ಎರಿಕ್ಸನ್ ಪ್ರಕರಣ: ಆರ್ಕಾಂ ಅಧ್ಯಕ್ಷ ಅನಿಲ್ ಅಂಬಾನಿಗೆ ಸುಪ್ರೀಂ ನೋಟೀಸ್

ರಿಲಯನ್ಸ್ ಕಮ್ಯುನಿಕೇಶನ್ಸ್ ಲಿ. (ಆರ್ಕಾಂ) ವಿರುದ್ದ ಎರಿಕ್ಸನ್ ಇಂಡಿಯಾ ದಾಖಲಿಸಿದ ಮೊಕದ್ದಮೆ ವಿಚಾರವಾಗಿ ಆರ್ಕಾಂ ಮುಖ್ಯಸ್ಥ ಅನಿಲ್ ಅಂಬಾನಿ ಹಾಗೂ....
ಅನಿಲ್ ಅಂಬಾನಿ
ಅನಿಲ್ ಅಂಬಾನಿ
ನವದೆಹಲಿ: ರಿಲಯನ್ಸ್ ಕಮ್ಯುನಿಕೇಶನ್ಸ್ ಲಿ.(ಆರ್ಕಾಂ) ವಿರುದ್ದ ಎರಿಕ್ಸನ್ ಇಂಡಿಯಾ ದಾಖಲಿಸಿದ ಮೊಕದ್ದಮೆ ವಿಚಾರವಾಗಿ ಆರ್ಕಾಂ ಮುಖ್ಯಸ್ಥ ಅನಿಲ್ ಅಂಬಾನಿ ಹಾಗೂ ಇನ್ನಿತರರಿಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟೀಸ್ ಜಾರಿ ಮಾಡಿದೆ.
ಎರಿಕ್ಸನ್ ಇಂಡಿಯಾಗೆ ಆರ್ಕಾಂ ಪಾವತಿಸಬೇಕಾದ ಬಾಕಿ ಮೊತ್ತಕ್ಕೆ ಸಂಬಂಧಿಸಿ 118 ಕೋಟಿ ರು. ಸ್ವೀಕರಿಸಿ ಸಂಸ್ಥೆ ನಂಬಿಕೆ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ ಎಂದು ರಿಲಯನ್ಸ್ ಕಮ್ಯುನಿಕೇಶನ್ ಗೆ ಅವಕಾಶ ಕಲ್ಪಿಸಬೇಕೆಂದು ಸಂಸ್ಥೆ ಪರ ವಕೀಲರಾದ ಕಪಿಲ್ ಸಿಬಲ್ ಹಾಗೂ ಮುಕುಲ್ ರೋಹಟಗಿ ನ್ಯಾಯಾಲಯಕ್ಕೆ ಕೋರಿದ್ದರು.
ಆದರೆ ಎರಿಕ್ಸನ್ ಇಂಡಿಯಾ ವಕೀಲರು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರು. ಇದಕ್ಕಾಗಿ ರಿಲಯನ್ಸ್ ತಾನು ಪಾವತಿಸಬೇಕಾಗಿದ್ದ ಪೂರ್ಣ ಮೊತ್ತ 550 ಕೋಟಿ ರು. ಜಮಾ ಮಾಡಬೇಕೆಂದು ಸಂಸ್ಥೆ ವಾದಿಸಿತ್ತು./
ವಾದ ವಿವಾದವನ್ನು ಆಲಿಸಿದ ನ್ಯಾಯಾಲಯ ಅಂತಿಮವಾಗಿ ರಿಲಯನ್ಸ್ ತಾನು 118 ಕೋಟಿ ರು. ಡಿಡಿ ರಿಜಿಸ್ಟ್ರಿಯಲ್ಲಿ ಜಮೆ ಮಾಡುವಂತೆ ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com