ಮತ್ತೆ ಸಾರ್ವಕಾಲಿಕ ದಾಖಲೆ ಬರೆದ ಭಾರತೀಯ ಷೇರುಮಾರುಕಟ್ಟೆ, 41,332ಕ್ಕೆ ತಲುಪಿದ ಸೆನ್ಸೆಕ್ಸ್

ಭಾರತೀಯ ಷೇರುಮಾರುಕಟ್ಟೆ ಮತ್ತೆ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದ್ದು, ಮಂಗವಾರದ ವಹಿವಾಟಿನ ಅಂತ್ಯಕ್ಕೆ 394 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್  41,332 ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತೀಯ ಷೇರುಮಾರುಕಟ್ಟೆ ಮತ್ತೆ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದ್ದು, ಮಂಗವಾರದ ವಹಿವಾಟಿನ ಅಂತ್ಯಕ್ಕೆ 394 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್  41,332 ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ.

ನಿನ್ನೆ ವಾರದ ಮೊದಲ ದಿನದ ಆರಂಭದ ವಹಿವಾಟಿನಲ್ಲೇ ಸೆನ್ಸೆಕ್ಸ್ 175 ಅಂಕಗಳ ಏರಿಕೆ ಕಾಣುವ ಮೂಲಕ ಸಾರ್ವಕಾಲಿಕೆ ದಾಖಲೆ ನಿರ್ಮಾಣ ಮಾಡಿದ್ದ ಸೆನ್ಸೆಕ್ಸ್ ಇಂದು ಮತ್ತೆ, 394 ಅಂಕಗಳ ಏರಿಕೆಯೊಂದಿಗೆ 41,332 ಅಂಕಗಳ ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ. ನಿಫ್ಟಿ ಕೂಡ ಇಂದು ದಾಖಲೆಯ 104 ಅಂಕಗಳ ಏರಿಕೆ ಕಾಣುವ ಮೂಲಕ 12,158 ಅಂಕಗಳಿಗೆ ಏರಿಕೆಯಾಗಿದ್ದು, ಶೇ.0.8ರಷ್ಟು ಏರಿಕೆ ಕಂಡಿದೆ.

ಇಂದಿನ ವಹಿವಾಟಿನಲ್ಲಿ ಔಷಧ ಮತ್ತು ರಿಯಾಲಿಟಿ ಸೆಕ್ಟರ್ ಗಳ ಷೇರುಮೌಲ್ಯ ಏರಿಕೆಯಾಗಿದ್ದು, ಉಕ್ಕು ವಿಭಾಗದ ಸಂಸ್ಥೆಯ ಷೇರುಗಳ ಮೌಲ್ಯ ಶೇ.3ರಷ್ಟು ಏರಿಕೆ ಕಂಡಿದೆ. ಪ್ರಮುಖವಾಗಿ ಟಾಟಾ ಸ್ಟೀಲ್, ವೇದಾಂತ, ಹಿಂಡಾಲ್ಕೋ, ಜೆಎಸ್ ಡಬಲ್ಯೂ ಸಂಸ್ಥೆಗಳ ಷೇರು ಮೌಲ್ಯದಲ್ಲಿ ಶೇ.2.5ರಷ್ಟು ಏರಿಕೆಯಾಗಿದೆ. ಅಂತೆಯೇ ಟಾಟಾ ಮೋಟಾರ್ಸ್, ಎಚ್ ಡಿಎಫ್ ಸಿ, ಇನ್ಫೋಸಿಸ್ ಸಂಸ್ಥೆಯ ಷೇರುಗಳ ಮೌಲ್ಯವೂ ಏರಿಕೆಯಾಗಿದೆ.

ಗೇಲ್, ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬಜಾಜ್ ಆಟೋ ಷೇರುಗಳ ಮೌಲ್ಯ ಕೂಡ ಶೇ. 2%ರಷ್ಟು ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com