ಸ್ಯಾರಿಡಾನ್
ಸ್ಯಾರಿಡಾನ್

ನಿಷೇಧಿತ ಔಷಧಿ ಪಟ್ಟಿಯಿಂದ ಸ್ಯಾರಿಡಾನ್ ಗೆ ಮುಕ್ತಿ: ಸುಪ್ರೀಂ ಕೋರ್ಟ್

ನಿಷೇಧಿತ ಔಷಹಿಗಳ ಪಟ್ಟಿಯಿಂದ ಜನಪ್ಪ್ರಿಯ ನೋವು ನಿವಾರಕ ಸ್ಯಾರಿಡಾನ್ ಹೆಸರನ್ನು ಕೈಬಿಡಲಾಗಿದೆ. ಈ ಕುರಿತಂತೆ ಮಾತ್ರೆ ಉತ್ಪಾದನಾ ಸಂಸ್ಥೆ ಪಿರಾಮಲ್ ಎಂಟರ್ಪ್ರೈಸಸ್ ಲಿಮಿಟೆಡ್.....
ನವದೆಹಲಿ: ನಿಷೇಧಿತ ಔಷಹಿಗಳ ಪಟ್ಟಿಯಿಂದ ಜನಪ್ಪ್ರಿಯ ನೋವು ನಿವಾರಕ ಸ್ಯಾರಿಡಾನ್ ಹೆಸರನ್ನು ಕೈಬಿಡಲಾಗಿದೆ. ಈ ಕುರಿತಂತೆ ಮಾತ್ರೆ ಉತ್ಪಾದನಾ ಸಂಸ್ಥೆ ಪಿರಾಮಲ್ ಎಂಟರ್ಪ್ರೈಸಸ್ ಲಿಮಿಟೆಡ್ ಹೇಳಿಕೆ ಬಿಡುಗಡೆಗೊಳಿಸಿದ್ದು ಸುಪ್ರೀಂ ಕೋರ್ಟ್ ನಲ್ಲಿ ಸ್ಯಾರಿಡಾನ್ ಪರ ತೀರ್ಪು ಬಂದಿದ್ದಾಗಿ ಬಿಎಸ್ ಇ ಗೆ ಸಂಸ್ಥೆ ಮಾಹಿತಿ ನೀಡಿದೆ.
ಸ್ಯಾರಿಡಾನ್ ಸೇರಿದಂತೆ 328 ನೀಓವು ನಿವಾರಕಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಈ ಔಷಧಿಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಆಂಟಿ ಬಯಾಟಿಕ್ ಅಂಶಗಳಿದೆ ಎನ್ನುವುದು ನಿಷೇಧಕ್ಕೆ ಕಾರಣವಾಗಿತ್ತು. ಸರ್ಕಾರದ ನಿರ್ಧಾರದ ವಿರುದ್ಧ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು.
ಇದೀಗ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್ ಸ್ಯಾರಿಡಾನ್ ಮಾತ್ರೆಯ ಮುಕ್ತ ಮಾರಾಟಕ್ಕೆ ಅವಕಾಶ ನಿಡಿದೆ.
ಭಾರತದಲ್ಲಿ ಕಳೆದ ಐದು ದಶಕಕ್ಕೆ ಹೆಚ್ಚು ಕಾಲದಿಂದ ಸ್ಯಾರಿಡಾನ್  ಬಳಕೆಯಾಗುತ್ತಿದೆ.ಮುಖ್ಯವಾಗಿ ತಲೆನೋವಿಗೆ ಈ ಮಾತ್ರೆ ಸೇವನೆಯಿಂದ ಶೀಘ್ರ ಪರಿಹಾರ ದೊರಕುತ್ತದೆ. ಇದೀಗ ಕೋರ್ಟ್ ತೀರ್ಮಾನದಿಂದ ನಾವು ಹರ್ಷಿತರಾಗಿದ್ದೇವೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com