ಮತ್ತೆ ಗಗನಕ್ಕೇರಿದ ಪೆಟ್ರೋಲ್ ದರ, ತೈಲೋತ್ಪನ್ನಗಳ ಇಂದಿನ ದರ ಇಲ್ಲಿದೆ!

ಕಳೆದೊಂದು ವಾರದಿಂದ ಆಗಸದತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಭಾನುವಾರ ಮತ್ತೆ ಏರಿಕೆ ಕಂಡಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 23 ಪೈಸೆ ಮತ್ತು ಡೀಸೆಲ್ ದರದಲ್ಲಿ 29 ಪೈಸೆ ಹೆಚ್ಚಳವಾಗಿದೆ.

Published: 20th January 2019 12:00 PM  |   Last Updated: 20th January 2019 12:54 PM   |  A+A-


No respite for citizens as fuel prices continue to rise, here is new price list

ಸಂಗ್ರಹ ಚಿತ್ರ

Posted By : SVN SVN
Source : PTI
ಮುಂಬೈ: ಕಳೆದೊಂದು ವಾರದಿಂದ ಆಗಸದತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಭಾನುವಾರ ಮತ್ತೆ ಏರಿಕೆ ಕಂಡಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 23 ಪೈಸೆ ಮತ್ತು ಡೀಸೆಲ್ ದರದಲ್ಲಿ 29 ಪೈಸೆ ಹೆಚ್ಚಳವಾಗಿದೆ.

ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಭಾನುವಾರವೂ ತೈಲೋತ್ಪನ್ನಗಳ ದರ ಬಗಲಾವಣೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 23 ಪೈಸೆ ಮತ್ತು ಡೀಸೆಲ್ ದರದಲ್ಲಿ 29 ಪೈಸೆ ಹೆಚ್ಚಳವಾಗಿದೆ. ಆ ಮೂಲಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್ ಗೆ ರೂ 73.05ಗೆ ಏರಿಕೆಯಾಗಿದ್ದು. ಡೀಸೆಲ್‌ ದರ 67.30 ರೂ.ಗೆ ಏರಿಕೆಯಾಗಿದೆ.

ಇನ್ನು ರಾಷ್ಟ್ರ ರಾಜಧಾನಿ ದೆಹಲಿ ಲೀಟರ್‌ ಪೆಟ್ರೋಲ್‌ ದರ 70.72 ರೂ. ಮತ್ತು ಡೀಸೆಲ್‌ ದರ 65.16 ರೂಗೆ ಏರಿಕೆಯಾಗಿದೆ. 

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್‌ ದರ 73.41 ರೂ. ಮತ್ತು ಡೀಸೆಲ್‌ ದರ 68.83 ರೂಗೆ ಏರಿಕೆಯಾಗಿದೆ. ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಪೆಟ್ರೋಲ್‌ ದರ 72.82 ರೂ. ಮತ್ತು ಡೀಸೆಲ್‌ ದರ 66.93 ರೂ. ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್‌ ದರ 76.35 ರೂ. ಮತ್ತು ಡೀಸೆಲ್‌ ದರ 68.22 ರೂ. ಇದೆ. 

ಡಾಲರ್ ಎದುರು ರೂಪಾಯಿ ಮೌಲ್ಯ ಅಲ್ಪ ಪ್ರಮಾಣದಲ್ಲಿ ಕುಸಿದಿರುವುದೇ ತೈಲ ದರ ಏರಿಕೆಗೆ ಕಾರಣ ಎನ್ನಲಾಗಿದೆ. ಇನ್ನು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್ ಗೆ ರೂ. 3854ಕ್ಕೆ ತಲುಪಿದೆ.
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp