ಬೆಂಗಳೂರು: ಹಬ್ಬದ ದಿನಗಳಲ್ಲಿಮತ್ತೆ ಕಣ್ಣೀರಾದ ಈರುಳ್ಳಿ,, ಬೆಲೆ ಏರಿಕೆಯಿಂದ ಗ್ರಾಹಕ ತತ್ತರ

ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಈರುಳ್ಳಿ ಇನ್ನೂ ಕಣ್ಣೀರು ತರಿಸುವುದು ನಿಂತಿಲ್ಲ. ದೊಡ್ಡ ಗಾತ್ರದ ಈರುಳ್ಳಿ ಬೆಂಗಳೂರು ಮಾರುಕಟ್ತೆಗೆ ಬಂದಿದ್ದು  ಪ್ರತಿ ಕೆಜಿಗೆಸಾರ್ವಕಾಲಿಕ ಗರಿಷ್ಠ 170 ರೂ.ಗೆ ತಲುಪಿದೆ. ಈರುಳ್ಳಿ ವ್ಯಾಪಾರಿಗಳು, ಇಲ್ಲಿನ ನಿವಾಸಿಗಳು ಹಾಗೂ ಹೋಟೆಲ್ ಮಾಲೀಕರು, ಚಿಲ್ಲರೆ ವ್ಯಾಪಾರಿಗಳು ಹಬ್ಬದ ಋತುವಿನ ನ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ 
ಬೆಂಗಳೂರು: ಹಬ್ಬದ ದಿನಗಳಲ್ಲಿಮತ್ತೆ ಕಣ್ಣೀರಾದ ಈರುಳ್ಳಿ,, ಬೆಲೆ ಏರಿಕೆಯಿಂದ ಗ್ರಾಹಕ ತತ್ತರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಈರುಳ್ಳಿ ಇನ್ನೂ ಕಣ್ಣೀರು ತರಿಸುವುದು ನಿಂತಿಲ್ಲ. ದೊಡ್ಡ ಗಾತ್ರದ ಈರುಳ್ಳಿ ಬೆಂಗಳೂರು ಮಾರುಕಟ್ತೆಗೆ ಬಂದಿದ್ದು  ಪ್ರತಿ ಕೆಜಿಗೆಸಾರ್ವಕಾಲಿಕ ಗರಿಷ್ಠ 170 ರೂ.ಗೆ ತಲುಪಿದೆ. ಈರುಳ್ಳಿ ವ್ಯಾಪಾರಿಗಳು, ಇಲ್ಲಿನ ನಿವಾಸಿಗಳು ಹಾಗೂ ಹೋಟೆಲ್ ಮಾಲೀಕರು, ಚಿಲ್ಲರೆ ವ್ಯಾಪಾರಿಗಳು ಹಬ್ಬದ ಋತುವಿನ ನ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಮತ್ತು ಈರುಳ್ಳಿಯನ್ನು ತಮ್ಮಲ್ಲಿ ಸಂಗ್ರಹಿಸುತ್ತಿದ್ದಾರೆ. ಹೋಲ್ ಸೇಲ್ ಮಾರುಕಟ್ಟೆಯಲ್ಲಿ ಡಿಸೆಂಬರ್ 24ರಂದು ಈರುಳ್ಳಿ ಕೆಜಿಗೆ  ಕೇವಲ 100 ರೂ. ಇದೆ.ಯಶವಂತಪುರ ಮಾರುಕಟ್ಟೆ ಬಿಡುಗಡೆಗೊಳಿಸಿದ ಕೆಜಿ ಈರುಳ್ಳಿಗೆ 100 ರೂ. ಇದೆ. ಒಂದು ಕ್ವಿಂತಾಲ್ ಈರುಳ್ಳಿಗೆ ಗೆ 8,500 ರಿಂದ 9,000 ರೂ.ಗಳವರೆಗೆ ಇರುತ್ತದೆ, ಅವು ಉತ್ತಮ ಗುಣಮಟ್ಟದವು, ಇದು ಪ್ರತಿ ಕೆ.ಜಿ.ಗೆ 85 ರಿಂದ 90 ರೂ. ಆಗಿದ್ದರೂ ಬೆಂಗಳೂರು ನಗರದಲ್ಲಿ ಅದೇ ಈರುಳ್ಳಿಗೆ 150-170 ರೂ ಇದೆ,.

“ಸಗಟು ದರಗಳು ಕಡಿಮೆಯಾಗಿದ್ದರೂ ಈರುಳ್ಳಿ ದರ ಕಡಿಮೆಯಾಗುತ್ತಿಲ್ಲ ಎಂಬುದು ನಿಜಕ್ಕೂ ಬೇಸರದ ಸಂಗತಿ. ಹಬ್ಬಗಳಿಗೆ ಸ್ವಲ್ಪ ಮುಂಚಿತವಾಗಿ ಗ್ರಾಹಕರು  ಈರುಳ್ಳಿಗೆ ತುಂಬಾ ಹಣವನ್ನು ವ್ಯಯಿಸಬೇಕಿದೆ.ಸಣ್ನ ಗಾತ್ರದ ಕೈಗೆಟಕುವ ಈರುಳ್ಳಿಯ ಗುಣಮಟ್ಟ ಕಳಪೆಯಾಗಿದೆ ”ಎಂದು ಇಂದಿರಾನಗರ ನಿವಾಸಿ ಪಲ್ಲವಿ ನರಹರಿ ಹೇಳಿದರು.

