ಜಿಯೋ ಪೋನ್ ಬಳಕೆದಾರರಿಗೆ ಹೊಸ ದೀರ್ಘಾವಧಿ ವ್ಯಾಲಿಡಿಟಿ ಪ್ಲಾನ್ ಲಾಂಚ್!

ಜಿಯೋ ಫೋನ್ ಬಳಕೆದಾರರಿಗೆ ಜಿಯೋ ಹೊಸದಾಗಿ ಮಾನ್ ಸೂನ್ ಹಂಗಾಮ ಹೆಸರಿನಲ್ಲಿ ಎರಡು ದೀರ್ಘವಧಿಯ ಪ್ಲಾನ್‌ಗಳನ್ನು ಜಿಯೋ ಲಾಂಚ್ ಮಾಡಿದೆ.

Published: 24th January 2019 12:00 PM  |   Last Updated: 24th January 2019 04:33 AM   |  A+A-


JioPhone
Posted By : PSN PSN
Source : Online Desk
ಜಿಯೋ ಫೋನ್ ಬಳಕೆದಾರರಿಗೆ ಜಿಯೋ ಹೊಸದಾಗಿ ಮಾನ್ ಸೂನ್ ಹಂಗಾಮ ಹೆಸರಿನಲ್ಲಿ ಎರಡು ದೀರ್ಘವಧಿಯ ಪ್ಲಾನ್‌ಗಳನ್ನು ಜಿಯೋ ಲಾಂಚ್ ಮಾಡಿದೆ. ರೂ. 594 ಮತ್ತು ರೂ. 297ಕ್ಕೆ  ದೊರೆಯುವ ಪ್ಲಾನ್ ಗಳು ಬಳಕೆದಾರರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ.

ರೂ. 594 ಪ್ಲಾನ್‌ನಲ್ಲಿ ಜಿಯೋ ಫೋನ್ ಬಳಕೆದಾರರಿಗೆ ಅನ್ ಲಿಮಿಟೆಡ್ ಲೋಕಲ್ ಮತ್ತು ಎಸ್ ಟಿಡಿ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ, ಅಲ್ಲದೇ ನಿತ್ಯ 0.5 GB ಡೇಟಾ ವನ್ನು ಪಡೆದುಕೊಳ್ಳಬಹುದಾಗಿದೆ, ಇದು ಖಾಲಿಯಾದ ನಂತರದಲ್ಲಿ 64Kbps ವೇಗದಲ್ಲಿ ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. 168 ದಿನಗಳ ವ್ಯಾಲಿಡಿಟಿ ಹೊಂದಿದೆ, ಅಂದರೆ ಆರು ತಿಂಗಳ ವ್ಯಾಲಿಡಿಟಿ ದೊರೆಯಲಿದೆ. ಇದಲ್ಲದೇ ಬಳಕೆದಾರರಿಗೆ ಜಿಯೋ ಸೂಟ್ ಮತ್ತು 300 SMSಗಳನ್ನು ಕಳುಹಿಸುವ ಅವಕಾಶವನ್ನು ನೀಡಲಾಗಿದೆ.

ರೂ. 297ಕ್ಕೆ ಪ್ಲಾನ್‌ನಲ್ಲಿ ಜಿಯೋ ಫೋನ್ ಬಳಕೆದಾರರಿಗೆ ಅನ್ ಲಿಮಿಟೆಡ್ ಲೋಕಲ್ ಮತ್ತು ಎಸ್ ಟಿಡಿ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ, ಅಲ್ಲದೇ ನಿತ್ಯ 0.5 GB ಡೇಟಾ ವನ್ನು ಪಡೆದುಕೊಳ್ಳಬಹುದಾಗಿದೆ, ಇದು ಖಾಲಿಯಾದ ನಂತರದಲ್ಲಿ 64Kbps ವೇಗದಲ್ಲಿ ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. 84 ದಿನಗಳ ವ್ಯಾಲಿಡಿಟಿ ಹೊಂದಿದೆ, ಅಂದರೆ ಮೂರು ತಿಂಗಳ ವ್ಯಾಲಿಡಿಟಿ ದೊರೆಯಲಿದೆ. ಇದಲ್ಲದೇ ಬಳಕೆದಾರರಿಗೆ ಜಿಯೋ ಸೂಟ್ ಮತ್ತು 300 SMSಗಳನ್ನು ಕಳುಹಿಸುವ ಅವಕಾಶವನ್ನು ನೀಡಲಾಗಿದೆ.
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp