ಚಿನ್ನದ ದರದಲ್ಲಿ ಮತ್ತೆ ಇಳಿಕೆ, ಇಂದಿನ ದರ ಎಷ್ಟು ಗೊತ್ತಾ?

ಗಗನದತ್ತ ಮುಖ ಮಾಡಿದ್ದ ಹಳದಿ ಲೋಹ ಚಿನ್ನದ ದರ ಇದೀಗ ಇಳಿಕೆಯತ್ತ ಮುಖ ಮಾಡಿದ್ದು, ಸತತ ಆರು ದಿನಗಳ ಬಳಿಕವೂ ಚಿನ್ನದ ದರಗಳು ಮತ್ತೆ ಇಳಿಕೆ ಕಂಡಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಗಗನದತ್ತ ಮುಖ ಮಾಡಿದ್ದ ಹಳದಿ ಲೋಹ ಚಿನ್ನದ ದರ ಇದೀಗ ಇಳಿಕೆಯತ್ತ ಮುಖ ಮಾಡಿದ್ದು, ಸತತ ಆರು ದಿನಗಳ ಬಳಿಕವೂ ಚಿನ್ನದ ದರಗಳು ಮತ್ತೆ ಇಳಿಕೆ ಕಂಡಿವೆ.

ಸತತ ಆರು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದೆ. ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆಯಲ್ಲಿ ಶೇ.0.05ರಷ್ಟು ಇಳಿಕೆ ಕಂಡಿದ್ದು, ಪ್ರತೀ ಗ್ರಾಂ ಚಿನ್ನದ ದರದಲ್ಲಿ 73 ರೂ ಗಳು ಇಳಿಕೆಯಾಗಿದೆ. ಆ ಮೂಲಕ 10 ಗ್ರಾಂ ಚಿನ್ನದ ಬೆಲೆ ಇದೀಗ 37,551 ರೂ. ಆಗಿದೆ. ಮಂಗಳವಾರ ಇದೇ ಚಿನ್ನ ಪ್ರತೀ 10 ಗ್ರಾಂ ಗೆ 38,559 ರೂಗಳಾಗಿತ್ತು.

ಈ ದರ ಇಳಿಕೆಯೊಂದಿಗೆ ಕಳೆದ ಮೂರು ತಿಂಗಳ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ಒಟ್ಟು 2,400 ರೂ. ಇಳಿಕೆಯಾದಂತಾಗಿದೆ.

ಇನ್ನು ಬೆಳ್ಳಿ ದರದಲ್ಲೂ ಕೂಡ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಒಟ್ಟು ಶೇ.0.09ರಷ್ಟು (89 ರೂ) ದರ ಇಳಿಕೆ ದಾಖಲಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 43,469 ರೂ. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ಗಮನಾರ್ಹ ಇಳಿಕೆ ಕಂಡಿದ್ದು, ಒಟ್ಟು ಶೇ.1.2ರಷ್ಟು ಇಳಿಕೆ ದಾಖಲಾಗಿದೆ. ಈ ಮೂಲಕ ಒಂದು ಔನ್ಸ್ ಚಿನ್ನದ ಬೆಲೆ 1,463.59 ಡಾಲರ್ ಆಗಿದೆ. ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಕೂಡ ಶೇ.0.1ರಷ್ಟು ಕಡಿಮೆಯಾಗಿದ್ದು, ಒಂದು ಔನ್ಸ್ ಬೆಳ್ಳಿಯ ಬೆಲೆ 16.63 ಡಾಲರ್ ಗೆ ಇಳಿಕೆಯಾದಂತಾಗಿದೆ.

ಇದೇ ವೇಳೆ ಇದೇ ಡಿಸೆಂಬರ್ 15ರಂದು ಅಮೆರಿಕ ಫೆಡರಲ್ ಬ್ಯಾಂಕ್ ತನ್ನ ನೂತನ ಆರ್ಥಿಕ ನೀತಿಯನ್ನು ಘೋಷಣೆ ಮಾಡಲಿದ್ದು, ಬಡ್ಡಿದರ ಇಳಿಕೆಯಾಗುವ ನಿರೀಕ್ಷೆ ಇದೆ. ಇದೂ ಕೂಡ ಹೂಡಿಕೆದಾರರ ಚಿನ್ನದ ಮೇಲಿನ ಅವಲಂಬಮೆಯನ್ನು ಕಡಿಮೆ ಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com