ದೇಶೀಯ ಷೇರುಗಳಿಗೆ ಹೆಚ್ಚಾದ ಬೇಡಿಕೆ; ಸೆನ್ಸೆಕ್ಸ್ 288 ಅಂಕಗಳ ಏರಿಕೆ

ದೇಶೀಯ ಈಕ್ವಿಟಿ ಷೇರುಗಳಿಗೆ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಭಾರತೀಯ ಷೇರುಮಾರುಕಟ್ಟೆ ವಾರದ ಆರಂಭದ ವಹಿವಾಟಿನಲ್ಲೇ ಗಮನಾರ್ಹ ಚೇತರಿಕೆ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ದೇಶೀಯ ಷೇರುಗಳಿಗೆ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಭಾರತೀಯ ಷೇರುಮಾರುಕಟ್ಟೆ ವಾರದ ಆರಂಭದ ವಹಿವಾಟಿನಲ್ಲೇ ಗಮನಾರ್ಹ ಚೇತರಿಕೆ ಕಂಡಿದೆ.
ಸೋಮವಾರ ಬೆಳಗ್ಗೆ ಮುಂಬೈ ಷೇರುಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 287.74 ಅಂಕಗಳ ಏರಿಕೆಯೊಂದಿಗೆ 36,033.20 ಅಂಕಗಳಿಗೆ ಏರಿಕೆಯಾಗಿದೆ. ಅಂತೆಯೇ ನಿಫ್ಟಿ ಕೂಡ 84.90 ಅಂಕಗಳ ಏರಿಕೆಯೊಂದಿಗೆ 10,800 ಅಂಕಗಳ ಗಡಿ ದಾಟಿದ್ದು, ವಾರದ ವಹಿವಾಟಿನ ಮೊದಲ ದಿನವೇ ಭಾರತೀಯ ಹೂಡಿಕೆದಾರರ ಮೊಗದಲ್ಲಿ ನಗು ಮೂಡಿಸಿದೆ. ಪ್ರಮುಖವಾಗಿ ಇಂದಿನ ಬೆಳವಣಿಗೆಗೆ ಚೀನಾ ಮತ್ತು ಅಮೆರಿಕ ನಡುವಿನ ವಾಣಿಜ್ಯ ಒಪ್ಪಂದ ಮತ್ತು ಚರ್ಚೆ ಕಾರಣವಾಗಿದ್ದು, ಇದಲ್ಲದೇ ದೇಶೀಯ ಈಕ್ವಿಟಿ ಷೇರುಗಳಿಗೆ ಕಂಡಬಂದ ಬೇಡಿಕೆ ಕೂಡ ಕಾರಣ ಎನ್ನಲಾಗುತ್ತಿದೆ.
ಕಳೆದ ವಾರಾಂತ್ಯದ ವಹಿವಾಟಿನಲ್ಲೂ ಭಾರತೀಯ ಷೇರುಮಾರುಕಟ್ಟೆ ಚೇತರಿಕೆ ಕಂಡಿತ್ತು. ಕಳೆದ ವಾರಾಂತ್ಯದಲ್ಲಿ ಸೆನ್ಸೆಕ್ಸ್ 181 ಅಂಕಗಳ ಏರಿಕೆಯೊಂದಿಗೆ 35,982.84 ಅಂಕಗಳೊಂದಿಗೆ ವಾರದ ವಹಿವಾಟು ಮುಕ್ತಾಯಗೊಳಿಸಿತ್ತು.
ಇನ್ನು ಇಂದಿನ ವಹಿವಾಟಿನಲ್ಲಿ ಲೋಹ, ಗ್ರಾಹಕ ಸರಬರಾಜು, ಕಚ್ಛಾ ಸರಕುಗಳು, ಐಟಿ, ಬ್ಯಾಂಕಿಂಗ್, ಆರೋಗ್ಯ, ಮೂಲಸೌಕರ್ಯ ಮತ್ತು ಇಂಧನ ಕ್ಷೇತ್ರಗಳ ಷೇರುಗಳ ಮೌಲ್ಯದಲ್ಲಿ ಶೇ.1.75ರಷ್ಟು ಏರಿಕೆ ಕಂಡು ಬಂದಿದೆ. ಅಂತೆಯೇ  ಇಂದಿನ ವಹಿವಾಟನಿಲ್ಲಿ ವೇದಾಂತ ಲಿಮಿಟೆಡ್ ಸಂಸ್ಥೆಯ ಷೇರುಗಳು ಗರಿಷ್ಠ ಲಾಭ ಪಡೆದಿದ್ದು, ಈ ಸಂಸ್ಥೆಯ ಷೇರು ಮೌಲ್ಯದಲ್ಲಿ ಶೇ. 2.56ರಷ್ಚು ಏರಿಕೆ ಕಂಡುಬಂದಿದೆ. ಅಂತೆಯೇ ಟಾಟಾ ಸ್ಟೀಲ್ ಷೇರುಗಳ ಮೌಲ್ಯ ಕೂಡ ಶೇ.2.31ರಷ್ಟು ಏರಿಕೆಯಾಗಿದೆ.
ಉಳಿದಂತೆ ಟಾಟಾ ಮೋಟಾರ್ಸ್, ಯೆಸ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಮಾರುತಿ ಸುಜುಕಿ, ಎಚ್ ಸಿಎಲ್ ಟೆಕ್, ಇಂಡಸ್ ಇಂಡ್ ಬ್ಯಾಂಕ್, ಆರ್ ಐಎಲ್, ಎಂ & ಎಂ, ಸನ್ ಫಾರ್ಮಾ, ಐಟಿಸಿ ಲಿಮಿಟೆಡ್, ಎಲ್ & ಟಿ, ಭಾರ್ತಿ ಏರ್ಟೆಲ್, ಟಿಸಿಎಸ್, ಎಸ್ ಬಿಐ, ಇನ್ಫೋಸಿಸ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಎಚ್ ಡಿಎಫ್ ಸಿ  ಲಿಮಿಟೆಡ್ ಸಂಸ್ಥೆಗಳು ಲಾಭಾಂಶ ಪಡೆದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com