ಹೊಸ ವರ್ಷಕ್ಕೆ ಮುನ್ನವೇ 'ಹ್ಯಾಪಿ ನ್ಯೂ ಇಯರ್' ಎಂದ ಜಿಯೋ ಗ್ರಾಹಕರಿಗೆ ಕೊಟ್ಟ ಕೊಡುಗೆ ಏನು ಗೊತ್ತಾ?

ಟೆಲಿಕಾಂ ಕ್ಷೇತ್ರದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸವರ್ಷಕ್ಕೆ  '2020 ಹ್ಯಾಪಿ ನ್ಯೂ ಇಯರ್ ಆಫರ್' ಅನ್ನು ಬಿಡುಗಡೆ ಮಾಡಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು ಎರಡು ಬಗೆಯಲ್ಲಿ ಲಭ್ಯವಿದೆ. ಒಂದು  ಜಿಯೋ ಫೋನ್ ಗ್ರಾಹಕರಿಗೆ ಮತ್ತು ಇನ್ನೊಂದು ಇತರ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ರೀಚಾರ್ಜ್ ಕೊಡುಗೆಯಾಗಿದೆ.
ಜಿಯೋ
ಜಿಯೋ

ಟೆಲಿಕಾಂ ಕ್ಷೇತ್ರದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸವರ್ಷಕ್ಕೆ  '2020 ಹ್ಯಾಪಿ ನ್ಯೂ ಇಯರ್ ಆಫರ್' ಅನ್ನು ಬಿಡುಗಡೆ ಮಾಡಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು ಎರಡು ಬಗೆಯಲ್ಲಿ ಲಭ್ಯವಿದೆ. ಒಂದು  ಜಿಯೋ ಫೋನ್ ಗ್ರಾಹಕರಿಗೆ ಮತ್ತು ಇನ್ನೊಂದು ಇತರ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ರೀಚಾರ್ಜ್ ಕೊಡುಗೆಯಾಗಿದೆ.

ಜಿಯೋ ರೀಚಾರ್ಜ್ ಕೊಡುಗೆ:

ಈ ರೀಚಾರ್ಜ್ ಕೊಡುಗೆಪಡೆಯಲಿಕ್ಕಾಗಿ ನೀವು 2,020 ರೂ. ರೀಚಾರ್ಜ್ ಮಾಡಬೇಕು. ಈ ರೀಚಾರ್ಜ್ ಅವಧಿ ಒಂದು ವರ್ಷದವರೆಗೆ ಮಾನ್ಯವಾಗಿರಲಿದೆ. 
ಡೇಟಾ ದಿನಕ್ಕೆ 1.5 ಜಿಬಿ
ಜಿಯೋ ಟು ಜಿಯೋ ಕರೆಗಳು ಅನಿಯಮಿತ ಉಚಿತ ಕರೆ 
ಜಿಯೋ ಟು ನಾನ್-ಜಿಯೋ ಕರೆಗಳು ಮೊದಲ 12,000 ನಿಮಿಷಗಳನ್ನು ಉಚಿತವಾಗಿ ನೀಡುತ್ತವೆ, ಅದರ ನಂತರ ನಿಮಗೆ 6 ಪೈಸೆ / ನಿಮಿಷ ಶುಲ್ಕವಿರಲಿದೆ.
ದಿನಕ್ಕೆ 100 ಉಚಿತ ಎಸ್‌ಎಂಎಸ್
ಜಿಯೋ ಅಪ್ಲಿಕೇಷನ್ ಬಳಕೆ ಉಚಿತ

ಈ ರೂ 2020 ರ ರೀಚಾರ್ಜ್ ಯೋಜನೆ ಸೀಮಿತ ಅವಧಿಯ ಕೊಡುಗೆ ಎಂದು ಜಿಯೋ ಘೋಷಿಸಿದ್ದರೂ, ಇದಕ್ಕಿನ್ನೂ ಅಂತಿಮ ದಿನಾಂಕವನ್ನು ಘೋಷಿಸಿಲ್ಲ.

ಮುಖೇಶ್ ಅಂಬಾನಿಯ ಕಂಪನಿಯು 1299 ರೂ.ಗೆ ಮತ್ತೊಂದು ರೀಚಾರ್ಜ್ ಯೋಜನೆಯನ್ನು ಸಹ ನೀಡುತ್ತದೆ. ಈ ಯೋಜನೆ 365 ದಿನಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ಅನಿಯಮಿತ ಜಿಯೋ ಟು ಜಿಯೋ ಕರೆಗಳು ಮತ್ತು ಜಿಯೋ ಅಲ್ಲದ ಸಂಖ್ಯೆಗಳಿಗೆ 12,000 ನಿಮಿಷಗಳ ಉಚಿತ ಟಾಕ್ ಟೈಮ್ ಬರುತ್ತದೆ. ಆದಾಗ್ಯೂ, ಡೇಟಾವನ್ನು ವರ್ಷಕ್ಕೆ ಕೇವಲ 24 ಜಿಬಿಗೆ ಸೀಮಿತಗೊಳಿಸಲಾಗಿದೆ.

ಜಿಯೋ ಫೋನ್ ಕೊಡುಗೆ:

ಜಿಯೋ ತನ್ನ ಜಿಯೋಫೋನ್ ಗ್ರಾಹಕರಿಗೆ ಮತ್ತೊಂದು ಕೊಡುಗೆಯನ್ನು ಪರಿಚಯಿಸಿದೆ. ಈ ಯೋಜನೆಯಡಿಯಲ್ಲಿ, ನೀವು ಹೊಸ ಹ್ಯಾಂಡ್‌ಸೆಟ್ ಮತ್ತು ವಾರ್ಷಿಕ ರೀಚಾರ್ಜ್ ಯೋಜನೆ ಎರಡನ್ನೂ 2020 ರೂ.ಗೆ ಖರೀದಿಸಬಹುದು. ಈ ಕೊಡುಗೆ ಒಂದು ವರ್ಷಕ್ಕೆ ಮಾನ್ಯವಾಗಿರುತ್ತದೆ.

ಜಿಯೋ ಹ್ಯಾಂಡ್‌ಸೆಟ್ + ವಾರ್ಷಿಕ ರೀಚಾರ್ಜ್ ಯೋಜನೆ 2020 ರೂ
ಡೇಟಾ ದಿನಕ್ಕೆ 0.5 ಜಿಬಿ
ಜಿಯೋ ಟು ಜಿಯೋ ಕರೆಗಳು ಅನಿಯಮಿತ ಉಚಿತ ಕರೆಗಳು
ಜಿಯೋ ಟು ನಾನ್-ಜಿಯೋ ಮೊದಲ 6000 ನಿಮಿಷಗಳು ಉಚಿತ ಬಳಿಕ ನಿಮಗೆ 6 ಪೈಸೆ / ನಿಮಿಷ ಶುಲ್ಕವಿರಲಿದೆ.
ವರ್ಷಕ್ಕೆ 3600 ಎಸ್‌ಎಂಎಸ್
ಜಿಯೋ ಅಪ್ಲಿಕೇಷನ್ ಬಳಕೆ ಉಚಿತ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com