ಜಿಎಸ್ ಟಿ ಇಳಿಕೆ ಹೊಸ ವರ್ಷದಿಂದ ಅಗ್ಗವಾಗಲಿದೆ ಜನಸಾಮಾನ್ಯರ ಬಳಕೆ ವಸ್ತುಗಳ ಬೆಲೆ

ಕಳೆದ ತಿಂಗಳು ಜಿಎಸ್ ಟಿ ಮಂಡಳಿ 23 ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿತ್ತು.
ಜಿಎಸ್ ಟಿ ಇಳಿಕೆ ಹೊಸ ವರ್ಷದಿಂದ ಅಗ್ಗವಾಗಲಿದೆ ಜನಸಾಮಾನ್ಯರ ಬಳಕೆ ವಸ್ತುಗಳ ಬೆಲೆ
ಜಿಎಸ್ ಟಿ ಇಳಿಕೆ ಹೊಸ ವರ್ಷದಿಂದ ಅಗ್ಗವಾಗಲಿದೆ ಜನಸಾಮಾನ್ಯರ ಬಳಕೆ ವಸ್ತುಗಳ ಬೆಲೆ
ನವದೆಹಲಿ: ಕಳೆದ ತಿಂಗಳು ಜಿಎಸ್ ಟಿ ಮಂಡಳಿ 23 ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿತ್ತು. ಆ ನಿರ್ಣಯ ಜ.1 ರಿಂದ ಜಾರಿಗೆ ಬಂದಿದ್ದು, ಹೊಸ ವರ್ಷದಿಂದ ಜನಸಾಮಾನ್ಯರು ಬಳಕೆ ಮಾಡುವ ವಸ್ತುಗಳ ಬೆಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ. 
ಕಳೆದ ಡಿ.22ರಂದು ಸಭೆ ಸೇರಿದ್ದ ಜಿಎಸ್‌ಟಿ ಮಂಡಳಿ ದರ ಇಳಿಕೆಗೆ ನಿರ್ಧಾರ ಕೈಗೊಂಡಿತ್ತು. ಪ್ರಸ್ತುತ ಈಗ 34 ಐಷರಾಮಿ ವಸ್ತುಗಳಿಗೆ ಮಾತ್ರ ಶೇ. 28 ತೆರಿಗೆ ವಿಧಿಸಲಾಗುವುದು, ಎಕಾನಾಮಿ ದರ್ಜಿಯ ವಿಮಾನ ಟಿಕೆಟ್ ಬೆಲೆ ಮೇಲಿನ ಜೆಎಸ್ ಟಿಯನ್ನು ಶೇ. 5 ಹಾಗೂ ಬ್ಯೂಸಿನೆಸ್ ದರ್ಜೆಯ ಟಿಕೆಟ್ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇ, 12 ರಷ್ಟು ಕಡಿಮೆ ಮಾಡಲಾಗಿತ್ತು. 
ಜಿಎಸ್ ಟಿ ತೆರಿಗೆ ಇಳಿಕೆಯಿಂದ ಅಗ್ಗವಾಗಲಿರುವ ವಸ್ತುಗಳು ಇವು: 
  • ಲೀಥಿಯಂ ಅಯಾನ್‌ ಬ್ಯಾಟರಿಗಳ ಪವರ್‌ ಬ್ಯಾಂಕ್‌
  • ಡಿಜಿಟಲ್‌ ಕ್ಯಾಮೆರಾ
  • ಕಂಪ್ಯೂಟರ್‌ ಮಾನಿಟರ್‌
  • ವಿಡಿಯೋ ರೆಕಾರ್ಡರ್‌
  • ಟ್ರಾನ್ಸ್‌ಮಿಷನ್‌ ಶಾಫ್ಟ್‌
  • ಕ್ರಾಂಕ್ಸ್‌ ಹಾಗೂ ಗೇರ್‌ ಬಾಕ್ಸ್‌
  • ನ್ಯೂನತೆ ಹೊಂದಿರುವ ವ್ಯಕ್ತಿಗಳ ಸಾಗಣೆಗೆ ಬಳಸುವ ಬಿಡಿಭಾಗಗಳು, ನೈಸರ್ಗಿಕ ಕಾರ್ಕ್ ಪದಾರ್ಥ
  • ಜನ್ ಧನ್ ಬ್ಯಾಂಕ್  ಖಾತೆಗಳಿಗೆ ಸೇವೆ ಒದಗಿಸುವ ಬ್ಯಾಂಕುಗಳಿಗೆ  ಜಿಎಸ್ ಟಿಯಿಂದ ಸಂಪೂರ್ಣ ವಿನಾಯಿತಿ 
  • ವಾಕಿಂಗ್‌ ಸ್ಟಿಕ್‌, ಸಿನೆಮಾ ಟಿಕೆಟ್‌
  • ಸರಕು ಸಾಗಣೆ ವಾಹನಗಳ ಮೇಲಿನ ಥರ್ಡ್‌ ಪಾರ್ಟಿ ಇನ್ಶೂರೆನ್ಸ್‌ ಪ್ರೀಮಿಯಂ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com