ಆರ್ಥಿಕ ಹಿಂಜರಿಕೆ: ಪ್ರತಿ ತಿಂಗಳು 1.10 ಲಕ್ಷ ತೆರಿಗೆ ಸಂಗ್ರಹಿಸಲು ತೆರಿಗೆ ಇಲಾಖೆ ಅಧಿಕಾರಿಗಳಿಗೆ ಕೇಂದ್ರ ತಾಕೀತು 

ಹಣಕಾಸಿನ ಇಳಿಮುಖದ ಭೀತಿಯ ಮಧ್ಯೆ ಆರ್ಥಿಕ ಪುನಶ್ಚೇತಕ್ಕೆ ಕೇಂದ್ರ ಸರ್ಕಾರ ತೆರಿಗೆ ಇಲಾಕೆ ಅಧಿಕಾರಿಗಳ ಬೆನ್ನುಬಿದ್ದಿದೆ. ಪ್ರತಿ ತಿಂಗಳು ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) 1.10 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಬೇಕೆಂದು ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. 
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಹಣಕಾಸಿನ ಇಳಿಮುಖದ ಭೀತಿಯ ಮಧ್ಯೆ ಆರ್ಥಿಕ ಪುನಶ್ಚೇತಕ್ಕೆ ಕೇಂದ್ರ ಸರ್ಕಾರ ತೆರಿಗೆ ಇಲಾಕೆ ಅಧಿಕಾರಿಗಳ ಬೆನ್ನುಬಿದ್ದಿದೆ. ಪ್ರತಿ ತಿಂಗಳು ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) 1.10 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಬೇಕೆಂದು ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.


ಈ ಸಂಬಂಧ ಆದಾಯ ಇಲಾಖೆ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ನೊಟೀಸ್ ಜಾರಿ ಮಾಡಿದ್ದು, ಅದರ ಪ್ರಕಾರ ಮುಂದಿನ ತಿಂಗಳುಗಳಲ್ಲಿ 1.10 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹಿಸಬೇಕೆಂದು ಹೇಳಲಾಗಿದೆ. ಪ್ರಮುಖ ತಿಂಗಳುಗಳಲ್ಲಿ ಈ ಮೊತ್ತ 1.25 ಲಕ್ಷ ಕೋಟಿಯ ಸಂಗ್ರಹದ ಗುರಿ ಇರಿಸಲಾಗಿದೆ. ಕೇಂದ್ರ ಸರ್ಕಾರದ 2018-19ನೇ ಸಾಲಿನ ಬಜೆಟ್ ಅಂದಾಜು ಮೊತ್ತ 7.43 ಲಕ್ಷ ಕೋಟಿ ರೂಪಾಯಿಗಳಾಗಿದ್ದರೆ, ವಾರ್ಷಿಕ ಸಂಗ್ರಹ ಶೇಕಡಾ 22ರಷ್ಟು ಕಡಿಮೆಯಾಗಿ 5.81 ಲಕ್ಷ ಕೋಟಿಯಷ್ಟಾಗಿತ್ತು.


ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್ ಟಿ ಸಂಗ್ರಹದ ಅಂದಾಜು ಮೊತ್ತ 1.18 ಲಕ್ಷ ಕೋಟಿ ರೂಪಾಯಿಗಳಾಗಿದೆ. ಕಳೆದ ಏಳು ತಿಂಗಳಲ್ಲಿ ಸರಾಸರಿ 1 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇನ್ನು ಮೂರು ತಿಂಗಳು ಬಾಕಿಯಿದೆ. ಈಗಾಗಲೇ ನಿಗದಿಗಿಂತ ಕಡಿಮೆ ಸಂಗ್ರಹವಾಗಿರುವುದರಿಂದ ಮುಂದಿನ ಮೂರು ತಿಂಗಳಲ್ಲಿ ಸಾಧ್ಯವಾದಷ್ಟು ಹಣ ಸಂಗ್ರಹಿಸಬೇಕೆಂದು ಕೇಂದ್ರ ಸರ್ಕಾರ ತೆರಿಗೆ ಇಲಾಖೆ ಮೇಲೆ ಒತ್ತಡ ಹಾಕುತ್ತಿದೆ.


ನೇರ ಮತ್ತು ಪರೋಕ್ಷ ತೆರಿಗೆ ಇಲಾಖೆಗಳ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿರುವ ಆದಾಯ ಇಲಾಖೆ ಕಾರ್ಯದರ್ಶಿ, ಕಡಿಮೆ ಆದಾಯ ಸಂಗ್ರಹಣೆಗೆ ಕಾರ್ಪೊರೇಟ್ ತೆರಿಗೆ ದರ ಕಡಿತ ವಿನಾಯಿತಿಯ ಕಾರಣವಾಗುವುದಿಲ್ಲ. ಕೇಂದ್ರ ನೇರ ತೆರಿಗೆ ಮಂಡಳಿ ಮತ್ತು ಪರೋಕ್ಷ ತೆರಿಗೆ ಮಂಡಳಿಯ ಹಿರಿಯ ಅಧಿಕಾರಿಗಳು ಕ್ಷೇತ್ರಭೇಟಿ ಮಾಡಿ ತೆರಿಗೆ ಸಂಗ್ರಹಣೆಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಜಿಎಸ್ಟಿ ರಿಟರ್ನ್ಸ್ ಮಾಹಿತಿಯ ಅಂಕಿಅಂಶವನ್ನು ನಿಕಟ ಪರಿಶೀಲನೆಗಾಗಿ ಆದಾಯ ತೆರಿಗೆ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com