ಏರ್ಟೆಲ್ ನ ಕನಿಷ್ಠ ರಿಚಾರ್ಜ್‌ ದರ ಹೆಚ್ಚಳ, ಇಂದಿನಿಂದಲೇ ನೂತನ ದರ ಜಾರಿ

ಭಾರತದ ಅಗ್ರಗಣ್ಯ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗೆ ಮತ್ತೆ ಶಾಕ್ ನೀಡಿದ್ದು, ತನ್ನ ಕನಿಷ್ಠ ರಿಚಾರ್ಜ್‌ ದರ ಹೆಚ್ಚಳ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದ ಅಗ್ರಗಣ್ಯ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗೆ ಮತ್ತೆ ಶಾಕ್ ನೀಡಿದ್ದು, ತನ್ನ ಕನಿಷ್ಠ ರಿಚಾರ್ಜ್‌ ದರ ಹೆಚ್ಚಳ ಮಾಡಿದೆ.

ಹೌದು.. ಏರ್‌ಟೆಲ್ ಕಂಪನಿಯು ಭಾನುವಾರದಿಂದಲೇ ಜಾರಿಗೆ ಬರುವಂತೆ ಪ್ರೀಪೇಯ್ಡ್‌ ಮಾದರಿಯಲ್ಲಿನ ಕನಿಷ್ಠ ರೀಚಾರ್ಜ್‌ ದರವನ್ನು ರೂ 23 ರಿಂದ ರೂ 45ಕ್ಕೆ ಏರಿಕೆ ಮಾಡಿದೆ.

ಕಂಪನಿಯ ಸೇವೆಗಳನ್ನು ಪಡೆದುಕೊಳ್ಳಲು ಪ್ರತಿ 28 ದಿನಗಳಿಗೊಮ್ಮೆ ರೂ 45 ರೀಚಾರ್ಜ್ ಮಾಡಿಸುವುದು ಕಡ್ಡಾಯವಾಗಿದ್ದು, ಅವಧಿಯೊಳಗೆ ರಿಚಾರ್ಜ್‌ ಮಾಡಲು ವಿಫಲವಾದರೆ, 15 ದಿನಗಳ ಹೆಚ್ಚುವರಿ ಅವಧಿಯಲ್ಲಿ ಕೆಲವೇ ಪ್ರಯೋಜನಗಳು ಮಾತ್ರವೇ ಸಿಗಲಿವೆ ಅದನ್ನೂ ಕಂಪನಿಯೇ ನಿರ್ಧರಿಸಲಿದೆ. ಅಂತೆಯೇ ಗ್ರಾಹಕ ಪ್ರತಿ ತಿಂಗಳು ತನ್ನ ಕನಿಷ್ಠ 10 ರೂಗಳನ್ನು ವ್ಯಯಿಸಲೇಬೇಕು. ಇಲ್ಲವಾದಲ್ಲ ಅಂತಹ ಸಂಖ್ಯೆಗಳ ಸೇವೆಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಸಂಸ್ಥೆ ಹೇಳಿದೆ.

ಇನ್ನು ಆ ಅವಧಿಯಲ್ಲಿಯೂ ರಿಚಾರ್ಜ್‌ ಮಾಡದೇ ಇದ್ದರೆ ಎಲ್ಲಾ ಸೇವೆಗಳನ್ನು ಅಮಾನತುಗೊಳಿಸಲಾಗುವುದು ಎಂದು ಏರ್ಟೆಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com