ಗಗನ ಕುಸುಮವಾದ ಈರುಳ್ಳಿ ಬೆಲೆ: ಬೆಂಗಳೂರಲ್ಲಿ ಕೆಜಿಗೆ 200 ರೂ!

ಮಾರುಕಟ್ಟೆಗಳಲ್ಲಿ ತೀವ್ರ ಈರುಳ್ಳಿ ಕೊರೆತೆಯ ಕಾರಣದಿಂದಾಗಿ ಬೆಂಗಳೂರಿನಲ್ಲಿ ಈರುಳ್ಳಿ ಬೆಲೆಯೂ ಗಗನ ಕುಸುಮವಾಗಿದ್ದು, ಕೆಜಿ ಈರುಳ್ಳಿ ಬೆಲೆ 200 ರೂಪಾಯಿ ಆಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾರುಕಟ್ಟೆಗಳಲ್ಲಿ ತೀವ್ರ ಈರುಳ್ಳಿ ಕೊರೆತೆಯ ಕಾರಣದಿಂದಾಗಿ ಬೆಂಗಳೂರಿನಲ್ಲಿ ಈರುಳ್ಳಿ ಬೆಲೆಯೂ ಗಗನ ಕುಸುಮವಾಗಿದ್ದು, ಕೆಜಿ ಈರುಳ್ಳಿ ಬೆಲೆ 200 ರೂಪಾಯಿ ಆಗಿದೆ. 

ಸಿಲಿಕಾನ್ ಸಿಟಿಯ ಕೆಲ ರಿಟೈಲ್ ಅಂಗಡಿಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ 200 ರೂ. ಗೆ ಮುಟ್ಟಿದೆ. ಸಗಟು ದರ ಕ್ವಿಂಟಾಲ್ ಗೆ 5, 500 ರಿಂದ 14, 000 ರೂ ನಡುವಣ ಇರುವುದಾಗಿ ರಾಜ್ಯ ಕೃಷಿ ಮಾರುಕಟ್ಟೆ ಅಧಿಕಾರಿ ಸಿದ್ದಗಂಗಯ್ಯ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಈರುಳ್ಳಿ ಬೆಲೆ ಏರಿಕೆಯಿಂದಾಗಿ ಮನೆ ಹಾಗೂ ರೆಸ್ಟೋರೆಂಟ್ ಗಳಲ್ಲಿ ಸರ್ವೆ ಸಾಮಾನ್ಯವಾಗಿ ಮಾಡಲಾಗುತ್ತಿದ್ದ ಈರುಳ್ಳಿಯ ಕೆಲವೊಂದು ಪದಾರ್ಥಗಳು ನಾಪತ್ತೆಯಾಗಿವೆ.

ಭಾರತಕ್ಕೆ ವಾರ್ಷಿಕ 150 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ  ಅಗತ್ಯವಿದೆ. ಕರ್ನಾಟಕ 20.19 ಲಕ್ಷ ಮೆಟ್ರಿಕ್ ಟನ್  ಈರುಳ್ಳಿಯನ್ನು ಉತ್ಪಾದಿಸುತ್ತದೆ.  ಬೆಳೆ ನಷ್ಟದಿಂದಾಗಿ ಶೇ, 50 ರಷ್ಟು ಈರುಳ್ಳಿ ಉತ್ಪಾದನೆ ಕುಂಠಿತವಾಗಿದೆ.ಭಾರಿ ಮಳೆಯ ಕಾರಣದಿಂದಲೂ ಇಳುವರಿ ಕಡಿಮೆಯಾಗಿ ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಪ್ರಮಾಣ ಕಡಿಮೆಯಾಗಿದೆ. 

ನವೆಂಬರ್ ನಲ್ಲಿ  ಕರ್ನಾಟಕ ಮಾರುಕಟ್ಟೆಗಳಲ್ಲಿ ದಿನಕ್ಕೆ 60-70 ಕ್ವಿಂಟಾಲ್ ಈರುಳ್ಳಿ ದೊರಕಿತ್ತು. ಇದು ಡಿಸೆಂಬರ್‌ನಲ್ಲಿ ಶೇಕಡಾ 50 ರಷ್ಟು ಕುಸಿದು ಬಿಕ್ಕಟ್ಟಿಗೆ ಕಾರಣವಾಯಿತು.

ಈರುಳ್ಳಿಯ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ರಜಾದಿನಗಳಲ್ಲಿಯೂ ಈರುಳ್ಳಿ ವ್ಯಾಪಾರ ನಡೆಯಬೇಕು ಎಂದು ಸುತ್ತೋಲೆ ಹೊರಡಿಸಿದೆ.

ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಲ್ಲಿಯೂ ಹೆಚ್ಚಿನ ದಾಸ್ತಾನು ಇಲ್ಲ, ಆಶ್ಚರ್ಯವೆಂದರೆ ರಾಜ್ಯದಲ್ಲಿ  ಅತ್ಯುತ್ತಮ ರೀತಿಯ ಈರುಳ್ಳಿ ದಾಸ್ತಾನು ಸೌಕರ್ಯವೂ ಇಲ್ಲ ಎಂದು ಸಿದ್ದಗಂಗಯ್ಯ ಹೇಳುತ್ತಾರೆ. ಈ ಮಧ್ಯೆ ಕಳ್ಳ ದಾಸ್ತಾನುಗಾರರ ಮೇಲೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ದಾಳಿ ನಡೆಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com