12 ತಿಂಗಳಲ್ಲಿ ಕಾಲ್ ಡ್ರಾಪ್‌ಗಾಗಿ ಟೆಲಿಕಾಂ ಕಂಪನಿಗಳಿಗೆ 3.2 ಕೋಟಿ ರೂ. ದಂಡ; ವೊಡಾಫೋನ್, ಐಡಿಯಾಗೆ ಅತೀ ಹೆಚ್ಚು!

ಕಾಲ್ ಡ್ರಾಪ್ ತಡೆಗೆ ಕೇಂದ್ರ ಸರ್ಕಾರ ಕಠಿನ ಕ್ರಮಗಳನ್ನು ಕೈಗೊಂಡಿದ್ದು ಕಳೆದ 12 ತಿಂಗಳಲ್ಲಿ ಕಾಲ್ ಡ್ರಾಪ್‌ಗಾಗಿ ಟೆಲಿಕಾಂ ಕಂಪನಿಗಳಿಗೆ ಬರೋಬ್ಬರಿ 3.2 ಕೋಟಿ ರುಪಾಯಿ ದಂಡವನ್ನು ವಿಧಿಸಲಾಗಿದ್ದು ಇದರಲ್ಲಿ ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ಅತೀ ಹೆಚ್ಚು ದಂಡ ತೆತ್ತಲಿವೆ.
ಟೆಲಿಕಾಂ ಕಂಪನಿಗಳು
ಟೆಲಿಕಾಂ ಕಂಪನಿಗಳು

ನವದೆಹಲಿ: ಕಾಲ್ ಡ್ರಾಪ್ ತಡೆಗೆ ಕೇಂದ್ರ ಸರ್ಕಾರ ಕಠಿನ ಕ್ರಮಗಳನ್ನು ಕೈಗೊಂಡಿದ್ದು ಕಳೆದ 12 ತಿಂಗಳಲ್ಲಿ ಕಾಲ್ ಡ್ರಾಪ್‌ಗಾಗಿ ಟೆಲಿಕಾಂ ಕಂಪನಿಗಳಿಗೆ ಬರೋಬ್ಬರಿ 3.2 ಕೋಟಿ ರುಪಾಯಿ ದಂಡವನ್ನು ವಿಧಿಸಲಾಗಿದ್ದು ಇದರಲ್ಲಿ ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ಅತೀ ಹೆಚ್ಚು ದಂಡ ತೆತ್ತಲಿವೆ.

2018ರ ಸೆಪ್ಟೆಂಬರ್ ನಿಂದ 2019ರ ಜೂನ್ ವರೆಗಿನ ಅವಧಿಯಲ್ಲಿ ಟೆಲಿಕಾಂ ಸಂಸ್ಥೆಗಳಿಗೆ 3.2 ಕೋಟಿ ರುಪಾಯಿ ದಂಡ ವಿಧಿಸಲಾಗಿದ್ದು ಇದರಲ್ಲಿ ವೊಡಾಫೋನ್ ಮತ್ತು ಐಡಿಯಾ ಕಂಪನಿಗಳಿಗೆ 1.76 ಕೋಟಿ ರುಪಾಯಿ ದಂಡ ವಿಧಿಸಲಾಗಿದೆ. ಇನ್ನು ರಿಲಯನ್ಸ್ ಜಿಯೋ ಅತೀ ಕಡಿಮೆ ದಂಡ 6.5 ಲಕ್ಷ ರುಪಾಯಿ ತೆತ್ತಲಿದೆ. 

ಇನ್ನು ಸರ್ಕಾರಿ ಒಡೆತನದ ಬಿಎಸ್ ಎನ್ಎಲ್ ಗೆ 47.5 ಲಕ್ಷ ರುಪಾಯಿ ದಂಡ ವಿಧಿಸಲಾಗಿದ್ದು ಟಾಟಾ ಟೆಲಿ ಸರ್ವಿಸ್ ಗೆ 56 ಲಕ್ಷ ಮತ್ತು ಭಾರತಿ ಏರ್ ಟೆಲ್ ಗೆ 34 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com