ಪುಲ್ವಾಮ ಉಗ್ರ ದಾಳಿ: ಎಸ್ ಬಿಐನಿಂದ 23 ಹುತಾತ್ಮ ಯೋಧರ ಸಾಲ ಮನ್ನಾ

ದೇಶದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ದೇಶದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ 23 ಸಿಆರ್ ಪಿಎಫ್ ಯೋಧರ ಸಾಲ ಮನ್ನಾ ಮಾಡಿದೆ.
ಉಗ್ರ ದಾಳಿಯಲ್ಲಿ ಹುತಾತ್ಮರಾದವರ ಪೈಕಿ 23 ಸಿಆರ್ ಪಿಎಫ್ ಯೋಧರು ಎಸ್ ಬಿಐ ನಿಂದ ಸಾಲ ಪಡೆದಿದ್ದರು. ಅವರಿಂದ ಬಾಕಿ ಇದ್ದ ಎಲ್ಲ ಸಾಲವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಬ್ಯಾಂಕ್ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ನಮ್ಮ ದೇಶವನ್ನು ರಕ್ಷಿಸುವ ಸೈನಿಕರು ಹುತಾತ್ಮರಾಗಿರುವುದು ತೀವ್ರ ದುಃಖಕರ ಸಂಗತಿ. ಈಗಾಗಲೇ ತುಂಬಲಾರದ ನಷ್ಟ ಅನುಭವಿಸಿರುವ ಸೈನಿಕರ ಕುಟುಂಬಕ್ಕೆ ನಮ್ಮ ಬ್ಯಾಂಕ್ ಕಡೆಯಿಂದ ಇದು ಒಂದು ಗೌರವ ಅಷ್ಟೆ ಎಂದು ಎಸ್ ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.
ಸಿಆರ್ ಪಿಎಫ್ ಸಿಬ್ಬಂದಿಯೂ ರಕ್ಷಣಾ ವೇತನ ಪ್ಯಾಕೇಜ್ ಅಡಿ ಬ್ಯಾಂಕ್ ನ ಗ್ರಾಹಕರಾಗಿದ್ದು, ಅವರಿಗೆ ತಲಾ 30 ಲಕ್ಷ ರುಪಾಯಿ ವಿಮೆಯನ್ನು ಕೂಡ ಒದಗಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com