡಿಟ್: ಗ್ಯಾಜೆಟ್ ಗಳ ಬಳಿಕ ಇದೀಗ ವೈಯುಕ್ತಿಕ ಸಾಲ ಸೇವೆ ಆರಂಭಿಸಿದ ಶಿಯೋಮಿ

ಚೀನಾ ಮೂಲದ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಶಿಯೋಮಿ ಇದೀಗ ಭಾರತದಲ್ಲಿ ತನ್ನ ವೈಯುಕ್ತಿಕ ಸಾಲ ಸೇವೆಯನ್ನೂ ಕೂಡ ಆರಂಭಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಚೀನಾ ಮೂಲದ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಶಿಯೋಮಿ ಇದೀಗ ಭಾರತದಲ್ಲಿ ತನ್ನ ವೈಯುಕ್ತಿಕ ಸಾಲ ಸೇವೆಯನ್ನೂ ಕೂಡ ಆರಂಭಿಸಿದೆ.

ಹೌದು.. ಶಿಯೋಮಿ ಕಂಪೆನಿಯು ಭಾರತದಲ್ಲಿ ಎಂಐ ಕ್ರೆಡಿಟ್ ನ್ನು ಬಿಡುಗಡೆಗೊಳಿಸಿದ್ದು, ಯುವ ವೃತ್ತಿಪರರಿಗೆ ತ್ವರಿತವಾಗಿ ಸಾಲ ಸೌಲಭ್ಯ ಪಡೆಯಲು ಇದು ನೆರವಾಗಲಿದೆ ಎಂದು ಹೇಳಿದೆ. ಎಂಐ ಸಂಸ್ಥೆ ತಿಳಿಸುವಂತೆ ಇದು ತನ್ನ ಬಳಕೆದಾರರಿಗೆ ಹಣಕಾಸು ಸಾಲ ಆರಂಭಿಸಲು ಸೂಕ್ತವಾದ ವೇದಿಕೆಯಾಗಲಿದ್ದು, ಕಂಪೆನಿಯು ಎಂಐ ಕ್ರೆಡಿಟ್ ನಲ್ಲಿ ಹಣಕಾಸು ಸಾಲ ನೀಡುವವರ ಬಗೆಗಿನ ಪಟ್ಟಿಯನ್ನು ತಯಾರಿಸಿದ್ದು, ಈ ವೇದಿಕೆಗೆ ಬಳಕೆದಾರರು ಲಾಗ್ ಇನ್ ಆಗಿ ತ್ವರಿತ ಸಾಲಕ್ಕೆ ಅರ್ಜಿ ಹಾಕಬಹುದು. ಇದಕ್ಕಾಗಿ ತನ್ನದೇ ಎಂಐ ಕ್ರೆಡಿಟ್ ಎಂಬ ಆ್ಯಪ್ ಅನ್ನೂ ಕೂಡ ಶಿಯೋಮಿ ಬಿಡುಗಡೆ ಮಾಡಿದೆ.

ಶಿಯೋಮಿ ಬಹಿರಂಗ ಪಡಿಸಿರುವ ಪ್ರಕಾರ ಎಂಐ ಕ್ರೆಡಿಟ್ ಅನ್ನುವುದು ತ್ವರಿತ ಸಾಲ ನೀಡುವ ವೇದಿಕೆಯಾಗಿರುವ ಕ್ರೆಡಿಟ್ ಬೀ ಪಾಲುದಾರಿಕೆಯಲ್ಲಿ ನಡೆಯಲಿದೆ. ಎಂಐ ಕ್ರೆಡಿಟ್ ಶಿಯೋಮಿಯ ಮೂರನೇ ಮತ್ತೊಂದು ಅಂತರ್ಜಾಲ ಸೇವೆಯಾಗಿದ್ದು, ಈಗಾಗಲೇ ಸಂಸ್ಥೆ ಸುಮಾರು 28 ಕೋಟಿ ರೂಗ ಅಧಿಕ ಸಾಲವನ್ನು ವಿತರಣೆ ಮಾಡಿದೆ ಎನ್ನಲಾಗಿದೆ. ಶಿಯೋಮಿ ಎಂಐ ಕ್ರೆಡಿಟ್ ಕೇವಲ MIUI ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತೆ. ಕ್ರೆಡಿಟ್ ಬಿ ಯು 1000 ದಿಂದ 1,00,000 ದ ವರೆಗೆ ಸಾಲವನ್ನು ನೀಡಲಿದ್ದು, ಇದು ಯುವ ವೃತ್ತಿಪರರಿಗೆ ಸಾಕಷ್ಟು ಅನುಕೂಲ ನೀಡಲಿದೆ. 

ಶಿಯೋಮಿ ಹೇಳುವ ಪ್ರಕಾರ ಕೇವಲ 10 ನಿಮಿಷದಲ್ಲಿ ಸಾಲವನ್ನು ಆರಂಭಿಸಲು ಸಾಧ್ಯವಿದ್ದು, ಸರಳವಾದ ಕೆವೈಸಿ ಪರಿಶೀಲನೆಯನ್ನು ಮಾಡಿದರೆ ಸಾಕಾಗುತ್ತದೆ ಎನ್ನಲಾಗಿದೆ. ಕನಿಷ್ಛ 3 ರಿಂದ 12 ತಿಂಗಳವರೆಗಿನ ಅವಧಿಯ ಸಾಲ ಸೌಲ್ಯಭ ಎಂಐ ಕ್ರೆಡಿಟ್ ನಲ್ಲಿ ಲಭ್ಯವಿದ್ದು, ಪ್ರತೀ ತಿಂಗಳಿಗೆ ಶೇ.1.35ರಷ್ಟು ಬಡ್ಡಿ ಇರಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಸಾಲ ಸೌಲಭ್ಯಕ್ಕಾಗಿ ಎಂಐ ಸಂಸ್ಥೆ ಆದಿತ್ಯಾ ಬಿರ್ಲಾ ಫೈನಾನ್ಸ್ ಲಿಮಿಟೆಡ್, ಮನಿ ವ್ಯೂ, ಆರ್ಲಿ ಸ್ಯಾಲರಿ, ಜೆಸ್ಟ್ ಮನಿ, ಕ್ರೆಡಿಟ್ ವಿದ್ಯಾ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com