ರೂ.150 ದಾಟಿದ ಈರುಳ್ಳಿ ದರ: ಬೆಂಗಳೂರು ಸೇರಿ ರಾಜ್ಯದಾದ್ಯಂತ ದರ ಏರಿಕೆ

ರಾಜ್ಯದ ವಿವಿಧೆಡೆ ಈರುಳ್ಳಿ ಬೆಲೆಯು ದಿನಕ್ಕೊಂದು ದಾಖಲೆ ಬರೆಯುತ್ತಾ ಸಾಗಿದೆ. ಬುಧವಾರ ಬೆಳಗಾವಿಯ ಎಪಿಎಂಸಿಯಲ್ಲಿ ಉತೃಷ್ಟ ಗುಣಮಟ್ಟದ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್'ಗೆ ರೂ.13 ಸಾವಿರದಿಂದ ರೂ.15 ಸಾವಿರದವರೆಗೆ ಏರಿಕೆ ಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಈರುಳ್ಳಿ ಬೆಲೆಯು ದಿನಕ್ಕೊಂದು ದಾಖಲೆ ಬರೆಯುತ್ತಾ ಸಾಗಿದೆ. ಬುಧವಾರ ಬೆಳಗಾವಿಯ ಎಪಿಎಂಸಿಯಲ್ಲಿ ಉತೃಷ್ಟ ಗುಣಮಟ್ಟದ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್'ಗೆ ರೂ.13 ಸಾವಿರದಿಂದ ರೂ.15 ಸಾವಿರದವರೆಗೆ ಏರಿಕೆ ಯಾಗಿದೆ. 

ಪರಿಣಾಮ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿಯನ್ನು ರೂ.170 ರಿಂದ 180 ವರೆಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಬೆಂಗಳೂರು ಸಗಟು ಮಾರುಕಟ್ಟೆಯಲ್ಲಿ ಉತೃಷ್ಟ ಗುಣಮಟ್ಟದ ಈರುಳ್ಳಿ ದರ ಕೆಜಿಗೆ ರೂ.140 ತಲುಪಿದೆ. ಈರುಳ್ಳಿ ದರ ಏರಿಕೆಯಿಂದಾಗಿ ಜನಸಾಮಾನ್ಯರ ಜೊತೆಗೆ ಹೋಟೆಲ್ ಉದ್ಯಮವೂ ನಲುಗಿದೆ. 

ಈ ನಡುವೆ ಕೇಂದ್ರ ಸರ್ಕಾರದ ಭರವಸೆಯಂತೆ ವಿದೇಶದಿಂದ ಆಮದಾದರೆ, ದರ ಇಳಿಯಬಹುದು. ಇಲ್ಲವಾದರೆ ಏರುತ್ತಲೇ ಹೋಗುವ ಸಾಧ್ಯತೆ ಇದೆ. ಹೀಗೇ ಮುಂದುವರಿದಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ತಿಂಡಿ-ತಿನಿಸಿನ ದರ ಹೆಚ್ಚಳ ಅನಿವಾರ್ಯವಾಗಲಿದೆ ಎಂದು ರಾಜ್ಯ ಪ್ರಾದೇಶಿಕ ಹೋಟೆಲ್, ಉಪಾಹಾರ ಮಂದಿರಗಳ ಸಂಘದ ಅಧ್ಯಕ್ಷ ಬಿ.ಚಂದ್ರಶೇಖರ್ ಹೆಬ್ಬಾರ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com