ಡಿಜಿಟಲ್ ಇಂಡಿಯಾಕ್ಕೆ ಒತ್ತು: ಡಿ.16ರಿಂದ ದಿನದ 24 ಗಂಟೆಯೂ ನೆಫ್ಟ್ ಹಣ ವರ್ಗಾವಣೆ ಸೇವೆ ಲಭ್ಯ 

ಆನ್ ಲೈನ್ ನಲ್ಲಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡುವ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್(ನೆಫ್ಟ್) ಸೇವೆ ಇನ್ನು ಮುಂದೆ ಗ್ರಾಹಕರಿಗೆ ದಿನಪೂರ್ತಿ ದೊರಕಲಿದೆ. ಡಿಸೆಂಬರ್ 16ರಿಂದ ಈ ಸೇವೆ ಚಾಲ್ತಿಗೆ ಬರಲಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಆನ್ ಲೈನ್ ನಲ್ಲಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡುವ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್(ನೆಫ್ಟ್) ಸೇವೆ ಇನ್ನು ಮುಂದೆ ಗ್ರಾಹಕರಿಗೆ ದಿನಪೂರ್ತಿ ದೊರಕಲಿದೆ. ಡಿಸೆಂಬರ್ 16ರಿಂದ ಈ ಸೇವೆ ಚಾಲ್ತಿಗೆ ಬರಲಿದೆ. 


ಕಳೆದ ವಾರ ನಡೆದ ವಿತ್ತೀಯ ನೀತಿ ಸಮಿತಿ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಈ ಸೌಲಭ್ಯವನ್ನು ಪ್ರಕಟಿಸಿದ್ದು, ಡಿಸೆಂಬರ್ 16ರ ನಂತರ ಗ್ರಾಹಕರಿಗೆ ಈ ವ್ಯವಸ್ಥೆ ದಿನಪೂರ್ತಿ ಲಭ್ಯವಾಗಲಿದೆ. ಆನ್ ಲೈನ್ ನಲ್ಲಿ ಗ್ರಾಹಕರಿಗೆ ಹಣ ವ್ಯವಹಾರ ಸುಲಭವಾಗಲು ಈ ವ್ಯವಸ್ಥೆಯನ್ನು ದಿನದ 24 ಗಂಟೆಯೂ ಸಿಗುವಂತೆ ಮಾಡಲಾಗುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಪ್ರಕಟಣೆ ತಿಳಿಸಿದೆ.


ಇದುವರೆಗೆ ಆನ್ ಲೈನ್ ನಲ್ಲಿ ಗ್ರಾಹಕರು ಸಾಯಂಕಾಲ 7 ಗಂಟೆಯ ನಂತರ ಹಣ ವರ್ಗಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಬ್ಯಾಂಕ್ ಕಾರ್ಯನಿರ್ವಹಿಸುವ ದಿನಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ  ಮತ್ತು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಗ್ರಾಹಕರಿಗೆ ಲಭ್ಯವಾಗುತ್ತಿತ್ತು. ಇನ್ನು ಮುಂದೆ ದಿನದ ಯಾವುದೇ ಸಮಯದಲ್ಲಿ 2 ಲಕ್ಷದವರೆಗೆ ಹಣವನ್ನು ಆನ್ ಲೈನ್ ನಲ್ಲಿ ವರ್ಗಾವಣೆ ಮಾಡಲು ಸಾಧ್ಯವಿದೆ.

ಮೊದಲ ಹಣ ವರ್ಗಾವಣೆಯನ್ನು ಡಿಸೆಂಬರ್‌ 16ರ ಮಂಜಾನೆ 00:30 ಗಂಟೆಗೆ (ಅಂದರೆ ಡಿಸೆಂಬರ್ 15ರ ರಾತ್ರಿ) ನಡೆಯಲಿದೆ. ಇದಕ್ಕೆ ಬೇಕಾದ ಅಗತ್ಯ ಏರ್ಪಾಟುಗಳನ್ನು ಮಾಡುವಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com