ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ: 7 ಬ್ಯಾಂಕ್ ಗಳಿಗೆ ದಂಡ ವಿಧಿಸಿದ ಆರ್ ಬಿಐ

ವಿವಿಧ ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಎಚ್ ಡಿಎಫ್ ಸಿ, ಕೋಟಾಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ....

Published: 13th February 2019 12:00 PM  |   Last Updated: 13th February 2019 05:48 AM   |  A+A-


RBI

ಆರ್ ಬಿಐ

Posted By : RHN RHN
Source : The New Indian Express
ಮುಂಬೈ: ವಿವಿಧ ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಎಚ್ ಡಿಎಫ್ ಸಿ, ಕೋಟಾಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಏಳು ಬ್ಯಾಂಕ್ ಗಳಿಗೆ ಆರ್ ಬಿಐ ದಂಡ ವಿಧಿಸಿದೆ.

ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಇಂಡಿಯನ್ ಓವರ್ ಸೀಸಿ ಬ್ಯಾಂಕ್ ಗಳು ಆರ್ ಬಿಐ ನಿಧಿ ಬಳಕೆ, ಮೇಲ್ವಿಚಾರಣೆಯಲ್ಲಿ ವಂಚನೆ ಸೇರಿ ಹಲವು ನಿಯಮಗಳ ಉಲ್ಲಂಘನೆಗಾಗಿ  1.5 ಕೋಟಿ ರೂ ದಂಡ ವಿಧಿಸಿದೆ. ಇದೇ ರೀತಿಆಂಧ್ರ ಬ್ಯಾಂಕ್ ಗೆ  1 ಕೋಟಿ ರೂ. ದಂಡ ವಿಧಿಸಲಾಗಿದೆ.

ಇನ್ನು ನಿಮ್ಮ ಗ್ರಾಹಕರ ಬಗ್ಗೆ ತಿಳಿಯಿರಿ (ಕೆವೈಸಿ) ಮಾನದಂಡಗಳನ್ನು ಮತ್ತು ಅಕ್ರಮ ಹಣ ವರ್ಗಾವಣೆ ಸಂಬಂಧ ಎಚ್ ಡಿಎಫ್ ಸಿ ಬ್ಯಾಂಕ್, ಐಡಿಬಿಐ ಬ್ಯಾಂಕ್ ಮತ್ತು ಕೋಟಾಕ್ ಮಹೀಂದ್ರಾ ಬ್ಯಾಂಕ್ಗಳಲ್ಲಿ 20 ಲಕ್ಷ ರೂ. ದಂಡ ಹಾಕಲಾಗಿದೆ.

ದಂಡಗಳು ಆಯಾ ಬ್ಯಾಂಕ್ ಗಳ ನಿಯಮಗಳ ಉಲ್ಲಂಘನೆಯ ಪ್ರಮಾಣವನ್ನು ಅವಲಂಬಿಸಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.
Stay up to date on all the latest ವಾಣಿಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp