ಓಲಾದಲ್ಲಿ 150 ಕೋಟಿ ರೂ ಹೂಡಿಕೆ ಮಾಡಿದ ಸಚಿನ್ ಬನ್ಸಾಲ್

ಆನ್ ಲೈನ್ ಮಾರಾಟ ಸಂಸ್ಥೆ ಫ್ಲಿಪ್ ಕಾರ್ಟ್ ನ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್ ಆಪ್ ಆಧಾರಿತ ಟ್ಯಾಕ್ಸಿ ಸೇವೆಯಾದ ಓಲಾ ಸಂಸ್ಥೆಯಲ್ಲಿ 150 ಕೋಟಿ ರೂ.ಹುಡಿಕೆ ಮಾಡಿದ್ದಾರೆ.

Published: 14th January 2019 12:00 PM  |   Last Updated: 14th January 2019 04:54 AM   |  A+A-


Sachin Bansal

ಸಚಿನ್ ಬನ್ಸಾಲ್

Posted By : RHN RHN
Source : Online Desk
ನವದೆಹಲಿ: ಆನ್ ಲೈನ್ ಮಾರಾಟ ಸಂಸ್ಥೆ ಫ್ಲಿಪ್ ಕಾರ್ಟ್ ನ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್ ಆಪ್ ಆಧಾರಿತ ಟ್ಯಾಕ್ಸಿ ಸೇವೆಯಾದ ಓಲಾ ಸಂಸ್ಥೆಯಲ್ಲಿ  150 ಕೋಟಿ ರೂ.ಹೂಡಿಕೆ ಮಾಡಿದ್ದಾರೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

70,588 ಸಂಪೂರ್ಣ ಮತ್ತು ಕಡ್ಡಾಯವಾಗಿ ಬದಲಿಸಬಲ್ಲ ರೂ. 10 ರ ಮುಖಬೆಲೆಯು ಶೇರುಗಳನ್ನು  ಅವರು ಖರೀದಿಸಿದ್ದಾರೆ ಎಂದು ದಾಖಲೆಗಳಲ್ಲಿ ಬಹಿರಂಗವಾಗಿದೆ.

ಅಮೆರಿಕಾ ಚಿಲ್ಲರೆ ಮಾರುಕಟ್ಟೆ ದೈತ್ಯ ವಾಲ್ ಮಾರ್ಟ್  ಇ-ಕಾಮರ್ಸ್ ಕಂಪೆನಿಯ 77 ಪ್ರತಿಶತದಷ್ಟು ಶೇರುಗಳನ್ನು ಖರೀದಿಸಿದ ಬಳಿಕ ಫ್ಲಿಪ್ ಕಾರ್ಟ್ ಸಮೂಹದಿಂದ ಬನ್ಸಾಲ್ ಹೊರಬಂದಿದ್ದರು.

ಈ ಕುರಿತಂತೆ ಓಲಾ ಅಥವಾ ಬನ್ಸಾಲ್ ಗೆ ಕಳಿಸಲಾದ ಈ ಮೇಲ್ ಗೆ ಯಾವ ಪ್ರತಿಕ್ರಿಯೆ ಬಂದಿಲ್ಲ.
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp