ಅಮೆರಿಕ ಮಾರುಕಟ್ಟೆ ಪರಿಣಾಮ ರೂಪಾಯಿ ಮೌಲ್ಯ ಕುಸಿತ

ನಿನ್ನೆಯಷ್ಟೇ ಏರಿಕೆ ಕಂಡಿದ್ದ ರೂಪಾಯಿ ಮೌಲ್ಯ ಇಂದು ದಿಢೀರ್ ಕುಸಿತ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ನಿನ್ನೆಯಷ್ಟೇ ಏರಿಕೆ ಕಂಡಿದ್ದ ರೂಪಾಯಿ ಮೌಲ್ಯ ಇಂದು ದಿಢೀರ್ ಕುಸಿತ ಕಂಡಿದೆ.
ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 27 ಪೈಸೆಯಷ್ಟು ಕುಸಿತ ಕಂಡಿದ್ದು, ರೂಪಾಯಿ ಮೌಲ್ಯ 69.70ಕ್ಕೆ ಕುಸಿದಿದೆ.
ಪ್ರಮುಖವಾಗಿ ಇಂದಿನ ರೂಪಾಯಿ ಮೌಲ್ಯ ಕುಸಿತಕ್ಕೆ ಅಮೆರಿಕ ಮಾರುಕಟ್ಟೆಗೆ ದೊರೆತ ಉತ್ತೇಜನವೇ ಕಾರಣ ಎಂದು ಹೇಳಲಾಗುತ್ತಿದೆ. ಅಮೆರಿಕದ ಸ್ಥಳೀಯ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮುಂದಾದ ಕಾರಣ ಅಮೆರಿಕ ಷೇರು ಮಾರುಕಟ್ಟೆ ಏರಿಕೆ ಕಂಡಿದೆ.
ಅಮೆರಿಕ ಮಾರುಕಟ್ಟೆಯ ಏರಿಕೆಯ ನಡುವೆಯೂ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರ ಇಳಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com