2020ರಲ್ಲಿ ವೈಯಕ್ತಿಕ ತೆರಿಗೆ ದರ ಕಡಿತ: ನಿರ್ಮಲಾ ಸೀತಾರಾಮನ್ ಭರವಸೆ

ದೇಶದ ಆರ್ಥಿಕತೆಯ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು 2020ರ ವೇಳೆಗೆ ವೈಯಕ್ತಿಕ ತೆರಿಗೆ ದರದಲ್ಲಿ ಕಡಿತವನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Published: 08th December 2019 04:11 PM  |   Last Updated: 08th December 2019 04:11 PM   |  A+A-


Nirmala Sitharaman

ನಿರ್ಮಲಾ ಸೀತಾರಾಮನ್

Posted By : Vishwanath S
Source : UNI

ನವದೆಹಲಿ: ದೇಶದ ಆರ್ಥಿಕತೆಯ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು 2020ರ ವೇಳೆಗೆ ವೈಯಕ್ತಿಕ ತೆರಿಗೆ ದರದಲ್ಲಿ ಕಡಿತವನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.  

17ನೇ ಹಿಂದೂಸ್ತಾನ್ ಟೈಮ್ಸ್ ಲೀಡರ್ ಶಿಪ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದಕ್ಕಾಗಿ ಬಜೆಟ್ ಗಾಗಿ ಕಾಯಬೇಕಾಗುತ್ತದೆ ಎಂದರು. 2021ರ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ.

ತೆರಿಗೆ ಅವಧಿಯನ್ನು ಸರಳೀಕರಣಗೊಳಿಸಿ ಅದನ್ನು ಶೋಷಣೆರಹಿತವಾಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು. ದೇಶದ ಆರ್ಥಿಕ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಇದು ಕೆಲ ವಲಯಗಳಿಗೆ ಸೀಮಿತವಾಗಿದ್ದು, ಈಗಾಗಲೇ ಕೆಲ ವಲಯಗಳಲ್ಲಿ ಸುಧಾರಣೆ ಕಾಣುತ್ತಿದೆ. ಇನ್ನು ಕೆಲ ವಲಯಗಳಿಗೆ ನೆರವಿನ ಅಗತ್ಯವಿದೆ ಎಂದರು.

ಜುಲೈ- ಸೆಪ್ಟೆಂಬರ್ ನಲ್ಲಿ ದೇಶದ ಆರ್ಥಿಕ ಪ್ರಗತಿ ಶೇ. 4.5ಕ್ಕಿಳಿದಿದ್ದು,ಇದು ಕಳೆದ ಆರು ವರ್ಷಗಳಲ್ಲಿ ಅತಿ ಕಡಿಮೆ ಜಿಡಿಪಿಯಾಗಿದೆ.

Stay up to date on all the latest ವಾಣಿಜ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp