ಆರ್ ಬಿಐ ರೆಪೋ ದರ ಇಳಿಕೆ: ಮನೆ-ಕಾರು ಲೋನ್ ತುಸು ಅಗ್ಗ

ಸುಮಾರು 17 ತಿಂಗಳ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಗಳಿಂದ ಶೇ. 6.25ಕ್ಕೆ ಕಡಿತಗೊಳಿಸಿದೆ....
ಆರ್ ಬಿ ಐ ಗವರ್ನರ್ ಶಕ್ತಿ ಕಾಂತ್ ದಾಸ್
ಆರ್ ಬಿ ಐ ಗವರ್ನರ್ ಶಕ್ತಿ ಕಾಂತ್ ದಾಸ್
ನವದೆಹಲಿ: ಸುಮಾರು 17 ತಿಂಗಳ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಗಳಿಂದ ಶೇ. 6.25ಕ್ಕೆ ಕಡಿತಗೊಳಿಸಿದೆ.
ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ವಿತ್ತೀಯ ನೀತಿ ಸಮಿತಿಯು ತನ್ನ ಆರನೇ ದ್ವೆಮಾಸಿಕ ವಿತ್ತೀಯ ಸಭೆಯಲ್ಲಿ 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ. ಪರಿಣಾಮವಾಗಿ, ರಿವರ್ಸ್ ರೆಪೋ ದರ ಶೇ. 6.25 ರಿಂದ ಶೇ. 6ಕ್ಕೆ ಇಳಿದಿದೆ. 
ಹಣದುಬ್ಬರವನ್ನು ಶೇ. 4ರ ಮಟ್ಟಕ್ಕೆ ನಿಭಾಯಿಸಲು ಆರ್ ಬಿಐ ರೆಪೋ ದರ ಕಡಿಮೆ ಮಾಡಿದೆ. ಆದರೆ ಸಿಎಲ್ ಆರ್ ಮತ್ತು ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 
17 ತಿಂಗಳಲ್ಲೇ ಆರ್ಬಿಐ ಮೊದಲ ಬಾರಿಗೆ ದರವನ್ನು ಕಡಿತಗೊಳಿಸಿದೆ. ಕೊನೆಯ ಬಾರಿ ರೆಪೋ ದರ ಕಡಿತ 2017 ರ ಆಗಸ್ಟ್ ತಿಂಗಳಲ್ಲಿ ನಡೆದಿತ್ತು. 
ರೆಪೋ ದರ ಇಳಿಕೆ ಮಾಡಿರುವುದರಿಂದ ಮನೆ ಮತ್ತು ವಾಹನಗಳ ಮೇಲಿನ ಇಎಂಐ ತಿಂಗಳಿಗೆ ಸುಮಾರು 300-400 ರು. ಕಡಿಮೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com