ಚಿನ್ನದ ಬೆಲೆ 44 ರೂ. ಏರಿಕೆ, ಬೆಳ್ಳಿ ಬೆಲೆ 460 ರೂ. ಇಳಿಕೆ

ದೆಹಲಿಯಲ್ಲಿ ಚಿನ್ನದ ಬೆಲೆ ಶುಕ್ರವಾರ ಪ್ರತಿ 10 ಗ್ರಾಂಗೆ 44 ರೂ. ಏರಿಕೆಯಾಗುವ ಮೂಲಕ 39, 731 ರೂ.ಗೆ ತಲುಪಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿಯಲ್ಲಿ ಚಿನ್ನದ ಬೆಲೆ ಶುಕ್ರವಾರ ಪ್ರತಿ 10 ಗ್ರಾಂಗೆ 44 ರೂ. ಏರಿಕೆಯಾಗುವ ಮೂಲಕ 39, 731 ರೂ.ಗೆ ತಲುಪಿದೆ. 

24 ಕ್ಯಾರೆಟ್‌ನ ಚಿನ್ನದ ಬೆಲೆ 44 ರೂ. ಏರಿಯಾಗಿದ್ದು, ಬೆಳ್ಳಿ ಪ್ರತಿ ಕೆ.ಜಿ. 460 ರೂ. ಇಳಿಕೆಯಾಗಿದೆ ಎಂದು ಎಚ್ ಡಿಎಫ್ ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಅವರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಎರಡು ತಿಂಗಳ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಬೆಲೆ ದಾಖಲಾಗಿದೆ.

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಶೇ.0.3ರಷ್ಟು ಏರಿಕೆಯಾಗಿದ್ದು, ಚಿನ್ನದ ಬೆಲೆ ಒಂದು ಔನ್ಸ್'ಗೆ 1,503 ಡಾಲರ್ ಆಗಿದ್ದು, ಬೆಳ್ಳಿ ಒಂದು ಔನ್ಸ್ ಗೆ 17. 81 ಡಾಲರ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com