ನೌಕರವರ್ಗಕ್ಕೆ ಸಿಹಿಸುದ್ದಿ ಕೊಟ್ಟ ಕೇಂದ್ರ: ಇಪಿಎಫ್ ಬಡ್ಡಿ ದರದಲ್ಲಿ ಹೆಚ್ಚಳ

ನೌಕರ ವರ್ಗಕ್ಕೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ನೌಕರರ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಬಡ್ಡಿ ದರಗಳನ್ನು ಹೆಚ್ಚಳ ಮಾಡಿದೆ. ಇಪಿಎಫ್ ಬಡ್ಡಿ ದರದಲ್ಲಿ ಶೇ 0.10ರಷ್ಟು ಹೆಚ್ಚಳ....
ನೌಕರವರ್ಗಕ್ಕೆ ಸಿಹಿಸುದ್ದಿ ಕೊಟ್ಟ ಕೇಂದ್ರ: ಇಪಿಎಫ್ ಬಡ್ಡಿ ದರದಲ್ಲಿ ಹೆಚ್ಚಳ
ನೌಕರವರ್ಗಕ್ಕೆ ಸಿಹಿಸುದ್ದಿ ಕೊಟ್ಟ ಕೇಂದ್ರ: ಇಪಿಎಫ್ ಬಡ್ಡಿ ದರದಲ್ಲಿ ಹೆಚ್ಚಳ
ನವದೆಹಲಿ: ನೌಕರ ವರ್ಗಕ್ಕೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ನೌಕರರ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಬಡ್ಡಿ ದರಗಳನ್ನು ಹೆಚ್ಚಳ ಮಾಡಿದೆ. ಇಪಿಎಫ್ ಬಡ್ಡಿ ದರದಲ್ಲಿ ಶೇ 0.10ರಷ್ಟು ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ.
2016ರ ನಂತರ ಇದೇ ಮೊದಲ ಬಾರ ನೌಕರರ ಭವಿಷ್ಯ ನಿಧಿ ಬಡ್ಡಿದರ ಹೆಚ್ಚಳವಾಗಿದೆ.ಈ ವರೀಗೆ ಶೇ.8.55ರಷ್ಟಿದ್ದ ಬಡ್ಡಿ ದರ ಇನ್ನು ಮುಂದೆ ಶೇ. 8.65ಕ್ಕೆ ಏರಿಕೆಯಾಗಲಿದೆ.ಈ ನಿರ್ಧಾರದಿಂದ ದೇಶಾದ್ಯಂತ 6 ಕೋಟಿ  ಇಪಿಎಫ್ ಖಾತೆದಾರರಿಗೆ ಅನುಕೂಲವಾಗಲಿದೆ.
ಇದೇ ವೇಳೆ ಹೊಸ ನಿರ್ಧಾರದಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 151 ಕೋಟಿ ರು. ಹೆಚುವರಿ ಹೊರೆ ಬೀಳಲಿದೆ. ನೌಕರರ ಭವಿಷ್ಯ ನಿಧಿ ಬಡ್ಡಿ ದರ ಹೆಚ್ಚಳಕ್ಕೆ ಇಪಿಎಓ ಒ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಶಿಪಾರಸು ಮಾಡಿತ್ತು. ಇದೀಗ ಕೇಂದ್ರದ ನಿರ್ಧಾರದಿಂದ ಪಿಂಚಣಿ ಖಾತೆದಾರರು ಖುಷಿಯಾಗಿದ್ದಾರೆ.
ಲೋಕಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗುತ್ತಿರುವಂತೆಯೇ ಕೇಂದ್ರ ಸರ್ಕಾರ ಮಧ್ಯಮ ವರ್ಗದವರಿಗೆ ಸಾಕಷ್ಟು ಕೊಡುಗೆ ನೀಡುತ್ತಿರುವುದು ಗಮನಾರ್ಹ ಸಂಗತಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com