ತೆರಿಗೆ ವಂಚನೆ: ಇನ್ಫೊಸಿಸ್‌ಗೆ ₹ 5.68 ಕೋಟಿ ದಂಡ ವಿಧಿಸಿದ ಕ್ಯಾಲಿಫೋರ್ನಿಯಾ 

ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿ ಇನ್ಫೋಸಿಸ್‌ ಗೆ ಕ್ಯಾಲಿಫೋರ್ನಿಯಾ ಸರ್ಕಾರ ಭಾರೀ ಪ್ರಮಾಣದ ದಂಡ ವಿಧಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿ ಇನ್ಫೋಸಿಸ್‌ ಗೆ ಕ್ಯಾಲಿಫೋರ್ನಿಯಾ ಸರ್ಕಾರ ಭಾರೀ ಪ್ರಮಾಣದ ದಂಡ ವಿಧಿಸಿದೆ. 

ವೀಸಾ ನಿಯಮ ಉಲ್ಲಂಘನೆ ಮತ್ತು ತೆರಿಗೆ ವಂಚಿಸಿದ ಕಾರಣಕ್ಕೆ ಕ್ಯಾಲಿಫೋರ್ನಿಯಾ ಸರಕಾರಕ್ಕೆ ₹5.68 ಕೋಟಿ ದಂಡ ಕಟ್ಟಬೇಕಿದೆ.

ಕ್ಯಾಲಿಫೋರ್ನಿಯಾ ಅಟರ್ನಿ ಜನರಲ್‌ ಕಚೇರಿ, ಕಂಪನಿ ವಂಚನೆ ಮಾಡಿದೆ ಎಂದು ಆರೋಪ ಮಾಡಿದ್ದು, ಇನ್ಫೋಸಿಸ್‌ ಲಿಮಿಟೆಡ್‌, ಬಿಸಿನೆಸ್‌ ಕನ್ಸಲ್ಟಿಂಗ್, ಇನ್ಫರ್ಮೇಷನ್ ಟೆಕ್ನಾಲಜಿ ಎಂಡ್ ಔಟ್‌ಸೋರ್ಸಿಂಗ್ ಕಂಪನಿ ಮತ್ತು ಅದರ ಅಂಗಸಂಸ್ಥೆ, ಇನ್ಫೋಸಿಸ್ ಬಿಪಿಎಂ ಲಿಮಿಟೆಡ್‌ಗೆ ಬಹುದೊಡ್ಡ ಮೊತ್ತದ ದಂಡ ವಿಧಿಸಿದೆ.

ಸುಳ್ಳು ವೀಸಾದಡಿ ಕಂಪನಿ ತನ್ನ ಕೆಲಸಗಾರರನ್ನು ಕ್ಯಾಲಿಫೋರ್ನಿಯಾಗೆ ಕರೆದುಕೊಂಡು ಬರುವುದರ ಜೊತೆಗೆ ಕ್ಯಾಲಿಫೋರ್ನಿಯಾದ ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಂಡಿದೆ ಎಂದು ಅಟರ್ನಿ ಜನರಲ್‌ ಕಚೇರಿ ಆರೋಪಿಸಿದೆ.

ಅಧಿಕ ಆದಾಯ, ಲಾಭ ಬಿಂಬಿಸಲು ಯತ್ನ: ಇನ್ಫೋಸಿಸ್‌ ಸಿಇಒ ಸಲೀಲ್‌ ಪರೇಖ್‌ ವಿರುದ್ಧ ನೌಕರರ ಗುಂಪು ದೂರು

ಕ್ಯಾಲಿಫೋರ್ನಿಯಾದಲ್ಲಿರುವ ಇನ್ಫೋಸಿಸ್‌ ಕಂಪನಿಯಲ್ಲಿ ಸುಮಾರು 500 ಮಂದಿ ಕಾರ್ಮಿಕರಿದ್ದು, 2006 ರಿಂದ 2017ರ ಮಧ್ಯೆ ಕಂಪನಿ ಕೆಲಸಗಾರರಿಗೆ ಎಚ್‌-1ಬಿ ವೀಸಾ ನೀಡುವ ಬದಲು ಬಿ-1 ವೀಸಾ ಕೊಟ್ಟಿದೆ. ರಾಜ್ಯ ತೆರಿಗೆ ಅಲ್ಲದೆಯೂ ಎಚ್‌-1ಬಿ ವೀಸಾ ನೀಡಿದರೆ, ಉದ್ಯೋಗಿಗಳಿಗೆ ಕಂಪನಿಯು ಸ್ಥಳೀಯ ವೇತನ ಕೂಡ ನೀಡಬೇಕಾಗುತ್ತದೆ. ಇದರಲ್ಲಿ ಕೂಡ ಕಂಪನಿ ಮೋಸ ಮಾಡಿದೆ ಎಂಬ ಆರೋಪವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com