ಸಗಟು ದರ ಏನೆಂದು ಜನರಿಗೆ ತಿಳಿದಿಲ್ಲದ ಕಾರಣ ಚಿಲ್ಲರೆ ದರವನ್ನು ಹೆಚ್ಚು ಇಡಲಾಗಿದೆ ಎಂದು ಯಶವಂತಪುರ  ಈರುಳ್ಳಿ ವ್ಯಾಪಾರಿ ಉದಯ್ ಕುಮಾರ್ ಹೇಳಿದ್ದಾರೆ. ವ್ಯಾಪಾರಸ್ಥರು ಅಥವಾ ರೈತರ ಪರವಾಗಿಲ್ಲದ ಕಾರಣ ಜನರು ಈ ಬಗ್ಗೆ ಚಿಲ್ಲರೆ ವ್ಯಾಪಾರಿಗಳನ್ನು ಪ್ರಶ್ನಿಸಬೇಕು ಎಂದು  ಹೇಳುತ್ತಾರೆ. ಜನರಿಗೆ ಸಗಟು ಬೆಲೆಗಳ ಬಗ್ಗೆ ತಿಳಿದಿಲ್ಲ. ದಲ್ಲಾಳಿಗಳು ಶೇಕಡಾ 5 ರಷ್ಟು ಆದಾಯ  ತೆಗೆದುಕೊಳ್ಳುತ್ತಾರೆ, ಮತ್ತು ಸಾರಿಗೆ ಮತ್ತು ಕಾರ್ಮಿಕ ಶುಲ್ಕಗಳೂ ಇವೆ. ತ್ಯಾಜ್ಯವನ್ನು ಸಹ ಲೆಕ್ಕ ಹಾಕಬೇಕಾಗಿದೆ. ಈ ಎಲ್ಲದರ ನಂತರವೂ, ಚಿಲ್ಲರೆ ವ್ಯಾಪಾರಿ ಈರುಳ್ಳಿಯನ್ನು ಕೆಜಿಗೆ 120 ರೂ.ಗೆ ಮಾರಾಟ ಮಾಡಬಹುದು, ಆದರೆ ಸುಮಾರು 70 ರುಹೆಚ್ಚಳ ಬಹಳ  ದುರದೃಷ್ಟಕರವಾಗಿದೆ, ”ಎಂದು ಅವರು ಹೇಳಿದರು.

ಕುತೂಹಲಕರವಾಗಿ ದೇಶಾದ್ಯಂತ, ವಿಶೇಷವಾಗಿ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಕೆಲವು ನಗರಗಳಲ್ಲಿ ಸ್ಫೋಟಗೊಂಡಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪ್ರತಿಭಟನೆಗಳು ದೊಡ್ಡ ಈರುಳ್ಳಿಯ ಸಾಗಣೆಗೆ ಅಡ್ಡಿಯಾಗಿದೆ ಎಂದು  ವ್ಯಾಪಾರಿಗಳು ಹೇಳುತ್ತಾರೆ .ಆದಾಗ್ಯೂ, ಈಜಿಪ್ಟ್ ಮತ್ತು ಟರ್ಕಿಯಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದ್ದರೂ, ಅದರ ಬೇಡಿಕೆ ಕಡಿಮೆ, ಅವುಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತಿದ್ದರೂ ಮತ್ತು ದೊಡ್ಡ ಸ್ಥಳೀಯ ಈರುಳ್ಳಿಯಂತೆ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿವೆ ಎಂದು ವ್ಯಾಪಾರಿಗಳು ಹೇಳುತ್ತಾರೆ. "ಈಜಿಪ್ಟ್ ಮತ್ತು ಟರ್ಕಿಯಿಂದ ಸರ್ಕಾರವು ಈರುಳ್ಳಿಯನ್ನು ಆಮದು ಮಾಡಿದ ನಂತರ ಈ ವಾರ ಬೆಲೆ ಇಳಿಯುತ್ತದೆ ಎಂದು ನಾವು ಭಾವಿಸಿದ್ದೇವೆ, ಆದರೆ ಹಾಗಾಗಿಲ್ಲ" ಎಂದು ವ್ಯಾಪಾರಿ ಒಬ್ಬರು ಪತ್ರಿಕೆಗೆ ಹೇಳಿದರು.

ಮುಂದಿನ ವಾರದಲ್ಲೂ ಈರುಳ್ಳಿ ಬೆಲೆ ಇಳಿಯುವ ಸಾಧ್ಯತೆ ಇಲ್ಲ, ಏಕೆಂದರೆ ಇದೀಗ ಬೇಡಿಕೆ ಹೆಚ್ಚಾಗಿದೆ, ಮತ್ತು ತರಕಾರಿ ಹಬ್ಬದ ಭಕ್ಷ್ಯಗಳಲ್ಲಿ ಹೆಚ್ಚು ಬಳಸಲಾಗುತ್ತದೆ ಎಂದು ಯಶವಂತಪುರ ಮಾರುಕಟ್ಟೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಪೂರೈಕೆ ಸುಧಾರಿಸದಿದ್ದರೆ, ಈರುಳ್ಳಿಯ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ" ಎಂದು ಅವರು ಹೇಳಿದರು.ಟರ್ಕಿಯಿಂದ ಈರುಳ್ಳಿ ಬರುವುದರಿಂದ ಸ್ಥಳೀಯ ರೈತರು ಎಚ್ಚರದಿಂದಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com