ಅಧಿಕಾರಿಗಳು ತೆರಿಗೆ ಸಂಗ್ರಹದಲ್ಲಿ ಅತಿಶಯಕಾರಿಯಾಗಿ ವರ್ತಿಸಬಾರದು; ಪಿಯೂಷ್ ಗೋಯಲ್

ತೆರಿಗೆ ಅಧಿಕಾರಿಗಳು ತೆರಿಗೆ ಸಂಗ್ರಹದಲ್ಲಿ ಅತಿಶಯಕಾರಿಯಾಗಿ ವರ್ತಿಸದೆ ನೈತಿಕವಾಗಿ ನಡೆದುಕೊಳ್ಳುವಂತೆ...
ಪಿಯೂಷ್ ಗೋಯಲ್
ಪಿಯೂಷ್ ಗೋಯಲ್

ನವದೆಹಲಿ: ತೆರಿಗೆ ಅಧಿಕಾರಿಗಳು ತೆರಿಗೆ ಸಂಗ್ರಹದಲ್ಲಿ ಅತಿಶಯಕಾರಿಯಾಗಿ ವರ್ತಿಸದೆ ನೈತಿಕವಾಗಿ ನಡೆದುಕೊಳ್ಳುವಂತೆ ಕೇಂದ್ರದ ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಕೇಂದ್ರ ಪರೋಕ್ಷ ತೆರಿಗೆಗಳ ಮಂಡಳಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಗೋಯಲ್, ಅಧಿಕ ಮಂದಿ ಪಾರದರ್ಶಕವಾಗಿ ತೆರಿಗೆ ಪಾವತಿಸುವಂತಹ ವಾತಾವರಣ ನಿರ್ಮಿಸಲು ಷೇರುದಾರರಿಂದ ಸಲಹೆ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು ಎಂದರು.

ಗ್ರಾಹಕರ ಬಗ್ಗೆ ವಿಶ್ವಾಸ, ನಂಬಿಕೆಯನ್ನು ಬೆಳೆಸಿ ಗ್ರಾಹಕ ಸ್ನೇಹಿ ವಾತಾವರಣವನ್ನು ತೆರಿಗೆ ಇಲಾಖೆಯಲ್ಲಿ ಮೂಡಿಸಬೇಕು. ಸರ್ಕಾರಕ್ಕೆ ಜನರಿಂದಲೇ ತೆರಿಗೆ ಸಂಗ್ರಹವಾಗಿ ಬರಬೇಕು, ಸರ್ಕಾರಕ್ಕೆ ಬಂದ ಆದಾಯ ಕೊನೆಗೆ ಹೋಗುವುದು ಜನರ ಮೂಲಭೂತಸೌಕರ್ಯ, ಯೋಜನೆಗಳು, ಗಡಿ ಅಭಿವೃದ್ದಿಗಳಿಗೆ. ಯಾವುದೇ ಆದಾಯ ನಷ್ಟವಾಗಬಾರದು. ಕೇಂದ್ರ ಎನ್ ಡಿಎ ಸರ್ಕಾರ ಕಳೆದ 5 ವರ್ಷಗಳಲ್ಲಿ ತೆರಿಗೆ ಇಲಾಖೆಯನ್ನು ಗ್ರಾಹಕ ಸ್ನೇಹಿಗೊಳಿಸಲು ಯತ್ನಿಸಿದೆ. ತೆರಿಗೆ ದರವನ್ನು ಸಾಧ್ಯವಾದಷ್ಟು ಕಡಿತಗೊಳಿಸಿರುವುದಲ್ಲದೆ ತೆರಿಗೆ ಪಾವತಿ ವಿಧಾನವನ್ನು ಕೂಡ ಸರಳಗೊಳಿಸಿದೆ ಎಂದು ಹೇಳಿದರು.

ಉದ್ಯಮಿಗಳು ನೈತಿಕವಾಗಿ, ಸರಳವಾಗಿ ಮತ್ತು ನೇರವಾಗಿ ತಮ್ಮ ವ್ಯವಹಾರಗಳನ್ನು ನಡೆಸಬೇಕು ಎಂದು ಉದ್ಯಮ ಸಮುದಾಯಗಳಿಗೆ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com