ತೈಲೋತ್ಪನ್ನಗಳ ದರ ಏರಿಕೆ, ಪೆಟ್ರೋಲ್ ದರದಲ್ಲಿ ಇಂದು 40 ಪೈಸೆ ಹೆಚ್ಚಳ

ಒಂದೆರಡು ತಿಂಗಳು ನಿರಂತರವಾಗಿ ಇಳಿಕೆ ಕಂಡಿದ್ದ ತೈಲೋತ್ಪನ್ನಗಳ ದರಗಳು ಇದೀಗ ಆಗಸದತ್ತ ಮುಖ ಮಾಡಿದ್ದು, ಸೋಮವಾರದಂದು ಪೆಟ್ರೋಲ್ ಬೆಲೆಯಲ್ಲಿ 40 ಪೈಸೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಒಂದೆರಡು ತಿಂಗಳು ನಿರಂತರವಾಗಿ ಇಳಿಕೆ ಕಂಡಿದ್ದ ತೈಲೋತ್ಪನ್ನಗಳ ದರಗಳು ಇದೀಗ ಆಗಸದತ್ತ ಮುಖ ಮಾಡಿದ್ದು, ಸೋಮವಾರದಂದು ಪೆಟ್ರೋಲ್ ಬೆಲೆಯಲ್ಲಿ 40 ಪೈಸೆ ಏರಿಕೆಯಾಗಿದೆ.
ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 40 ಪೈಸೆಯಷ್ಟು ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 45 ರಿಂದ 51 ಪೈಸೆಯಷ್ಟು ಏರಿಕೆ ಕಂಡುಬಂದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ 40 ಪೈಸೆ ಏರಿಕೆಯೊಂದಿಗೆ 72.44 ರೂಪಾಯಿಗೆ ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 51 ಪೈಸೆಯಷ್ಟು ಏರಿಕೆಯಾಗಿ 66.29 ರೂಗೆ ಏರಿಕೆಯಾಗಿದೆ.
ಇನ್ನು ಪೆಟ್ರೋಲ್ ದರ ಚೆನ್ನೈನಲ್ಲಿ  72.39 ರೂಗಳಾಗಿದ್ದು, ಮುಂಬೈನಲ್ಲಿ 75.77ಗಳಿಗೆ ಏರಿಕೆಯಾಗಿದೆ. ಅಂತೆಯೇ ಕೋಲ್ಕತಾದಲ್ಲಿ 72.24 ರೂ ಮತ್ತು ರಾಜಧಾನಿ ದೆಹಲಿಯಲ್ಲಿ 70.13 ರೂಗಳಿಗೆ ಏರಿಕೆಯಾಗಿದೆ. ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಪೆಟ್ರೋಲ್ ದರ 74.40 ರೂಗೆ ಏರಿಕೆಯಾಗಿದೆ.
ಡೀಸೆಲ್ ಬೆಲೆಯಲ್ಲೂ ಹೆಚ್ಚಳ
ಇನ್ನು ಡೀಸೆಲ್ ದರದಲ್ಲೂ ದೇಶಾದ್ಯಂತ ಸುಮಾರು 45 ಪೈಸೆಯಿಂದ 51ಪೆೈಸೆಯಷ್ಟು ಏರಿಕೆ ಕಂಡುಬಂದಿದ್ದು, ಚೆನ್ನೈಯಲ್ಲಿ 67.78 ರೂಗೆ, ದೆಹಲಿಯಲ್ಲಿ 64.18 ರೂಗೆ ಏರಿಕೆಯಾಗಿದೆ. ಅಂತೆಯೇ ಹೈದರಾಬಾದ್ ನಲ್ಲಿ 69.77 ರೂಗೆ ಮತ್ತು ಕೋಲ್ಕತಾ ಮತ್ತು ಮುಂಬೈನಲ್ಲಿ ಕ್ರಮವಾಗಿ 65.95 ರೂ ಮತ್ತು 67.18 ರೂಗಳಿಗೆ ಏರಿಕೆಯಾಗಿದೆ.
ಕಳೆದ 10 ದಿನಗಳಲ್ಲಿ ಹೆಚ್ಚೂ ಕಡಿಮೆ 3.43 ರೂಪಾಯಿಯಷ್ಟು ಡೀಸೆಲ್ ದರ ಏರಿಕೆಯಾಗಿದೆ. ಜಾಗತಿಕ ತೈಲ ಬೆಲೆಯಲ್ಲಿನ ವ್ಯತ್ಯಾಸವು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com