ಡಿಸೆಂಬರ್ 31ರೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡೋದು ಕಡ್ಡಾಯ: ಐಟಿ ಇಲಾಖೆ

ಈ ವರ್ಷದ ಅಂತ್ಯದ ವೇಳೆಗೆ ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಭಾನುವಾರ ಸಾರ್ವಜನಿಕ ಸಂದೇಶದಲ್ಲಿ ತಿಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಈ ವರ್ಷದ ಅಂತ್ಯದ ವೇಳೆಗೆ ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಭಾನುವಾರ ಸಾರ್ವಜನಿಕ ಸಂದೇಶದಲ್ಲಿ ತಿಳಿಸಿದೆ.

"ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ! ಆದಾಯ ತೆರಿಗೆ ಸೇವೆಗಳ ತಡೆರಹಿತ ಲಾಭವನ್ನು ಪಡೆಯಲು, 2019 ರ ಡಿಸೆಂಬರ್ 31 ರ ಮೊದಲು ಪ್ರಮುಖ ಲಿಂಕ್ ಅನ್ನು ಪೂರ್ಣಗೊಳಿಸಿ" ಎಂದು ಇಲಾಖೆ ತಿಳಿಸಿದೆ.

ಗಡುವು ಮುಗಿಯುವ ಹದಿನೈದು ದಿನಗಳ ಮೊದಲು ಹೊರಡಿಸಿದ ಸಾರ್ವಜನಿಕ ಸಂದೇಶದ ಪ್ರಕಾರ ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಹೊರಡಿಸಲಾದ ಆದೇಶದ ಮೂಲಕ ಶಾಶ್ವತ ಖಾತೆ ಸಂಖ್ಯೆಯನ್ನು (ಪ್ಯಾನ್) ಆಧಾರ್‌ನೊಂದಿಗೆ ಜೋಡಿಸುವ ಗಡುವನ್ನು ಡಿಸೆಂಬರ್ 31 ರವರೆಗೆ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ವಿಸ್ತರಿಸಿತ್ತು.ಈ ಮೊದಲು, ಸೆಪ್ಟೆಂಬರ್ 30 ರ ಗಡುವು ನಿಗದಿಯಾಗಿತ್ತು. 

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಕೇಂದ್ರದ ಪ್ರಮುಖ ಆಧಾರ್ ಯೋಜನೆಯನ್ನು ಸಾಂವಿಧಾನಿಕವಾಗಿ ಮಾನ್ಯ ಎಂದು ಘೋಷಿಸಿತ್ತು ಮತ್ತು ಐ-ಟಿ ರಿಟರ್ನ್ಸ್ ಸಲ್ಲಿಸಲು ಮತ್ತು ಪ್ಯಾನ್ ಹಂಚಿಕೆಗೆ ಬಯೋಮೆಟ್ರಿಕ್ ಐಡಿ ಕಡ್ಡಾಯವಾಗಿ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com